TOP STORIES:

FOLLOW US

ಮರಾಠಿ ಚಿತ್ರರಂಗಕ್ಕೆ ಲಗ್ಗೆ ಇಟ್ಟ ತುಳುನಾಡ ಯುವ ಪ್ರತಿಭೆ ಪುಣೆ ಸೂರ್ಯ ಪೂಜಾರಿ ಕಾರ್ಕಳ


ಮರಾಠಿ ಚಿತ್ರರಂಗಕ್ಕೆ ಲಗ್ಗೆ ಇಟ್ಟ ತುಳುನಾಡ ಯುವ ಪ್ರತಿಭೆ ಪುಣೆ ಸೂರ್ಯ ಪೂಜಾರಿ ಕಾರ್ಕಳ

ತುಳುನಾಡ ಸಂಸ್ಕೃತಿ ಕೌಟುಂಬಿಕ ನೆಲೆಗಟ್ಟು ಆಚಾರ ವಿಚಾರಗಳು ವಿಭಿನ್ನವಾದುದು ವಿಶಿಷ್ಟವಾದುದು ಅನನ್ಯವಾದುದು ಯಕ್ಷಗಾನ, ನಾಟಕ, ಕಂಬಳ, ದೈವರಾಧನೆ, ನಾಗರಾಧನೆ, ಪ್ರಕೃತಿಯಾರಾಧನೆಗಳ ದೈವೀಕತೆ ಇಂತಹ ವೈವಿಧ್ಯಮಯ ಸಂಸ್ಕೃತಿ ಸಂಸ್ಕಾರ ಹೊಂದಿದ ತುಳುವರು ಜೀವನೋಪಾಯಕ್ಕಾಗಿ ಮಹಾರಾಷ್ಟದ ಮಣ್ಣನ್ನು ಕರ್ಮಭೂಮಿಯನ್ನಾಗಿರಿಸಿಕೊಂಡರೂ ತವರೂರ ಮಣ್ಣಿನ ಸೊಗಡನ್ನು ಇಲ್ಲೂ ಬಿತ್ತರಿಸಿ ಮರಾಠಿ ಮಣ್ಣಿನಲ್ಲೂ ವೃತ್ತಿ ಉದ್ಯಮದ ಜೊತೆಗೆ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಮಾತ್ರವಲ್ಲದೆ ರಂಗಭೂಮಿ, ಚಿತ್ರರಂಗದಲ್ಲೂ ತನ್ನ ಛಾಪನ್ನು ಮೂಡಿಸಿ ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿದ್ದಾರೆ ಎನ್ನಲು ಹೆಮ್ಮೆ ಎನಿಸುತ್ತಿದೆ.
ಯಾವುದೇ ರಂಗದಲ್ಲಿ ಅಪಾರ ಸಾಧನೆ ಮಾಡಿ ಹೆಸರು ಗಿಟ್ಟಿಸಿಕೊಳ್ಳುವುದು ಸಾಮಾನ್ಯ ಮಾತೇನಲ್ಲ ಅದಕ್ಕಾಗಿ ಏಕಾಗ್ರತೆ ಕಠಿಣ ಪರಿಶ್ರಮ ಮುಖ್ಯ
ಈ ನಿಟ್ಟಿನಲ್ಲಿ ತನ್ನ ಸ್ವಯಂಪ್ರಯತ್ನದಿಂದ ಸಾಧನೆಯ ಹಾದಿಯಲ್ಲಿ ಯುವ ಉದ್ಯಮಿ ಮಾತ್ರವಲ್ಲದೆ ಸಂಘಟಕರಾಗಿ ಗುರುತಿಸಿಕೊಂಡಿರುವ ಮಹಾರಾಷ್ಟ್ರದ ಪುಣೆಯ ನಮ ತುಳುವೆರ್ ಸಂಘಟನೆಯ ರೂವಾರಿ ಸೂರ್ಯ ಪೂಜಾರಿ ಕಾರ್ಕಳ ಇವರು ಇದೀಗ
ಮರಾಠಿ ಚಿತ್ರರಂಗಕ್ಕೆ ಲಗ್ಗೆ ಇಟ್ಟಿದ್ದಾರೆ. ಇವರ ಕಲಾ ಬದುಕಿನ ವ್ಯಕ್ತಿ ಚಿತ್ರಣ ಇಲ್ಲಿದೆ.

ನಟನೆ ಎಂಬುದು ಸುಲಭದ ಮಾತಲ್ಲ ತನ್ನ ಪಾತ್ರಕ್ಕೆ ಅಗತ್ಯವಾದ ಭಾವನೆಗಳನ್ನು ತುಂಬುತ್ತಾ ತನ್ನ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದುಕೊಳ್ಳಬೇಕಾಗುತ್ತದೆ. ಹೀಗೆ ತನ್ನ ನಟನಾ ಸಾಮರ್ಥ್ಯ, ಕಠಿಣ ಪರಿಶ್ರಮದಿಂದ ಮಾತ್ರ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಳ್ಳಲು ಸಾಧ್ಯ.
ತನ್ನ ಅಭಿರುಚಿಯಿಂದ ಮಾರಾಠಿ ಚಿತ್ರರಂದಲ್ಲಿ ಅವಕಾಶಗಿಟ್ಟಿಸಿಕೊಂಡಿರುವ ಯುವ ಸಂಘಟಕ ನಮ ತುಳುವೆರ್ ಸಂಘಟನೆಯ ಸಂಸ್ಥಾಪಕ ಸೂರ್ಯ ಪೂಜಾರಿ ಕಾರ್ಕಳ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದ ಕಾರ್ಕಳದ ನಕ್ರೆ ಜಡ್ಡು ಮನೆ ಭೋಜ ಸಾಲ್ಯಾನ್ ಮತ್ತು ಸುನಂದ ದಂಪತಿಯ ಪುತ್ರನಾಗಿ ಜಗದ ಬೆಳಕ ಕಂಡವರು.
ಸೂರ್ಯ ಪೂಜಾರಿ ಇವರು ತನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಡಾ. ಶಂಕರ ಆಡ್ಯಂತಾಯ ಹಿ. ಪ್ರಾ. ಶಾಲೆ ಮಲ್ಲಾಯಬೆಟ್ಟು ಕಾರ್ಕಳ ಕಲ್ಯಾ ಇಲ್ಲಿ ಪೂರೈಸಿ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ನಿಟ್ಟೆ ಕಾಲೇಜಿನಲ್ಲಿ ಪೂರೈಸಿದರು. ಶಾಲಾ ದಿನಗಳಲ್ಲಿಯೇ ಕಲೆ, ಸಾಮಾಜಿಕ ಕಳಕಳಿ ಸಂಘಟನೆಯ ಗೀಳನ್ನು ಮೈಗೂಡಿಸಿಕೊಂಡು ವಿವಿಧ ಚಟುವಟಿಕೆಗಳಿಂದ ಸದಾ ವ್ಯಸ್ತವಾಗಿರುತ್ತಿದ್ದರು. ಕ್ರೀಡೆಯಲ್ಲೂ ಮುಂಚೂಣಿಯಲಿದ್ದ ಇವರು ಹಲವಾರು ಸ್ಪರ್ಧೆಗಳಲ್ಲಿ ಬಾಗವಹಿಸಿ ಬಹುಮಾನ ಪ್ರಶಸ್ತಿಗಳಿಗನ್ನು ತನ್ನ ಮುಡಿಗೇರಿಕೊಂಡಿದ್ದಾರೆ.
ಕಾಲೇಜು ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಇವರು ಭವಿಷ್ಯದ ಹಾದಿಗಾಗಿ ನೂರಾರು ಹೊಂಗಸನ್ನು ಹೊತ್ತು ಮಾಯನಗರಿ ಮುಂಬಯಿ ಸೇರಿದರು.ಇವರಲ್ಲಿ ನಾಯಕತ್ವದ ಗುಣ, ಪ್ರತಿಭೆ ಎಲ್ಲಾ ಇದ್ದರೂ ಇವರನ್ನು ಕೈಬೀಸಿ ಕರೆದದ್ದು ಮಾತ್ರ ಹೋಟೆಲ್ ವೃತ್ತಿ. ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಾ ಅದರ ಅನುಭವನ್ನು ಹೋಟೆಲ್ ಉದ್ಯಮಕ್ಕಾಗಿ ದಾರೆ ಎರೆದರು. ತದನಂತರ ಮುಂಬೈಯಿಂದ ಪುಣೆಯಲ್ಲಿ ಉದ್ಯಮವನ್ನು ನಿರ್ವಹಿಸುತ್ತಾ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಕೈಯಾಡಿಸಿದರು. ಕಲೆ, ಕಲಾವಿದರನ್ನು ಆದರದಿಂದ ಗೌರವಿಸುವ ಇವರು ದೇಹದಾರ್ಡ್ಯ ಪಟುವಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದರು. ಈತನ್ಮದ್ಯೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಹೊಸ ವೇದಿಕೆಯನ್ನು ನೀಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಫೆಸ್ಬುಕ್ ಪೇಜ್ ನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಕಿರುತೆರೆ, ಚಲನಚಿತ್ರ, ಹಾಗೂ ರೂಪದರ್ಶಿಗಳ ತೀರ್ಪಿನ ಮೇರೆಗೆ ವಿಜೇತರಿಗೆ ಬಹುಮಾನಗಳನ್ನು ತಲುಪಿಸುವ ವಿಶಿಷ್ಟ ಕಲಾ ಪ್ರೇಮ ಇವರದು. ಆದ್ದರಿಂದಲೇ ಸಾಮಾಜಿಕ ಜಾಲತಾಣದಲ್ಲಿ ದೇಶ ವಿದೇಶದೆಲ್ಲಡೆ ಸಹಸ್ರಾರು ಅಭಿಮಾನಗಳನ್ನು ಹೊಂದಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ.
ಉದ್ಯಮ, ಸಮಾಜಸೇವೆ ಕಲಾಸೇವೆಯ ತನ್ಮದ್ಯೆ ಹಲವು ನೋವು ನಲಿವುಗಳನ್ನು ಕಂಡರೂ ಸದಾ ನಗುಮೊಗದಿ ಸರಳ ಸಜ್ಜನಿಕೆಯೊಂದಿಗೆ ಪ್ರೀತಿಯಿಂದ ಬೆರೆಯುವ ಇವರ ವ್ಯಕ್ತಿತ್ವ ಹಾಗೂ ತುಳು ಭಾಷೆ ತುಳುನಾಡಿನ ಮೇಲಿರುವ ಅದಮ್ಯ ಪ್ರೀತಿ ಅಭಿಮಾನವೇ “ನಮ ತುಳುವೆರ್ ” ಸಂಘಟನೆಯ ಉದಯಕ್ಕೆ ಕಾರಣವಾಯಿತು ಎನ್ನಬಹುದು. ಭಾಷಾಭಿಮಾನಕ್ಕೆ ಎಲ್ಲಾದರೂ ಧಕ್ಕೆಯಾದಾಗ ಧ್ವನಿ ಎತ್ತಿ ಪ್ರತಿಭಟಿಸುವ ಇವರು
“ನಮ ತುಳುವೆರ್ ” ಸಂಘಟನೆಯ ಮುಖೇನ ಹಲವಾರು ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ನಿಸ್ವಾರ್ಥ ಮನೋಭಾವದಿಂದ ಹಲವಾರು ಉದಯೋನ್ಮುಖ ಪ್ರತಿಭೆಗಳಿಗೆ ಹೊಸ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಾರೆ.
ನಮ ತುಳುವೆರ್ ಸಂಘಟನೆಯ ಸಾರಥ್ಯದಲ್ಲಿ 2019ರಲ್ಲಿ ಪುಣೆ ನಗರಿಯಲ್ಲಿ ಪ್ರಪ್ರಥಮ ಬಾರಿಗೆ ಎನ್ನುವಂತೆ ಅವರ ಪರಿಕಲ್ಪನೆಯಲ್ಲಿ ಮಿಸ್ಟರ್ ಆಂಡ್ ಮಿಸ್ ಫೇಸ್ ಆಫ್ ತುಳುನಾಡು 2019 ಅನ್ನುವ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿ ಜನ ಮನ್ನಣೆಯನ್ನು ಪಡೆದುಕೊಂಡರು. ಈ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟದ ವಿವಿದೆಡೆಯಿಂದ ಸ್ಪರ್ದಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಅವರ ಸಾಂಸ್ಕೃತಿಕ ಲೋಕದಲ್ಲಿ ಹೊಸ ತಿರುವನ್ನು ಮೂಡಿಸಿತು. ವೃತ್ತಿ ಉದ್ಯಮದ ಜೊತೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡಿರುವ ಇವರು ಪುಣೆ ನಗರದಲ್ಲಿದ್ದುಕೊಂಡರೂ ಅಲ್ಲಿನ ಸ್ಥಳೀಯ ಗ್ರಾಮಸ್ಥರ ಸ್ನೇಹ ಸಂಪರ್ಕವನ್ನು ಬೆಳೆಸಿಕೊಂಡು ಕೃಷಿ ಬೇಸಾಯವನ್ನು ಮಾಡುತ್ತಾರೆ ಎನ್ನುವುದು ಸೋಜಿಗ.
ನಗರದ ವಿವಿಧ ಸಂಘ ಸಂಸ್ಥೆಗಳು ಸಾಮಾಜಿಕ ರಾಜಕೀಯ ಕ್ಷೇತ್ರದ ಗಣ್ಯರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು
ಸದಾ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ ಅವರಿಗೆ ಹೊಸ ವೇದಿಕೆಯನ್ನು ಕಲ್ಪಿಸುವ ಸೂರ್ಯ ಪೂಜಾರಿಯವರು ಹವ್ಯಾಸಕ್ಕಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿದ್ದರೂ ಕಿರುತೆರೆ, ಅಥವಾ ಚಿತ್ರರಂಗ ದಲ್ಲಿ ಅಭಿನಯಿಸುವ ಇರಾದೆಯನ್ನು ಹೊಂದಿರಲಿಲ್ಲ. ಚಿತ್ರರಂಗದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಭೆಯಿದ್ದರೂ ಅವಕಾಶಗಳು ಸಿಗುವುದು ಬಲು ವಿರಳ
ಆದರೆ ಇವರ ದೇಹ ಮೈಕಟ್ಟು ವಾಕ್ಚಾತುರ್ಯತೆ ನಟನೆಗೆ ಪೂರಕವಾಗಿ ಒಪ್ಪುತ್ತಿತ್ತು ಆದ್ದರಿಂದ
ಅಭಿನಯದ ಬಗ್ಗೆ ಅಪಾರ ಜ್ಞಾನ ಇಲ್ಲದಿದ್ದರೂ ಇವರಲ್ಲಿರುವ ಇಚ್ಚಾಶಕ್ತಿ ಮನೋಭಲವು ಅದಕ್ಕೆ ಸ್ಫೂರ್ತಿ ನೀಡಿತು.
ಈ ನಿಟ್ಟಿನಲ್ಲಿ ನೀತಾ ಜಾಧವ್ ನಿರ್ಮಾಪಕತ್ವದ
ಶ್ರೇಯಸ್ ಜಾಧವ್ ನಿರ್ದೇಶನದ “ಫಕಾಟ್” ಕಾಮಿಡಿ ಮರಾಠಿ ಚಲನಚಿತ್ರದಲ್ಲಿ ಖಳನಾಯಕನ ಪಾತ್ರದ ಮುಖೇನ ಅಭಿನಯಿಸಿ ಮರಾಠಿ ಚಿತ್ರರಂಗಕ್ಕೆ ಹೊಸ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ಪ್ರೇರಿತ ಕಥೆಯಾಧಾರಿತ ಆರಾಧ್ಯ ಮೋಷನ್ ಫಿಲಂಸ್ ಪ್ರಸ್ತುತಿಯಲ್ಲಿ ಸಂತೋಷ್ ವಸಂತ್ ಹಗ್ವಣೆ ಇವರ ನಿರ್ಮಾಪಕತ್ವದ ಅವಿನಾಶ್ ಕೋಚ್ರೆ ಪಾಟೀಲ್ ನಿರ್ದೇಶನದ “ಕುರ್ಚಿ” ಮರಾಠಿ ಚಲನಚಿತ್ರದಲ್ಲೂ ಖಳನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಪ್ರಥಮ ಬಾರಿಗೆ ಮುಖಕ್ಕೆ ಬಣ್ಣ ಹಚ್ಚಿ ಕೈಯಲ್ಲಿ ಮಚ್ಚು ಹಿಡಿದು ಅಭಿನಯಕ್ಕೆ ಮುಂದಾದ ಸೂರ್ಯ ಪೂಜಾರಿ ಇವರ ಅಭಿನಯಕ್ಕೆ ನಿರ್ದೇಶಕರು ಶಹಾಬ್ಬಾಸ್ ಎಂದಿದ್ದಾರೆ. ನಮ ತುಳುವೆರ್ ಸಂಘಟನೆಯ ಮುಖೇನ ಹಲವಾರು ಸಾಂಸ್ಕೃತಿಕ ಹಾಗೂ ಸಮಾಜಪರ ಕಾರ್ಯಗಳ ಮುಖೇನ ಸದ್ದಿಲ್ಲದೆ ಸುದ್ದಿಯಲ್ಲಿರುವ ಇವರು ಇದೀಗ ಮರಾಠಿ ಚಿತ್ರದಲ್ಲಿ ಅಭಿನಯಿಸಿ ತುಳುನಾಡಿನ ಕೀರ್ತಿಯನ್ನು ಮರಾಠಿ ಮಣ್ಣಿನಲ್ಲಿ ಬೆಳಗಿಸಲಿದ್ದಾರೆ.
ಇದೀಗ ಅಭಿನಯದ ಬಗ್ಗೆ ಒಲವನ್ನು ಹೊಂದಿದ್ದು ಅವಕಾಶ ಸಿಕ್ಕರೆ ತುಳು,ಕನ್ನಡ, ಚಿತ್ರದಲ್ಲೂ ಅಭಿನಯಿಸುತ್ತೇನೆ ಅನ್ನುತ್ತಾರೆ. ಇವರಿಗೆ ಇನ್ನಷ್ಟು ಹೊಸ ಅವಕಾಶಗಳು ಒದಗಿ ಬಂದು ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯೊಂದಿಗೆ ಕೀರ್ತಿ ಮಿನುಗಲಿ ಎನ್ನುವ ಆಶಯ ನಮ್ಮದು.

✒️ಲೇಖನ :ಪ್ರಭಾಕರ ಬೆಳುವಾಯಿ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »