ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಸದ್ಗುರು ಶ್ರೀಶ್ರೀಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶಿಷ್ಯವರ್ಗದಿಂದ ಭತ್ತದ ನಾಟಿ ಕೃಷಿ ಕೆಲಸ ನಡೆಯಿತು.
ದಕ್ಷಿಣ ಭಾರತದ ಅಯೋಧ್ಯೆ ಎಂದೇ ಖ್ಯಾತಿ ಪಡೆದಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀಶ್ರೀಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಗುರುದೇವ ಮಠದಲ್ಲಿ ಶಿಷ್ಯವರ್ಗದೊಂದಿಗೆ ಭತ್ತದ ನಾಟಿ ಕೃಷಿ ಕೆಲಸ ನಡೆಸಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವ ಸಲುವಾಗಿ ತಾವೇ ಹೊಲದಲ್ಲಿ ಕೃಷಿಯ ಕೆಲಸ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ 1ರಿಂದ 10ನೇ ತರಗತಿವರೆಗೆ ಉಚಿತ ವಸತಿ ಶಿಕ್ಷಣ, ಶಾಲೆಯಲ್ಲಿ ಭಗವದ್ಗೀತೆ ಬೋಧನೆಯಂತಹ ಉತ್ತಮ ಕಾರ್ಯ ನಡೆಸುತ್ತಾ ಬಂದಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ. ಸದಾ ಸಮಾಜಮುಖಿಯಾಗಿ ಚಿಂತನೆ ಮಾಡುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದು ಸಮಸ್ತ ತುಳುನಾಡಿನ ಹೆಮ್ಮೆ ಎನಿಸಿಕೊಂಡಿದ್ದಾರೆ.