” ಜಗತ್ತಿನ ವೈಚಾರಿಕತೆಯ ಬೆಳಕು, ಸಾಮಾಜಿಕ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಾರ್ವಕಾಲಿಕ ಮೌಲ್ಯವುಳ್ಳದ್ದು. ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ (ರಿ.) ಮಾಣಿ ಘಟಕವು ಹಮ್ಮಿಕೊಂಡಿರುವ ಮನೆಮನೆಗೆ ಗುರುತತ್ವ ಸಂಚಾರ ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ” ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಂ ಕೆ.ಬಿ.ನುಡಿದರು.ಯುವವಾಹಿನಿ (ರಿ.) ಕೇಂದ್ರ ಸಮಿತಿಯ ವಿಶುಕುಮಾರ್ ದತ್ತಿ ನಿಧಿಯ ಸಂಚಾಲಕರಾದ ಶಶಿಧರ್ ಕಿನ್ನಿಮಜಲು ಸಂಪನ್ನ ಕಾರ್ಯಕ್ರಮದ ಗುರುತತ್ವ ಉಪನ್ಯಾಸ ನೀಡಿ, ನಾರಾಯಣ ಗುರುಗಳ ಸರಳ ಜೀವನ ಮಾದರಿಯ ಅನ್ವಯ ಹಾಗೂ ಅಗತ್ಯತೆಯ ಬಗ್ಗೆ ವಿಶದೀಕರಿಸಿದರು.
ಘಟಕದ ಅಧ್ಯಕ್ಷರಾದ ಪ್ರಶಾಂತ್ ಅನಂತಾಡಿ ಹತ್ತು ಗ್ರಾಮವ್ಯಾಪ್ತಿಯಲ್ಲಿ ಗುರುತತ್ವ ಸಂಚಾರ ನಡೆದುಬಂದ ರೀತಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಕೊಂಡ ಮನೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಯುವವಾಹಿನಿ (ರಿ.) ಮಾಣಿ ಘಟಕವು ಕಳೆದ ಒಂದು ತಿಂಗಳಿನಿಂದ ಅನಂತಾಡಿ, ಮಾಣಿ, ಬರಿಮಾರು, ನೆಟ್ಲಮುಡ್ನೂರು, ಕೆದಿಲ,ಕಡೇಶಿವಾಲಯ, ಬಿಳಿಯೂರು,ಪೆರಾಜೆ ಗ್ರಾಮವ್ಯಾಪ್ತಿಗಳ ಹದಿಮೂರು ಕಡೆಗಳಲ್ಲಿ ಮನೆಮನೆಗೆ ಗುರುತತ್ವ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನೂರೈವತ್ತಕ್ಕಿಂತಲೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಮೂಲಕ ಗುರುತತ್ವ ಅಭಿಯಾನವನ್ನು ಯಶಸ್ಸುಗೊಳಿಸಿದೆ. ಈ ಅಭಿಯಾನದಲ್ಲಿ ಗುರುತತ್ವ ಉಪನ್ಯಾಸ ನೀಡಿದ ಶ್ರೀಮತಿ ತ್ರಿವೇಣಿ ರಮೇಶ್, ಶ್ರೀಮತಿ ರೇಣುಕಾ ಕಣಿಯೂರು, ದಿನಕರ್ ಅಂಚನ್, ರಾಜೇಶ್ ಬಲ್ಯ ಹಾಗೂ ಗುರುತತ್ವ ಸಂಚಾರದ ಸಂಚಾಲಕರಾದ ಜನಾರ್ದನ ಕೊಡಂಗೆ ಇವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಮತ್ತು ಸ್ಪಂದನ ಯೋಜನೆಗಳ ಬಲವರ್ಧನೆಗಾಗಿ ಆಯೋಜಿಸಿದ ಸಹಾಯಧನ ಕೂಪನಿನ ಬಹುಮಾನವನ್ನು ವಿತರಿಸಲಾಯಿತು ಮತ್ತು ಸ.ಕಿ.ಪ್ರಾ.ಶಾಲೆ,ಬಂಟ್ರಿಂಜ ಇದರ ಕಟ್ಟಡ ಮತ್ತು ಮೇಲ್ಛಾವಣಿ ದುರಸ್ತಿಗೆ ಘಟಕದ ವತಿಯಿಂದ ಸ್ಪಂದನ ಯೋಜನೆಯಡಿ 5000 ರೂಪಾಯಿಯನ್ನು ಶಾಲೆಯ ಎಸ್.ಡಿ.ಎಂ.ಸಿ ಸಮಿತಿಯ ಸದಸ್ಯೆಯಾದ ಶೋಭ ರವರ ಮೂಲಕ ನೀಡಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಎರಡನೇ ಉಪಾಧ್ಯಕ್ಷರಾದ ರಾಜೇಶ್ ಬಂಟ್ವಾಳ,ಸತೀಶ್ ಬಾಯಿಲ, ಘಟಕದ ಗೌರವ ಸಲಹೆಗಾರರಾದ ಜಯಂತ ಬರಿಮಾರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ,ಪೇರಮೊಗೆರು ಇದರ ಗೌರವ ಅಧ್ಯಕ್ಷರಾದ ಮಾರಪ್ಪ ಸುವರ್ಣ, ಘಟಕದ ನಿರ್ದೇಶಕರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.ಶ್ರೀದುರ್ಗಾ ನಿಲಯದ ಶ್ರೀಮತಿ ಶೋಭಾ ರಾಜೇಶ್ ದಂಪತಿಗಳು ಹಾಗೂ ಮನೆಯ ಸದಸ್ಯರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಘಟಕದ ಕಾರ್ಯದರ್ಶಿಯಾದ ರಾಜೇಶ್ ಎಸ್ ಬಲ್ಯ ರವರು ಸ್ವಾಗತಿಸಿದರು. ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಜರ್ನಾದನ ಪೂಜಾರಿ ಕೊಡಂಗೆ ವಂದಿಸಿದರು. ವ್ಯಕ್ತಿತ್ವ ವಿಕಸನ ನಿರ್ದೇಶಕಿ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಘಟಕದ ಉಪಾಧ್ಯಕ್ಷರುಗಳಾದ ಸುಜಿತ್ ಅಂಚನ್,ರವಿಚಂದ್ರ ಬಾಬನಕಟ್ಟೆ, ನಿಕಟಪೂರ್ವ ಕಾರ್ಯದರ್ಶಿ ಶಿವರಾಜ್ ಪಿ.ಆರ್, ಮಾಜಿ ಸಲಹೆಗಾರರಾದ ಬಾಲಕೃಷ್ಣ ದೇಲಬೆಟ್ಟು, ಸಂಘಟನಾ ಕಾರ್ಯದರ್ಶಿ ಕಿರಣ್ ಗೋಳಿಕಟ್ಟೆ, ಸತೀಶ್ ಕೊಪ್ಪರಿಗೆ, ಮಾಜಿ ಕೋಶಾಧಿಕಾರಿ ವಿಶ್ವನಾಥ್ ಮುಜಲ, ಬಾಲಕೃಷ್ಣ ಮುಜಲ, ಪ್ರವೀಣ್ ಮಿತ್ತೂರು ಅತಿಥಿಗಳನ್ನು ಗೌರವಿಸಿದರು.
ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ,ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಕಲೆ,ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರಾದ ಹರೀಶ್ ಪೂಜಾರಿ ಬಾಕಿಲ, ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಮುಜಲ, ಮನೆಯ ಯಜಮಾನರಾದ ರಾಜೇಶ್ ಬಾಬನಕಟ್ಟೆ ಉಪಸ್ಥಿತರಿದ್ದರು. ಯುವವಾಹಿನಿ (ರಿ.)ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ. ಶುಭಹಾರೈಸಿದರು.