ಮಂಗಳೂರು ದಕ್ಷಿಣ ಕ್ಷೇತ್ರದ ರಾಜಕೀಯ ರಂಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಕಡೆಯಿಂದಲೇ ಅಚ್ಚರಿಯಬೆಳವಣಿಗಳು ದಾಖಲಾಗುತ್ತಿವೆ. ಟಿಕೆಟ್ ಸಿಗದಿದ್ದರೆ ಪಕ್ಷೇತರಳಾಗಿ ಸ್ಪರ್ಧಿಸುವ ಬಗ್ಗೆ ಮಾಜಿ ಮೇಯರ್ ಒಬ್ಬರು ನಿನ್ನೆ ಮನದಇಂಗಿತ ವ್ಯಕ್ತಪಡಿಸಿದ್ದರು. ಇಂದು ಯುವ ವಕೀಲ, ಸಾಮಾಜಿಕ ಧುರೀಣ ಪದ್ಮರಾಜ್ ಆರ್. ಅವರನ್ನು ಸ್ಪರ್ದಿಸುವಂತೆ ಅವರಹಿತೈಷಿಗಳು ಹಾಗೂ ಅಭಿಮಾನಿಗಳಿಂದ ವ್ಯಾಪಕ ಒತ್ತಾಯ ಕೇಳಿ ಬಂದಿದೆ.
ಪದ್ಮರಾಜ್ ಅವರು ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುವಂತೆ ಅರ್ಜಿಯೇನೂ ಹಾಕಿಲ್ಲ. ಹಾಗೆಂತಅವರು ನಿಷ್ಠಾವಂತ ಕಾಂಗ್ರೆಸಿಗನೇ ಆಗಿದ್ದಾರೆ. ಪದ್ಮರಾಜ್ ಅವರ ಹಿತೈಷಿಗಳಿಗೆ ಅವರು ಸ್ಪರ್ಧಿಸಬೇಕೆಂಬ ಆಸೆ ಇತ್ತು. ರಾಜ್ಯಮಟ್ಟದನಾಯಕರು ಕೂಡ ಇದಕ್ಕೆ ಬೆಂಬಲವಾಗಿ ನಿಂತಿದ್ದರು. ಸರ್ವೇ ವರದಿಗಳು ಕೂಡ ಪದ್ಮರಾಜ್ ಅವರ ಪರವಾಗಿಯೇ ಬಂದಿತ್ತು. ಹೆಚ್ಚುಕಡಿಮೆ ಪದ್ಮರಾಜ್ ಅವರ ಹೆಸರು ಮಂಗಳೂರು ದಕ್ಷಿಣಕ್ಕೆ ಫೈನಲ್ ಎಂಬ ಸ್ಥಿತಿಯಲ್ಲಿತ್ತು.