ಮಂಗಳೂರು : ಜ. 20 : ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ “BSWT” ವರ್ಷದ ವ್ಯಕ್ತಿ ಪ್ರಶಸ್ತಿಗೆ ಚಿತ್ರ ನಟ ಅರವಿಂದ್ಬೋಳಾರ್ ರವರು ಆಯ್ಕೆಯಾಗಿದ್ದಾರೆ. ಅರವಿಂದ್ ಬೋಳಾರ್ ಅವರು ತುಳು ನಾಟಕ. ಚಲನಚಿತ್ರ ಮತ್ತು ಯಕ್ಷಗಾನ ರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡ, ಕೊಂಕಣಿ, ಮಲೆಯಾಳಂ ಭಾಷಾ ಸಿನಿಮಾದಲ್ಲಿ ಅಭಿನಯಿಸುತ್ತಾ ಬ್ಯಾರಿ ಭಾಷಾಪಾತ್ರದಲ್ಲಿಯೂ ಸೈ ಎನಿಸಿಕೊಂಡವರು.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಎಂಬಲ್ಲಿ ತಂದೆ ಕೃಷ್ಣಪ್ಪ ಮತ್ತು ತಾಯಿ ಸುಂದರಿಯವರ ಮಗನಾಗಿ ಜನಿಸಿದಇವರು ತುಳು ನಾಟಕ ಕಲಾವಿದನಾಗಿ ಸಾಂಸ್ಕೃತಿಕ ರಂಗ ಪ್ರವೇಶಿಸಿದರು. ಹಾಗೂ ತುಳು ಚಲನಚಿತ್ರ ರಂಗದ ಪ್ರಮುಖಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕಾಮಿಕ್ ಟೈಮಿಂಗ್ ಮತ್ತು ಪಂಚಿಂಗ್ ಡೈಲಾಗ್ ಗಳಿಂದ ಅವರು ಕರಾವಳಿನಾಟಕ ಉದ್ಯಮದಲ್ಲಿ ಮತ್ತು ತುಳು ಚಿತ್ರರಂಗದಲ್ಲಿ ತಮ್ಮದೇ ಆದ ಸಹಿಯನ್ನು ರಚಿಸಿಕೊಂಡಿರುವ ಇವರಿಗೆ ಕನ್ನಡ ರಾಜ್ಯೋತ್ಸವಪ್ರಶಸ್ತಿಯ ಜೊತೆಗೆ “ಸಾಧನೆ ಶಾರದಾರ್” ಮತ್ತು“ತುಳುವ ಮಾಣಿಕ್ಯ” ಎಂಬ ಬಿರುದು ಗಳಿಸಿದ್ದಾರೆ ಅದಲ್ಲದೆ ವಿವಿಧ ಸಂಘಸಂಸ್ಥೆಗಳ ವತಿಯಿಂದ ೫00ಕ್ಕೂ ಹೆಚ್ಚು ಗೌರವ ಸಂದಿವೆ.
ದೈಜಿವಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ವಾಲ್ಡರ್ ನಂದಳಿಕೆ ಅವರೊಂದಿಗೆ ಜೋಡಿಯಾಗಿ, ಸಾಮಾನ್ಯ ಜನರನೋವಗಳನ್ನು ಅರಿತು ಅವರಂತೆ ಪಾತ್ರಾಭಿನಯಿಸಿ ದೈಜಿವಲ್ಡ್ ಟಿವಿ ಶೋ ” ಪ್ರೈವೇಟ್ ಚಾಲೆಂಜ್” ಎಂಬ ಹೊಸ ಪ್ರಯೋಗದಮುಖಾಂತರ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾದಬೆಳವಣಿಗೆಯಾಗಿ ಗುರುತಿಸಲಾಗಿದ್ದು ಸಮಾಜದ ಕಣ್ಣು ತೆರೆಯಿತು.
ಅವರ ಸಾಮಾಜಿಕ ಬದ್ಧತೆಯನ್ನು ಪರಿಗಣಿಸಿ ಭಾರತ್ ಸೋಶಿಯಲ್ ಅಂಡ್ ವೆಲ್ಫೇರ್ ಟ್ರಸ್ಟ್ ಅವರನ್ನು ವರ್ಷದ ವ್ಯಕ್ತಿಯಾಗಿಆಯ್ಕೆ ಮಾಡಿದೆ. ಭಾರತ್ ಸೋಶಿಯಲ್ ಅಂಡ್ ವೆಲ್ಫೇರ್ ಟ್ರಸ್ಟ್ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಈ ಮೂರು ಕೇಂದ್ರೀಯವಿಷಯಗಳಲ್ಲಿ ಕಳೆದ ಎಂಟು ವರ್ಷಗಳಿಂದ ಕರ್ನಾಟಕದಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಪ್ರತಿ ವರ್ಷನೂರೈವತ್ತು ಅರ್ಹ ಬಡಾ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ಪ್ರಸಕ್ತ ವರ್ಷದ ವಿದ್ಯಾರ್ಥಿ ವೇತನ ವಿತರಣಾಕಾರ್ಯಕ್ರಮ ಜನವರಿ 26-2023 ರಂದು ಸಂಜೆ 3.00 ಗಂಟೆಗೆ ಸರಿಯಾಗಿ ಸಹೋದಯ ಸಭಾಂಗಣ ಬಲ್ಮಟ್ಟ ಮಂಗಳೂರು ಇಲ್ಲಿನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅರವಿಂದ್ ಬೋಳಾರ್ ಅವರಿಗೆ “ವರ್ಷದ ವ್ಯಕ್ತಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದುಟ್ರಸ್ಟ್ ನ್ ಪ್ರಧಾನ ಕಾರ್ಯದರ್ಶಿ ಆಕಿಫ್ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.