ಭಾವಪೂರ್ಣ ಶ್ರದ್ಧಾಂಜಲಿ
ಓರ್ವ ವ್ಯಕ್ತಿ ಜೀವಿತಾವಧಿಯಲ್ಲಿ ಎಲ್ಲರ ಜೊತೆ ಒಳ್ಳೆಯವರಾಗಿದ್ದು, ಒಳ್ಳೆಯ ಕೆಲಸಗಳನ್ನೇ ನೆಚ್ಚಿಕೊಂಡು ಬದುಕಿದರೆ ಮಾತ್ರಅವರು ಗತಿಸಿದ ಮೇಲೂ ಆಪ್ತೇಷ್ಟರ ಮನಸ್ಸಿನಲ್ಲಿ ಚಿರಕಾಲ ಉಳಿಯಬಲ್ಲರು ಎಂಬುದಕ್ಕೆ ಬಿ. ಯಶವಂತ ಸುವರ್ಣರು ಸಾಕ್ಷಿಯಾಗುತ್ತಾರೆ. ಅವರ ಅಗಲಿಕೆ ಮುಂಬೈಯ ತುಳು ಕನ್ನಡಿಗರಿಗೆ ಅತೀವ ನೋವು ತಂದಿದೆ.
ಹಿತಮಿತವಾದ ಮಾತು, ಆ ಮಾತಿನಲ್ಲಿ ಅದಮ್ಯವಾದ ಪ್ರೀತಿ, ಸೌಮ್ಯತೆ, ಮಂದಹಾಸ ತುಂಬಿದ ಮುಖಭಾವದಲ್ಲಿ ಸ್ನೇಹ ಸಹಕಾರದಮನೋಭಾವ, ಸಮಾಜಪರ ಕಾಳಜಿ, ನಿಸ್ವಾರ್ಥವಾದ ಸಮಾಜ ಸೇವೆ ಹೀಗೆ ಎಲ್ಲರಿಗೂ ಬೇಕಾದವರಾಗಿ, ಬಹುಜನಪ್ರಿಯರಾಗಿಬಾಳಿದವರು ನಮ್ಮ ಯಶವಂತ ಸುವರ್ಣರು
ಹಿಂದೆ ಎರಡು ಮೂರು ಬಾರಿ ಡೊಂಬಿವಲಿ ಬಿಲ್ಲವರ ಸ್ಥಳೀಯ ಕಛೇರಿಯಲ್ಲಿ ಭೇಟಿಯಾದಾಗ ಅವರು ನನ್ನ ಜೊತೆ ಪ್ರೀತಿಯಿಂದಆಡಿದ ಪ್ರೋತ್ಸಾಹದ ನುಡಿಗಳು, ನನ್ನನ್ನು ಆದರಿಸಿದ ರೀತಿ ಇಂದಿಗೂ ನನ್ನ ಮನಸ್ಸಿನಲ್ಲಿ ಮಾಸದೆ ಉಳಿದಿದೆ.
ಡೊoಬಿವಿಲಿ ಕರ್ನಾಟಕ ಸಂಘದ ವಿವಿಧ ಹುದ್ದೆಗಳಲ್ಲಿದ್ದು, ಸಂಘದ ಏಳಿಗೆಗೆ ಸದಾ ದುಡಿಯುತ್ತಿದ್ದ ಸಜ್ಜನ ಬಂಧುವಾಗಿ, ಬಿಲ್ಲವಸಮಾಜದ ನಾಯಕರಾಗಿ, ಸಮಾಜ ಸೇವಕರಾಗಿದ್ದ ನಮ್ಮೆಲ್ಲರ ಅಚ್ಚುಮೆಚ್ಚಿನ ಹಿರಿಯ ಚೇತನ ಬಿ. ಯಶವಂತ ಸುವರ್ಣರವರು ಇಂದು ದೇವರ ಪಾದ ಸೇರಿದರು. ಅವರ ದಿವ್ಯ ಚೇತನಕ್ಕೆ ಚಿರಶಾಂತಿ ದೊರೆಯಲಿ
✍ ಅನಿತಾ ಪಿ.ತಾಕೊಡೆ