ತಾನು, ತನ್ನದು ಎಂಬ ಅಹಮಿಕೆಯ ತವಕದಲಿ ಪ್ರಚಾರದ ಪ್ರಕಾರದಲ್ಲಿ ಇರುವ ಮನಸುಗಳ ಮಧ್ಯೆ ಒಂದು ದಿನದ ಸಮಾಜಸೇವೆಯನ್ನು ದಿನನಿತ್ಯ ಭಿತ್ತರಿಸುವ ಜಾಯಮಾನದ ಜನರ ನಡುವೆ ತನಗೆ ದೊರೆವ ಸ್ವಲ್ಪ ಸಂಬಳದಲ್ಲಿ ಪ್ರತಿದಿನವು ಪಕ್ಷಿಗಳಿಗೆ ಮೂರು ಹೊತ್ತು ಆಹಾರವ ಒದಗಿಸುವ ಅಪರೂಪದ ವ್ಯಕ್ತಿ ಗಣೇಶ್ ಕುತ್ತಾರ್.
ಕೆ.ಪಿ.ಟಿ ಬಳಿಯ ಸಪ್ತಗಿರಿ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ತನ್ನ ಅವಿಭಾಜ್ಯ ಕರ್ತವ್ಯವೆಂಬಂತೆ ತಾನು ರಜೆಯಲ್ಲಿದ್ದರೂ ಒಂದು ದಿನವೂ ಪಾರಿವಾಳಗಳಿಗೆ ಆಹಾರ ನೀಡುವಿಕೆಯನ್ನು ತಪ್ಪಿಸಿದವರಲ್ಲ. ಕಳೆದ 8 ತಿಂಗಳಿಂದ ಈ ಕಾಯಕವ ಮಾಡುತ್ತಿದ್ದಾರೆ. ಬೇರೆ ಯಾರು ಆಹಾರ ಹಾಕಿದರೂ ಬಾರದ ಪಾರಿವಾಳಗಳು ಗಣೇಶ್ ರವರು ಬಂದ ಕೂಡಲೇ ಬರುತ್ತವೆ. ಇವರ ತೆರೆಮರೆಯ ಪಕ್ಷಿ ಪ್ರೀತಿ ಹೀಗೆಯೇ ಮುಂದುವರಿಯಲಿ.