ಬಾರಿನ ಸಿಬ್ಬಂದಿಗಳೆಂದರೆ ಬರೀ ಸರಾಯಿಯನ್ನು ಮಾರುವವರು ಮಾತ್ರವಲ್ಲ ಮಾನವತೆಯನ್ನು ಮೆರೆಯುವರು ಎಂದುಕುಂದಾಪುರ ತಾಲ್ಲೂಕಿನ ಕೊರ್ಗಿ ಗ್ರಾಮದ ಚಾರು ಕೊಟ್ಟಿಗೆ ಅರ್ಚನಾ ಬಾರ್ ನ ಸಿಬ್ಬಂದಿಗಳು ಮಾಡಿ ತೋರಿಸಿದ್ದಾರೆ….
ನಿನ್ನೆ ದಿನ ಚಾರ್ ಕೊಟ್ಟಿಗೆ ಬಾರಿನ ವಿಶು ಅಣ್ಣ ( ವಿಶ್ವನಾಥ ಪೂಜಾರಿ) ರಾತ್ರಿ ಸರಿ ಸುಮಾರು 2 ಗಂಟೆ ಹೊತ್ತಿಗೆ ಬಾರಿನ ತನ್ನೆಲ್ಲಲೆಕ್ಕಾಚಾರವನ್ನು ಪೂರೈಸಿಕೊಂಡು ಸಿಬ್ಬಂದಿಗಳೊಂದಿಗೆ ಮನೆಗೆ ತೆರಳುತ್ತಿರುವಾಗ ದಬ್ಬೆಕಟ್ಟೆ ತೆಕ್ಕಟ್ಟೆ ರೋಡಿನಲ್ಲಿ ಆರು ವರ್ಷದ ಹೆಣ್ಣು ಮಗು ಒಂದು ಬಟ್ಟೆ ಇಲ್ಲದೆ ಸ್ವಾಮಿ ಕೊರಗಜ್ಜನ ನಾಮಫಲಕದ ಕೆಳಗೆ ನಿಂತಿರುತ್ತದೆ… ಅಚಾನಕ್ಕಾಗಿ ಆ ಹುಡುಗಿಯನ್ನುನೋಡಿದ ವಿಶು ಅಣ್ಣ ಒಂದು ಕ್ಷಣ ದಂಗಾಗಿ ಹೋಗುತ್ತಾರೆ ಈ ಹೊತ್ತಿನಲ್ಲಿ ಒಂಟಿ ಮಗು ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದುಆಲೋಚಿಸಿ ಪ್ರತಿಯೊಂದು ಚಿತ್ರಣವನ್ನು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡು ಮಗುವಿನ ರಕ್ಷಣೆಗೆ ದಾವಿಸುತ್ತಾರೆ… ನಂತರಮಗುವಿನ ಹತ್ತಿರ ಮಗುವಿನ ಪೂರ್ವ ಪರ ವನ್ನು ವಿಚಾರಿಸಿ ಮಗುವನ್ನ ಅವರ ಮನೆಗೆ ತಲುಪಿಸಿರುತ್ತಾರೆ… ತಾನು ಹೋಗುವ ದಾರಿಯಲ್ಲಿ ನೋಡಿದ ಮಗುವನ್ನು ನಮಗೇಕೆ ಎಂದು ಅಲ್ಲೇ ಬಿಟ್ಟು ಹೋಗಿದ್ದರೆ? ಊಹಿಸಲು ಅಸಾಧ್ಯ ….
ಮಕ್ಕಳಿಲ್ಲವೆಂದು ಕೊರಗುವ ಈ ಕಾಲದಲ್ಲಿ ಮುದ್ದಾದ ಮಗುವನ್ನು ನೀಲಕ್ಷಿಸಿದ ತಂದೆ ತಾಯಿಗೆ ಏನೆನ್ನಬೇಕು?
ನಿಮ್ಮ ಕಾರ್ಯಕ್ಕೆ ದೊಡ್ಡ ಸಲಾಂ ವಿಶು ಅಣ್ಣ❤️