TOP STORIES:

FOLLOW US

ಬೆನ್ನು ನೋವು ಇದೆಯಾ ಹಾಗದರೆ ಈ ಸ್ಟೋರಿ ಓದಿ


ಇತ್ತೀಚೆಗಿನ ನಮ್ಮ ದೈನಂದಿನ ಚಟುವಟಿಕೆಗಳು ದೇಹವನ್ನು ನಾನಾ ರೀತಿಯಲ್ಲಿ ಕಾಡುತ್ತದೆ. ಅದರಲ್ಲಿ ಬೆನ್ನು ನೋವು ಕೂಡ ಒಂದಾಗಿದೆ. ಈ ಬೆನ್ನು ನೋವಿನಿಂದ ರಿಲ್ಯಾಕ್ಸ್ ಆಗಲು ನಾವು ಬಹಳಷ್ಟು ಸಲ ಹೆಣಗಾಡಬೇಕಾಗುತ್ತದೆ.

ಹೆಚ್ಚಿನವರು ಬೆನ್ನು ನೋವು ಕಾಡುವಾಗಲೆಲ್ಲ ನೋವು ನಿವಾರಕ ಮಾತ್ರೆ ಸೇವಿಸಿ ತಕ್ಷಣಕ್ಕೆ ಶಮನಗೊಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇದನ್ನೇ ಮುಂದುವರೆಸುವುದು ಆರೋಗ್ಯದ ದೃಷ್ಠಿಯಿಂದ ಮಾರಕ ಎಂಬುದನ್ನು ಮರೆಯಬಾರದು. ಹಾಗಾದರೆ ಬೆನ್ನು ನೋವು ಕಡಿಮೆ ಮಾಡಲು ಏನು ಮಾಡಬಹುದು ಎಂಬುದನ್ನು ನೋಡುವುದಾದರೆ ವ್ಯಾಯಾಮ ಬೆನ್ನು ನೋವು ತಡೆಗೆ ಸಹಕಾರಿ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಬೆನ್ನು ನೋವು ಕುಳಿತು, ಬಗ್ಗಿ ಕೆಲಸ ಮಾಡುವವರಲ್ಲಿ, ದೈಹಿಕ ಶ್ರಮದ ಕೆಲಸ ಮಾಡದವರಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಾತ್ರಿ ಮಲಗುವಾಗ ಇಲ್ಲದ ಬೆನ್ನುನೋವು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಕಾಣಿಸಿಕೊಳ್ಳಬಹುದು. ಬಹಳಷ್ಟು ಜನ ಏನೂ ಕೆಲಸ ಮಾಡದೆ ಮನೆಯಲ್ಲಿ ಕುಳಿತು ಸಮಯ ಕಳೆಯುವವರು ಕೆಲವೊಮ್ಮೆ ಬೆನ್ನು ನೋವಿನ ತೊಂದರೆ ಅನುಭವಿಸಬಹುದು.

ಬೆನ್ನು ನೋವನ್ನು ಶಮನಗೊಳಿಸಲು ಫಿಜಿಯೋಥೆರಪಿ ಸೇರಿದಂತೆ ಹಲವು ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಬೆನ್ನು ನೋವು ಬಂದ ಬಳಿಕ ಚಿಕಿತ್ಸೆ ಪಡೆಯುವ ಬದಲು ಬಾರದಂತೆ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಬೆನ್ನು ನೋವು ತಡೆಗೆ ಅನುಕೂಲವಾಗುವಂತೆ ಕೆಲವು ವ್ಯಾಯಾಮಗಳನ್ನು ಮಾಡುವುದು ಒಳ್ಳೆಯ ಅಭ್ಯಾಸವಾಗಿದೆ.

ಬೆನ್ನಿನ ಸ್ನಾಯು ದುರ್ಬಲವಾದರೆ ಬೆನ್ನು ನೋವು ಕಾಣಿಸುತ್ತದೆ. ಹೀಗಾಗಿ ಸ್ನಾಯುಗಳನ್ನು ಬಲಪಡಿಸುವ ಕೆಲಸವನ್ನು ವ್ಯಾಯಾಮದ ಮೂಲಕ ಮಾಡುವುದು ಅತಿ ಮುಖ್ಯವಾಗಿದೆ. ವೈದ್ಯರು ಶಿಫಾರಸ್ಸು ಮಾಡಿದ ಮೂರು ವ್ಯಾಯಾಮಗಳು ಮತ್ತು ಒಂದಷ್ಟು ಸಲಹೆಗಳು ಬಹುಶಃ ಬೆನ್ನು ನೋವಿನಿಂದ ಬಳಲುವವರಿಗೆ ಅಥವಾ ಬೆನ್ನು ನೋವು ಬಾರದಂತೆ ತಡೆಯುವವರಿಗೆ ಅನುಕೂಲವಾಗಲಿದೆ.

ವ್ಯಾಯಾಮ ಮಾಡುವವರು ಕಾಲುಗಳನ್ನು ನೇರವಾಗಿಸಿ ಅಂಗಾತ ಮಲಗಬೇಕು. ಕೈಗಳನ್ನು ಪಕ್ಕದಲ್ಲಿಟ್ಟುಕೊಳ್ಳಬೇಕು. ಆ ನಂತರ ಮಂಡಿಯನ್ನು ಮೇಲೆತ್ತುತ್ತಾ ನಿಧಾನವಾಗಿ ಎದೆಯ ಕಡೆಗೆ ತರಬೇಕು. ಹೀಗೆ ಹತ್ತು ಬಾರಿ ಮಾಡಬೇಕು.

ಎರಡನೆಯದರಲ್ಲಿ ಮಂಡಿಗಳನ್ನು ಮಡಚಿ, ಪಾದಗಳನ್ನು ನೆಲಕ್ಕೂರಬೇಕು ಆ ನಂತರ ಮಡಚಿದ ಟವೆಲ್ ಮೇಲೆ ತಲೆಯನ್ನಿಟ್ಟು ಅಂಗಾತವಾಗಿ ಮಲಗಿ ನಿಧಾನವಾಗಿ ಕೆಳಭಾಗವನ್ನು ಮೇಲಕ್ಕೆತ್ತಿ ಇಳಿಸಬೇಕು. ಹೀಗೆ ಕನಿಷ್ಟ ಹತ್ತು ಬಾರಿ ಮಾಡಬೇಕು.

ಮೂರನೆಯ ವ್ಯಾಯಾಮದಲ್ಲಿ ಕೈಗಳು ಪಕ್ಕಗಳಲ್ಲಿ ಸಡಿಲವಾಗಿ ನೇತಾಡುವಂತೆ ನೇರವಾಗಿ ನಿಂತುಕೊಳ್ಳಬೇಕು. ಆ ನಂತರ ಭುಜಗಳನ್ನು ಹಿಂದಕ್ಕೆ ಹಿಡಿಯಬೇಕು. ಬಳಿಕ ಸೊಂಟದಿಂದ ನಿಧಾನವಾಗಿ ಮುಂದೆ ಬಾಗುತ್ತಾ ತಲೆ ಮತ್ತು ಕೈಗಳು ಮುಂದಕ್ಕೆ ಬೀಳುವಂತೆ ಮಾಡುತ್ತಾ ಕಾಲುಬೆರಳುಗಳನ್ನು ಸ್ಪರ್ಶಿಸಬೇಕು. ಹೀಗೆ ಮಾಡುವಾಗ ಮಂಡಿಗಳು ಬಾಗದಂತೆ ನೋಡಿಕೊಳ್ಳಬೇಕು. ಇದನ್ನು ಕೂಡ ಹತ್ತು ಬಾರಿ ಮಾಡಬೇಕು.

ಈ ವ್ಯಾಯಾಮಗಳನ್ನು ಒಮ್ಮೆಗೆ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಪ್ರತಿದಿನವೂ ಒಂದೊಂದೇ ಹೆಚ್ಚಿಸುತ್ತಾ ಹತ್ತಕ್ಕೆ ಬಂದು ನಿಲ್ಲಿಸಬಹುದು. ಬಳಿಕ ಪ್ರತಿದಿನವೂ ಒಂದೊಂದನ್ನು ಹತ್ತತ್ತು ಬಾರಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ ಹೆಚ್ಚಿನವರು ಹಗುರವಾದ ಕೆಲಸಗಳನ್ನೇ ಮಾಡುತ್ತಿರುತ್ತಾರೆ. ಅಂತಹವರು ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಕಠಿಣ ಕೆಲಸಗಳನ್ನು ಮಾಡಿದಾಗ ಹಲವು ತೊಂದರೆಗಳನ್ನು ಎದುರಿಸುವುದು ಸಾಮಾನ್ಯ. ಆದ್ದರಿಂದ ಪ್ರತಿದಿನವೂ ಒಂದಲ್ಲ ಒಂದು ರೀತಿಯ ವ್ಯಾಯಾಮಗಳನ್ನು ಮಾಡುವ ಮೂಲಕ ದೇಹವನ್ನು ದಂಡಿಸಬೇಕು. ಒಂದಷ್ಟು ದೂರ ವಾಕಿಂಗ್ ಮಾಡುವುದು, ಯೋಗ, ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಇಲ್ಲದೆ ಹೋದರೆ ಕಾಯಿಲೆಗಳು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಅಟ್ಟಿಸಿಕೊಂಡು ಬರುವುದರಲ್ಲಿ ಸಂದೇಹವಿಲ್ಲ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »