ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಅವಧಿ ಮಾರ್ಚ್ 2ರಂದು ಮುಕ್ತಾಯವಾಗಲಿದ್ದು ಮುಂದಿನ ಮೇಯರ್ ಸ್ಥಾನಯಾರಿಗೆ ಒಲಿಯಲಿದೆ ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ.
ಪಾಲಿಕೆ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಹಿಡಿದ ಮೇಲೆ ಮೊದಲನೇ ಅವಧಿಗೆ ದಿವಾಕರ ಪಾಂಡೇಶ್ವರ ಅವರು ಮೇಯರ್ ಆದರೆ೨ನೇ ಅವಧಿಗೆ ಬಂಟ ಸಮುದಾಯದ ಪ್ರೇಮಾನಂದ ಶೆಟ್ಟಿ ಅಧಿಕಾರ ನಡೆಸುತ್ತಿದ್ದಾರೆ. ಆರಂಭದಲ್ಲಿ ೨ ಮೇಯರ್ ಸ್ಥಾನಗಳುಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಾದರೆ ಈ ಬಾರಿ ಮೇಯರ್ ಸ್ಥಾನ ಅರ್ಹವಾಗಿಯೇ ಮಂಗಳೂರು ನಗರಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಿಗಬೇಕಿದೆ. ಕಳೆದ ಬಾರಿ ಮೇಯರ್ ಸ್ಥಾನ ಬಂಟ ಸಮುದಾಯಕ್ಕೆ ದೊರೆತು ಅದರಂತೆ ಪ್ರೇಮಾನಂದಶೆಟ್ಟಿ ಆ ಸ್ಥಾನ ಅಲಂಕರಿಸಿದರು. ಈ ಬಾರಿ ಮೇಯರ್ ಸ್ಥಾನ ನ್ಯಾಯವಾಗಿ ಬಿಲ್ಲವ ಸಮಾಜದ ಮುಖಂಡರಿಗೆ ಸಿಗಬೇಕಿದೆ. ೨೦೨೩ರ ಚುನಾವಣಾ ದೃಷ್ಟಿಯಿಂದ ಬಿಲ್ಲವ ಮತಗಳನ್ನು ಸೆಳೆಯಲೂ ಇದು ಸಹಕಾರಿಯಾಗಬಹುದು. ಉತ್ತರ ವಿಧಾನಸಭಾಕ್ಷೇತ್ರದಲ್ಲಿ ಹಲವು ಬಿಲ್ಲವ ಮುಖಂಡರು ಪಾಲಿಕೆ ಸದಸ್ಯರಾಗಿದ್ದರೂ ಪಾಲಿಕೆಯ ಹಿರಿಯ ಸದಸ್ಯ ಜಯಾನಂದ ಅಂಚನ್ಮುಂಚೂಣಿಯಲ್ಲಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ ೨ ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ಇವರು ಯಾವುದೇ ಅಧಿಕಾರಕ್ಕಾಗಿ ಲಾಬಿನಡೆಸಿದವರಲ್ಲ. ಯಾವುದೇ ಸ್ಥಾಯಿ ಸಮಿತಿಯಲ್ಲೂ ಸ್ಥಾನಕ್ಕಾಗಿ ಆಸೆ ಪಟ್ಟವರಲ್ಲ. ಮಂಗಳೂರು ಮಹಾನಗರ ಪಾಲಿಕೆಯ ೨೨ನೇಕದ್ರಿ ಪದವು ವಾರ್ಡ್ನ ಸದಸ್ಯರಾಗಿ ಆಯ್ಕೆಯಾದ ಬಳಿಕ ತಮ್ಮ ವಾರ್ಡ್ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆ ಮೂಲಕಎಲ್ಲರ ಮೆಚ್ಚುಗೆಗೂ ಜಯಾನಂದ ಅಂಚನ್ ಪಾತ್ರರಾಗಿದ್ದಾರೆ. ವಾರ್ಡ್ನಲ್ಲಿನ ಜನರಿಗೆ ಯಾವುದೇ ಸಮಸ್ಯೆ ಬಂದರೂ ಸೂಕ್ತರೀತಿಯಲ್ಲಿ ಸ್ಪಂದಿಸಿ ಪರಿಹಾರ ಕಲ್ಪಿಸುವ ನಾಯಕತ್ವ ಗುಣ ಜಯಾನಂದ ಅಂಚನ್ ಅವರಿಗಿದೆ. ಜನರಿಂದ ಜನರಿಗಾಗಿ ಎಂಬನಾಯಕತ್ವ ಗುಣ ಹೊಂದಿರುವ, ಪಕ್ಷದ ತತ್ವ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಜಯಾನಂದ ಅಂಚನ್ ಅವರೇ ಈ ಬಾರಿ ಮೇಯರ್ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬಿಜೆಪಿ ಮುಖಂಡರು ಜಯಾನಂದ ಅಂಚನ್ ಅವರಿಗೆ ಮೇಯರ್ ಸ್ಥಾನ ನೀಡುವ ಮೂಲಕ ಪಕ್ಷದಲ್ಲಿ ನಂಬಿಕಸ್ಥ ಸದಸ್ಯರಿಗೆಸ್ಥಾನಮಾನ ನೀಡುತ್ತದೆ ಎಂಬುದನ್ನು ಈ ಬಾರಿ ನಿರೂಪಿಸಬೇಕಿದೆ. ಬಿಲ್ಲವ ಸಮುದಾಯದ ಮುಖಂಡರಿಗೆ ಈ ಬಾರಿ ಮೇಯರ್ಸ್ಥಾನ ನೀಡದೇ ಹೋದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಲ್ಲವರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಬಿಲ್ಲವರಿಗೆನಾಯಕತ್ವ ಗುಣ ಇದೆ ಎಂಬುದನ್ನು ಬಿಜೆಪಿ ಒಪ್ಪಿ ಅವರಿಗೂ ಸೂಕ್ತ ಸ್ಥಾನಮಾನ ನೀಡಬೇಕಿದೆ.