ನವದೆಹಲಿ: ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯ ಅಂಗವಾಗಿ ಪ್ರಧಾನಿ ಮೋದಿ ಅವರು ಬುಧವಾರ ಗೌರವ ಸಲ್ಲಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಪೂಜ್ಯ ಶ್ರೀ ನಾರಾಯಣ ಗುರುಗಳ ಜಯಂತಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಅವರ ಜೀವನ ಹಾಗೂ ಕೃತಿಗಳು, ಆಧ್ಯಾತ್ಮಿಕತೆ ಮತ್ತು ಸಾಮಾಜಿ ಸುಧಾರಣೆಯ ಪರಿಪೂರ್ಣವಾದ ಮಿಶ್ರಣವಾಗಿದೆ. ಅವರು ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಒತ್ತು ನೋಡಿದ್ದರು. ಅವರು ದೂರದೃಷ್ಠಿಯ ದಾರ್ಶನಿಕಾರಿಗಿದ್ದರು. ಅವರ ಆದರ್ಶಗಳು ದೇಶದ ಜನರಿಗೆ ಚೈತನ್ಯ ನೀಡುತ್ತದೆ ಎಂದು ಹೇಳಿದ್ದಾರೆ.
ಶ್ರೀ ನಾರಾಯಣ ಗುರು ಅವರು ಕೇರಳದಲ್ಲಿ ಜನಿಸಿದ್ದು, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟಿದ್ದು, ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹೋರಾಡಿದ್ದರು.