ಮಂಗಳೂರು: ಮಂಗಳೂರಿನ ಬೊಂಡಂತ್ತಿಲ ಗ್ರಾಮದ ಸಂಜೀವ ಕೊಟ್ಯಾನ್ ಮತ್ತು ಯಶೋದ ದಂಪತಿಗಳ ಕೊನೆಯ ಪುತ್ರಿಯಾಗಿ 26/4/1993 ರಲ್ಲಿ ಜನಿಸಿದರು. ನಾಲ್ಕು ಸಹೋದರಿಯ ಪ್ರೀತಿಯ ತಂಗಿಯಾಗಿರುವ ಇವರದ್ದು ಚಿಕ್ಕ ಮತ್ತು ಚೊಕ್ಕದಾದ ಸಂಸಾರ.
ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆ ಬೊಂಡಂತ್ತಿಲ,ಪ್ರೌಢ ವಿದ್ಯಾಭ್ಯಾಸವನ್ನು ಸಂತ ಜೆರೋಸ ಬಾಲಕಿಯರ ಪ್ರೌಢಶಾಲೆ ಜೆಪ್ಪು ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು,ಕಾರ್ಸ್ರ್ಟಿಟ್ ಹಾಗೂ ಪದವಿಯನ್ನು ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಗೊಕಾರ್ಣಥೇಶ್ವರ ಕಾಲೇಜು,ಮಂಗಳೂರಿನಲ್ಲಿ ಮಾಡಿರುತ್ತಾರೆ.ಪ್ರಸ್ತುತ ಸ್ಪರ್ಶ್ ರಿಸ್ಕ್ ಮ್ಯಾನೇಜರ್ ಕಂಪೆನಿಯಲ್ಲಿ ಸ್ಟಾಪ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ…
ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಇವರು ಹಲವು ಪ್ರಶಸ್ತಿಗಳನ್ನು ತನ್ನಗಾಗಿಸಿದ್ದಾರೆ.ಓಟದಲ್ಲಿ ಮುಂದು ಇದ್ದ ಇವರು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದರೆ. ಹಲವು ಸಂಸ್ಥೆಗಳು ಏರ್ಪಡಿಸಿದ್ದ ಕ್ರೀಡೆಯಲ್ಲಿ ಭಾಗವಹಿಸಿದ ಇವರು ಪ್ರಶಸ್ತಿಗಳನ್ನು ಮುಡಿಗೆರಿಸಿ ಕೊಂಡಿದ್ದಾರೆ. ‘ಯುವವಾಹಿನಿ’ ನಡೆಸಿದ ‘ಕ್ರೀಡಾಕೂಟ-2020’ ರಲ್ಲಿ ಓಟದ ವಿಭಾಗದಲ್ಲಿ ವಿಜೇತರಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ..
ಕೇವಲ ಕ್ರೀಡ ಕ್ಷೇತ್ರದಲ್ಲಿ ಅಲ್ಲದೇ ಸಾಂಸ್ಕೃತಿಕ ಕ್ಷೇತ್ರದಲ್ಲು ತನ್ನ ಪ್ರತಿಭೆಯನ್ನು ಮುಂದುವರಿಸಿರುವ ಇವರು ಕಾಲೇಜಿನಲ್ಲಿ ಇರುವಾಗಲೇ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡವರು ಇವರು.ತನ್ನ ಅದ್ಭುತ ಸ್ವರದಿಂದ ಮನೆಮಾತಗಿರುವ ಇವರು ಹಲವು ಆಲ್ಬಮ್ ಸಾಂಗ್ ಗೆ ಧ್ವನಿ ಆಗಿದ್ದಾರೆ. ಇವರು ಮಾಡಿರುವ ಪ್ರಥಮ ಆಲ್ಬಮ್ ಸಾಂಗ್ನಲ್ಲೆ ಎಲ್ಲರ ಮೆಚ್ಚುಗೆ ಪಾತ್ರರಾದರು. *’ಕುಡ್ಲ ತುಳು ಕವರ್’* ಟೈಟಲ್ ನಲ್ಲಿ ಮೂಡಿಬಂದ *’ಮುಕ್ಕಬುಲಾ….ಮುಕ್ಕಬುಲಾ..’* ತಮಿಳು ಸಾಂಗ್ ಸೈಲಿಯ *’ಮೈಕಾಳ… ಕೊಡಿಯಾಳ…ಕುಡ್ಲ..’* ಎನ್ನುವ ತುಳು ಆಲ್ಬಮ್ ಸಾಂಗ್ ಗೆ ಧ್ವನಿಯಾಗಿ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ ಮತ್ತು ಈ ಆಲ್ಬಮ್ ಸಾಂಗ್ ಕೇವಲ ಒಂದು ದಿನದಲ್ಲಿ ಒಂದು ಲಕ್ಷಕ್ಕೂ ಮೀರಿ ವೀಕ್ಷಣೆಯಾಗಿರುವುದು ಇವರ ಗಾಯನಕ್ಕೆ ದೊಡ್ಡ ಹೆಜ್ಜೆಯನ್ನು ತಂದುಕೊಟ್ಟಿತ್ತು.ತದನಂತರ *’ಅಪ್ಪೆನ ಸಿರಿಪಾದ’* ತುಳು ಸ್ಟೇಟಸ್ ಸಾಂಗ್ ಮತ್ತು ಇತ್ತೀಚಿಗೆ ಬಿಡುಗಡೆಯಾದ *’Exam ಉಂಡೆ?’* ಎಂಬ ಆಲ್ಬಮ್ ಸಾಂಗ್ ಗೆ ಧ್ವನಿ ಆಗಿದ್ದಾರೆ. *’ಅಮ್ಮ ಕಟೀಲೇಶ್ವರಿ’…* ತುಳು ಭಕ್ತಿಗೀತೆ ಆಲ್ಬಮ್ ಸಾಂಗ್ ನಲ್ಲಿ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. *ಸ.ರಿ.ಗ.ಮ.ಪ ವಿಡಿಯೋ ಆಲ್ಬಮ್ ಅವಾರ್ಡ್ 2019* ರವರು ನಡೆಸಿದ ಸ್ಪರ್ಧೆಯಲ್ಲಿ *ಬೆಸ್ಟ್ ಫಿಮೇಲ್ ಸಿಂಗರ್* ಅವಾರ್ಡ್ ನ್ನು ಪಡೆದುಕೊಂಡಿರುವುದು ಇವರು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸ್ಪೂರ್ತಿಯಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ಗಾಯಕಿಯಾಗಿಯೂ ಹೊರಹೊಮ್ಮಿದ್ದಾರೆ. ಇಷ್ಟೇ ಅಲ್ಲದೆ *’ಮನಸ್ಸ್ ದ ಪಾತೆರ’* ಎನ್ನುವ ತುಳು ಕಿರುಚಿತ್ರದಲ್ಲಿ ಬಣ್ಣ ಹಚ್ಚಿ ನಟನೆ ಕ್ಷೇತ್ರದಲ್ಲು ತನ್ನನ್ನು ತಾನು ತೊಡಗಿಸಿಕೊಂಡು ಮುನ್ನುಗ್ಗುತ್ತಿರುವ ಬಹುಮುಖ ಪ್ರತಿಭೆ.
ನಿಮ್ಮೆಲ್ಲಾ ಕನಸು ನನಸಾಗಲಿ,ಸಾಧನೆಯ ಶಿಖರವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ,ನಿಮ್ಮ ಗಾಯನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ,ಸಾಧನೆಯ ಹಾದಿ ಸುಗಮವಾಗಲಿ,ಇನ್ನಷ್ಟು ಅವಕಾಶಗಳು ನಿಮ್ಮ ಮಡಿಲಿಗೆ ಸೇರಲಿ,ಪ್ರಶಸ್ತಿ ಪುರಸ್ಕಾರಗಳು ನಿಮಗೆ ಅರಸಿಬರಲಿ ಎನ್ನುವ ಶುಭಾಶಯಗಳೊಂದಿಗೆ,ಗಾಯನ ಲೋಕದಲ್ಲಿ ಇನ್ನೂ ಎತ್ತರದ ಸ್ಥಾನಕ್ಕೇರಲು ಈ ಪ್ರತಿಭೆಯನ್ನು ಹರಸಿ,ಹಾರೈಸಿ, ಆರ್ಶಿವಾದಿಸೋಣ ಎನ್ನುವ ಕೋರಿಕೆ.
Credits: ರಾಜೇಶ್ ಎಸ್ ಬಲ್ಯ