ರೇಡಿಯೋ ಅಂದ ಕೂಡಲೇ ನೆನಪಾಗುವುದು ಆರ್. ಜೆ ತೆರೆಯ ಮರೆಯಲ್ಲಿ ಮನಸ್ಸಿಗೆ ಹಿತ ನೀಡುವ ಮಾತುಗಳು ಮತ್ತೊಂದು ಕಡೆ ಪಟ ಪಟ ಮಾತನಾಡುವ ಕಲೆ, ಖಾಲಿ ಮಾತಿನಿಂದಲೇ ಜನರ ಮನಸ್ಸನ್ನು ಗೆದ್ದಿರುವ ತುಳುನಾಡಿನ ಪ್ರತಿಭೆ ಆರ್ ಜೆ ರಶ್ಮಿ ಉಳ್ಳಾಲ್ ಪರಿಸರ ಕಾಳಜಿ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಅವರದೇ ಆದ ಅಭಿಮಾನಿ ಬಳಗವೆ ಇದೆ.ಮಂಗಳೂರಿನ ಉಳ್ಳಾಲ್ ದ ಯು. ಎ. ಪ್ರೇಮನಾಥ್ ಮತ್ತು ಪ್ರಮೀಳಾ ದಂಪತಿಗಳ ಮುದ್ದಿನ ಮಗಳು. ಬಾಲ್ಯದಿಂದಲೂ ರೇಡಿಯೋ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ . ವಿದ್ಯಾ ಭ್ಯಾಸ ಮಾಡತ್ತಿರುವಾಗಲೆ ಸಾರಂಗ್ 107.8 ಎಫ್. ಎಮ್ , ಆರ್. ಜೆ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಮಂಗಳೂರಿನ ಆಕಾಶವಾಣಿಯಲ್ಲಿ ಶೀರ್ಷಿಕೆಯಡಿ ಯುವ ಜನರಿಗೆ ಸ್ಫೂರ್ತಿ ನೀಡಿದ ಇವರು ಅನೇಕ ರೇಡಿಯೋ ಕಾರ್ಯ ಕ್ರಮ ನಡೆಸಿಕೊಟ್ಟಿದ್ದಾರೆ.
ಪದವಿಯಲ್ಲಿ ಉತ್ತಮ ದರ್ಜೆಯ ಅಂಕ ಪಡೆದು ಎಮ್. ಎನ್. ಸಿ ಕಂಪನಿಯಲ್ಲಿ ಎಕ್ಸಿಕ್ಯೂಟರ್ ಮತ್ತು ಕೋಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ .
ಮಕ್ಕಳ ಮೌಲ್ಯದ ಬಗ್ಗೆ ಅರಿವು ಮೂಡಿಸಲು ದಿವ್ಯಾಸ್ ಯುವ ಸೇವಾ ಆರ್ಗನೈಜೇಷನ್ ಎನ್ ಜಿ ಒ ದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಕಾರ್ಯಕ್ರಮ ನಡೆಸಿಕೊಟ್ಟು ಪ್ರಶಂಸೆ ಪಡೆದರು ಇವರು ಸಮಾಜ ಸೇವೆ ಮಾಡುವ ಸೇವಾ ಸೇನಾನಿ ಹೌದು ವೃದ್ದ ಆಶ್ರಮ ಮತ್ತು ಅನಾಥ ಆಶ್ರಮದ ಮಕ್ಕಳಿಗೆ ಶಿಕ್ಷಣ ಮೌಲ್ಯ ಮತ್ತು ಅಗತ್ಯ ವಸ್ತುಗಳು ಪೂರೈಕೆ ಮಾಡುತ್ತಿದ್ದರು. ಒಂದು ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾರಣೆ ರಶ್ಮಿ ಉಳ್ಳಾಲ್.
ಅನೇಕ ಸಾಮಾಜಿಕ ಕಾರ್ಯಕ್ರಮ ಭಾಗವಹಿಸಿ ಹಲವಾರು ಸಂಘಸಂಸ್ಥೆಯಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಉದಯ ಟಿವಿ ಸವಾಲಿಗೆ ಸೈ ಕಾರ್ಯಕ್ರಮದಲ್ಲಿ ಮಂಗಳೂರನ್ನು ಪ್ರತಿನಿಧಿಸಿ ಮಾತನಾಡಿದ ಇವರಿಗೆ ತುಳುಚಿತ್ರದ ವಾಯ್ಸ್ ಡಬ್ಬಿಂಗ್ ಮತ್ತು ಜಾಹಿರಾತಿಗೆ ವಾಯ್ಸ್ ನೀಡಿದ ಶ್ರೇಯ ಲಭಿಸುತ್ತದೆ . 800 ಕ್ಕೂ ಹೆಚ್ಚು ವೇದಿಕೆಯಲ್ಲಿ ನಿರೂಪಣೆ ಮಾಡಿದ ಹೆಗ್ಗಳಿಕೆ. ಬಹಳಷ್ಟು ಸಿನಿಮಾ ಹಾಗು ಸಂಗೀತ ಕ್ಷೇತ್ರದ ದಿಗಜ್ಜರ ಸಂದರ್ಶನ ನಡೆಸಿದ್ದು ಪ್ರಕೃತಿ ಪ್ರೇಮಿಯಾಗಿ 1000 ಕ್ಕೂ ಸೀಡ್ಬೂಲ್ ತಯಾರಿಸಿ, ಸೀಡ್ಬೂಲ್ ಬೀಜವನ್ನು ಹಾಕಿ ಹಸಿರು ಉತ್ಪತ್ತಿ ಮಾಡುವ ಅಭಿಯಾನವನ್ನು ನಡೆಸಿದ ಇವರು , ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ಗಿಡವನ್ನು ಉಡುಗೊರೆಯಾಗಿ ನೀಡಿದ್ದು ಜನ ಮೆಚ್ಚುಗೆ ಗಳಿಸಿದ್ದಾರೆ. ತನ್ನದೇ ಆದ ಯೌಟ್ಯೂಬ್ ಚಾನೆಲ್ ಆರ್ ಜೆ ರಶ್ಮಿ ಉಳ್ಳಾಲ್ ಆರಂಭಿಸಿದ್ದು ಜನರಿಗೆ ಪ್ರೇರಣೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ . ಈದೀಗ ಪ್ರಸ್ತುತ ಮ್ಯಾನೇಜರ್ ಹುದ್ದೆಯಲ್ಲಿ ಇದ್ದು ಹೀಗೆ ಅನೇಕ ಅವಕಾಶಗಳು ಒದಗಿ ಬರಲಿ, ಇನ್ನಷ್ಟು ಸಮಾಜ ಸೇವೆಮಾಡಲು ಆ ಭಗವಂತ ಶಕ್ತಿ ಕೊಡಲಿ ಮಿಂಚಲಿ ಎಂದು ಹಾರೈಸುವ.
Email us: billavaswarriors@gmail.com
By: ಪ್ರಶಾಂತ್ ಅಂಚನ್ ಮಸ್ಕತ್ತ್