ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದ ಎರಡನೇ ದಿನವಾದ (ದಿನಾಂಕ : 18.10.2020) ಭಾನುವಾರದ ಸಾಂಸ್ಕೃತಿಕ ಕಾರ್ಯಕ್ರಮ ಮನಸೆಳೆಯಿತು.
ತನುಶ್ರೀ ಪಿತ್ರೋಡಿ ಉಡುಪಿ ಅವರಿಂದ ಯೋಗ ನೃತ್ಯ ಭರತನಾಟ, ಬೆಳ್ತಂಗಡಿಯ ಶ್ರೀಧರ ಪೂಜಾರಿ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಕುಳಾಯಿ ಕಲಾಕುಂಭ ಸಾಂಸ್ಕೃತಿಕ ವೇದಿಕೆಯಿಂದ ದೇಶದ ಸಂಸ್ಕೃತಿಯ ಪ್ರತಿಬಿಂಬ, ನಾಗೇಶ್ ಕುಲಾಲ್, ಕುಳಾಯಿ ನಿರ್ದೇಶನದಲ್ಲಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ನಿರೂಪಣೆಯಲ್ಲಿ ನೆರವೇರಿತು. ದಿನೇಶ್ ಸುವರ್ಣ ರಾಯಿ ವಂದಿಸಿದರು.