ಬಂಟ್ವಾಳ: ಸಮಾಜ ಸೇವಕಿ, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ , ಬಹುಮುಖ ಪ್ರತಿಭೆ, ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಪೂಜಾರಿ ಯವರು ನಾಳೆ ನಡೆಯುವ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಸರ್ಕಾರ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆವ ಸಮಾರಂಭದಲ್ಲಿಸ್ವೀಕರಿಸಿದರು
ಬಂಟ್ವಾಳದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನೆ ಸಂಸ್ಥೆಯನ್ನು 2012ರಲ್ಲಿ ಸ್ಥಾಪಿಸಿ ಆ ಮೂಲಕಮಹಿಳೆಯರ ಅಭಿವೃದ್ಧಿ ಹಾಗೂ ಹಕ್ಕುಗಳ ಬಗ್ಗೆ ಕೆಲಸ ಮಾಡಿರುವ ಶೈಲಜಾ ರಾಜೇಶ್ ಅವರನ್ನು ಸರಕಾರ ಈ ಪ್ರಶಸ್ತಿಗೆ ಗುರುತಿಸಿಪ್ರಶಸ್ತಿ ನೀಡಿದೆ
ಶೈಲಜಾ ರಾಜೇಶ್ ತನ್ನ ಟ್ರಸ್ಟಿನ ಮೂಲಕ ನೂರಾರು ಮಹಿಳೆಯರ ಅಭಿವೃದ್ಧಿಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನುಹಮ್ಮಿಕೊಂಡು ಮಹಿಳೆಯರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರು. ಶೈಲಜಾ ರಾಜೇಶ್ ಅವರ ಟ್ರಸ್ಟ್ ಮಹಿಳೆಯರ ಅಭಿವೃದ್ಧಿಯ ಬಗ್ಗೆವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ನ್ನು ಸರಕಾರ ಗುರುತಿಸಿದೆ, ಅಲ್ಲದೆ ಶೈಲಜಾ ರಾಜೇಶ್ ವೈಯಕ್ತಿಕವಾಗಿಮಹಿಳೆಯರ ಅಭಿವೃದ್ಧಿಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಪ್ರತಿಷ್ಠಿತ ರಾಣಿ ಚೆನ್ನಮ್ಮ ಪ್ರಶಸ್ತಿಯನ್ನುಸರ್ಕಾರ ಬಂಟ್ವಾಳದ ಯುವ ನ್ಯಾಯವಾದಿ ಶೈಲಜಾ ರಾಜೇಶ್ ಅವರಿಗೆ ನೀಡಿ ಗೌರವಿಸಿದೆ.