ಬಂಟ್ವಾಳ: ಬಿಸಿರೋಡಿನ ಪೆಟ್ರೋಲ್ ಬಂಕ್ ಒಂದರ ಮ್ಯಾನೇಜರ್ ಹೃದಯಘಾತದಿಂದ ಮಧ್ಯ ರಾತ್ರಿ ವೇಳೆ ಆಸ್ಪತ್ರೆಯಲ್ಲಿನಿಧನರಾಗಿದ್ದಾರೆ.
ಬಿಸಿರೋಡಿನ ಸರ್ಕಲ್ ಬಳಿಯಲ್ಲಿರುವ ಪೆಲತ್ತಿಮಾರ್ ನಿವಾಸಿ ಸಂಜೀವ ಅವರ ಪುತ್ರ ಪುರುಷೋತ್ತಮ ಪೂಜಾರಿ ( ಪರುಷಣ್ಣ) (45) ಮೃತಪಟ್ಟ ವ್ಯಕ್ತಿ.
ಕೃಷಿಕನಾಗಿದ್ದುಕೊಂಡು ಬಿಸಿರೋಡಿನ ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನ ಪುರುಷಣ್ಣ ಎಂದೇ ಹೆಸರುವಾಸಿಯಾದ ಇವರುಸಾಮಾಜಿಕ ಸೇವೆಯ ಮೂಲವೂ ಚಿರಪರಿಚಿತರಾಗಿದ್ದರು.ನೇರ ನಡೆ ನುಡಿಯ ವ್ಯಕ್ತಿಯಾಗಿದ್ದ ಇವರು ಬಿಸಿರೋಡಿನ ಗುರುಕೃಪಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ಮಾಡುತ್ತಿದ್ದರು.
ಶನಿವಾರ ರಾತ್ರಿ ವೇಳೆ ಸುಮಾರು 12 ಗಂಟೆಯ ವರೆಗೂ ಇವರು ಎಸ್. ಆರ್.ಗ್ರೂಪ್ ನಲ್ಲಿ ಮೆಸೇಜ್ ಚಾಟಿಂಗ್ ಮಾಡುತ್ತ ಇದ್ದಬಗ್ಗೆ ಅವರ ಸ್ನೇಹಿತ ಸದಾಶಿವ ಕೈಕಂಬ ನೆನಪಿಸಿಕೊಂಡರು. ರಾತ್ರಿ ಸುಮಾರು ಒಂದು ಗಂಟೆ ವೇಳೆ ಇವರಿಗೆ ಹೃದಯ ನೋವುಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಸಲಾಯಿತಾದರೂ ಚಿಕಿತ್ಸೆ ಗೆ ಸ್ಪಂದಿಸಿದೆ ಅವರು ಮೃತಪಟ್ಟ ಬಗ್ಗೆ ತಿಳಿದುಬಂದಿದೆ.