TOP STORIES:

FOLLOW US

ಮಾನವೀಯತೆಯ ಆಪತ್ಪಾಂದವ ಸೌರಜ್ ಮಂಗಳೂರು


ಬರಹ: ವಿಜೇತ್ ಪೂಜಾರಿ ಶಿಬಾಜೆ

ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳಿಂದ ಉತ್ತರವೂ ದೊರೆಯುತ್ತದೆ ಇಲ್ಲವಾದರೆ ಆ ಉತ್ತರದಿಂದ ಇನ್ನೊಂದು ಪ್ರಶ್ನೆಯ ಮರು ಹುಟ್ಟಿಗೆ ಕಾರಣವಾಗುತ್ತದೆ.

ಕೆಲವೊಂದು ಬಾರಿ ಜೀವನದಲ್ಲಿ ನಡೆದ ಘಟನೆಗಳೇ ನಮ್ಮ ಜೀವನದ ಪಥವನ್ನು ಬದಲಿಸಿ ಬಿಡಬಹುದು.ನಾವು ನಮ್ಮ ಸಮಾಜ ಬದಲಾಗಬೇಕೆಂದು ಕಾದು ಕುಳಿತರೆ ಶತಮಾನಗಳು ಕಳೆದರು ಒಂದಿಂಚು ಬದಲಾಗಲು ಸಾಧ್ಯವಿಲ್ಲ. ಆದರೆ ನಮ್ಮಿಂದ ಸಮಾಜ ಬದಲಾಗಬೇಕೆಂಬ ದೃಢ ಹೆಜ್ಜೆಯನ್ನು ಇಟ್ಟಾಗ, ಸಮಾಜ ತನ್ನಿಂದಾನೆ ರವಿಯ ಕಿರಣಗಳಿಗೆ ತಲೆಯನ್ನು ಸವರಿದಂತೆ ಮತ್ತು ಬದಲಾವಣೆಯ ಪರ್ವಗಳಿಗೆ ಇತರರಿಗೆ ಪ್ರೇರಣೆಯನ್ನು ಒದಗಿಸುತ್ತದೆ.

ನಮ್ಮೆದುರಿಗೆ ಸಮಾಜದಲ್ಲಿ ನಡೆಯುವ ಕೆಲವು ತಪ್ಪುಗಳನ್ನು ಕಂಡು ನಾವು ಕಣ್ಣಿದ್ದು ಕುರುಡಾರುಗುವ ಪ್ರಮೇಯವೇ ಇಂದು ಜಾಸ್ತಿಯಾಗಿದೆ. ಆ ಕುರುಡುತನ ಎಲ್ಲರಲ್ಲೂ ಅಂಧಕಾರದ ಭ್ರಮೆಯ ಲೋಕದಲ್ಲಿ ಬದುಕುವಂತೆ ಮಾಡುತ್ತದೆ. ಅಂತಹ ಅಂಧಕಾರದ ಭ್ರಮೆಯನ್ನು ಸರಿಸಿದಾಗ, ಅದರ ವಿರುದ್ಧ ಪ್ರಶ್ನೆ ಮಾಡಿದಾಗ ಮಾತ್ರ ನಮ್ಮ ಸಮಾಜ ನಿಧಾನವಾಗಿ, ವಿಶಾಲವಾಗಿ ಆಲೋಚಿಸುವಂತೆ ಮಾಡುತ್ತದೆ.

ಸಮಾಜದಲ್ಲಿ ನಡೆಯುವ ಹಲವಾರು ಸಮಸ್ಯೆಗಳಿಗೆ ಧೃಢವಾಗಿ ನಿಂತು ಪ್ರಶ್ನೆ ಮಾಡಿದವರ ಸಾಲಿನಲ್ಲಿ ಮಂಗಳೂರಿನ ಸೌರಜ್ ಅಣ್ಣ ಮೊದಲಿಗರು.

ದಿ. ಮೋಹನ್ ಮತ್ತು ಶ್ರೀಮತಿ ಕುಶಲ ದಂಪತಿಯ ಮಗನಾಗಿ ಮಂಗಳೂರಿನ ಹೊಯ್ಗೆ ಬಜಾರಿನಲ್ಲಿ ಜನಿಸಿದ ಇವರು, ಮೂರು ಜನ ಮಕ್ಕಳಲ್ಲಿ ಇವರು ಕಿರಿಯವರು.ಹುಟ್ಟಿದಾಗಿನಿಂದ ತುತ್ತು ಅನ್ನಕ್ಕಾಗಿಯೇ ಹೋರಾಟ ಮಾಡಿ ಜೀವನ ಕಂಡವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ರೊಸಾರಿಯೋ ಪ್ರೌಢ ಶಾಲೆಯಲ್ಲಿ ಪಡೆದು, ಪಿ.ಯು.ಸಿ ವಿಧ್ಯಾಭ್ಯಾಸವನ್ನು ಮಾತ ಇನ್ಸ್ಟಿಟ್ಯೂಟ್ನಲ್ಲಿ ದೂರ ಶಿಕ್ಷಣದ (Corresponding) ಮುಖಾಂತರ ಮಲ್ಲಿಕಟ್ಟೆ ಕದ್ರಿ ಮಂಗಳೂರಿನಲ್ಲಿ ಪೂರ್ಣಗೊಳಿಸಿದರು. ಆದಾಗಲೇ ಬದುಕಿನ ತುತ್ತು ಅನ್ನಕ್ಕಾಗಿ ದುಡಿಯಲು ಸಿದ್ಧವಾಗಿ ಬಿಟ್ಟ ಇವರು, ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಜೀವನ ಯಾತ್ರೆಗಾಗಿ ಸಿದ್ಧರಾದರು.

ಮಂಗಳೂರಿನ ಬೈಕಂಪಾಡಿಯ ಪೇಪರ್ ಪ್ರೆಸ್ನಲ್ಲಿ ಎರಡೂವರೆ ವರ್ಷಗಳ ಕಾಲ ತನ್ನ ದುಡಿಮೆಯನ್ನು ನಡೆಸಿದರು. ಅಲ್ಲಿಂದ ಪುಸ್ತಕಗಳ ಮಾರಾಟ ವಿಭಾಗದಲ್ಲಿ ಸುಧೀರ್ಘ ಮೂರು ವರುಷಗಳ ಕಾಲ ಜ್ಞಾನದ ಜೊತೆ ನಡೆದರು. ಆವಾಗಲೇ ಸಮಾಜದಲ್ಲಿ ನಡೆಯುವ ಕೆಲವು ವಿದ್ಯಮಾನಗಳಿಗೆ ಪ್ರತಿಭಟಿಸುವ ಪ್ರೌಢತೆಯನ್ನು ಪಡೆದುಕೊಂಡು ಕೆಲವು ಸಮಸ್ಯೆಗಳನ್ನು ವಿರೋಧಿಸುತ್ತಾ ಬಂದರು.

ಮಂಗಳೂರಿನ ವಸ್ತ್ರ ಮಳಿಗೆಯಲ್ಲಿ ಸುಧೀರ್ಘ ಮೂರು ವರುಷಗಳ ಕಾಲ ಉದ್ಯೋಗವನ್ನು ಕೂಡ ಮಾಡಿದರು. ತದನಂತರ ಜೀವನದ ಬದಲಾವಣೆಗೆ ದೂರದ ಕುವೈತ್ ದೇಶಕ್ಕೆ ಹಾರಿದರು. ಕ್ಯಾಟರಿಂಗ್ ವಿಭಾಗದಲ್ಲಿ ಒಂದೂವರೆ ವರುಷಗಳ ಉದ್ಯೋಗವನ್ನು ಮಾಡಿ, ಪುನಃ ತವರು ನೆಲಕ್ಕೆ ಮರಳಿದರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವಾಗ ನಡೆದ ಒಂದು ಘಟನೆ ಇವರ ಬದುಕಿನ ದಾರಿಯನ್ನು ಬದಲಾಯಿಸಿ ಬಿಟ್ಟಿತು.! ಆ ಘಟನೆಯ ಅವಮಾನದಿಂದಾಗಿ ಸೆಕೆಂಡ್ ಹ್ಯಾಂಡ್ ಟೆಂಪೋ ವಾಹನವನ್ನು ಖರೀದಿ ಮಾಡಿ ಮಂಗಳೂರಿನ ಎಲ್ಲಾ ಕಡೆ ಗೂಡ್ಸ್ ಪಾರ್ಸೆಲ್ಗಳನ್ನು ತಲುಪಿಸುವ ಸ್ವಃ ಉದ್ಯೋಗವನ್ನು ಶ್ರೀ ಸಾಯಿ ಎಂಬ ಹೆಸರಿನಿಂದ ಆರಂಭಿಸಿದರು.

ನಾನು ಆರಂಭದಲ್ಲೇ ವಿವರಿಸಿದ ಹಾಗೆ ಕೆಲವೊಂದು ಘಟನೆಗಳು ಬದುಕಿನ ಚಿತ್ರಣವನ್ನೇ ಬದಲಾಯಿಸಿ ಬಿಡುತ್ತದೆ ಎಂಬ ವಾಕ್ಯವನ್ನು ಮುನ್ನಲೆಗೆ ತಂದಿದ್ದೆ ಇದಕ್ಕೆ ಸೌರಜ್ ಅಣ್ಣ ಪ್ರತ್ಯಕ್ಷ ಉದಾಹರಣೆ, ಇಂದು ಐದು ವಾಹನಗಳ ಜೊತೆಗಾರರಾಗಿದ್ದಾರೆ.

ಮಂಗಳೂರಿನ ಗಲ್ಲಿ-ಗಲ್ಲಿಗಳ ಪರಿಚಯ ಚಿಕ್ಕಂದಿನಿಂದಲೇ ಇದ್ದ ಕಾರಣ ಇಲ್ಲಿನ ಕೆಲವು ಸಮಸ್ಯೆಗಳಿಗೆ ಜೊತೆಯಾಗಿ ಅವುಗಳಿಗೆ ಉತ್ತರವನ್ನು ಹುಡುಕುವತ್ತಾ ತನ್ನ ಉದ್ಯೋಗದ ಜೊತೆಗೆ ದಿಟ್ಟ ಹೆಜ್ಜೆಯನ್ನು ಇಟ್ಟವರು ನಮ್ಮ ಸೌರಜ್ ಅಣ್ಣ ಮಂಗಳೂರು.

ಕಳೆದ ಹಲವಾರು ವರುಷಗಳ ಹಿಂದೆ ಪಂಪ್ವೆಲ್ ಫ್ಲೈಓವರ್ ಮತ್ತು ರಸ್ತೆಯ ಜ್ವಲಂತ ಸಮಸ್ಯೆಯ ಸುದ್ದಿ ದೇಶ-ವಿದೇಶಗಳಲ್ಲಿ ಮತ್ತು ಮಂಗಳೂರಿನಲ್ಲಿ ಸುದ್ದಿಯಾಗುತ್ತಲೇ ಇತ್ತು. ಇಲ್ಲಿರುವ ಸಮಸ್ಯೆಯನ್ನು ಜನರಿಗೆ, ನಾಯಕರಿಗೆ ಅರ್ಥಗರ್ಭಿತವಾಗಿ ತಿಳಿಸಿದವರಲ್ಲಿ ಇವರು ಒಬ್ಬರು.

ರಾಮಕೃಷ್ಣ ಮಿಷನ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಸ್ವಚ್ಛ ಮಂಗಳೂರು ಎಂಬ ಬಹು ದೊಡ್ಡ ಕಾರ್ಯಕ್ರಮದಲ್ಲಿ ಕಾರ್ಯಕರ್ತನಾಗಿ ದುಡಿದು, ಮಂಗಳೂರಿನ ಗಲ್ಲಿ-ಗಲ್ಲಿಗಳನ್ನು ಸ್ವಚ್ಛವಾಗಿಸುವ ಮತ್ತು ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದರಲ್ಲಿ ಸ್ವಚ್ಛ ಮಂಗಳೂರು ಯೋಜನೆಯಡಿ ತನ್ನನ್ನು ತಾನು ತೊಡಗಿಸಿಕೊಂಡರು. ಸ್ವಚ್ಛತೆಯ ವಿಷಯದಲ್ಲಿ ಹಲವಾರು ನೇರ ವೀಡಿಯೋವನ್ನು (Live Video) ಮಾಡಿ ಕೆಲವು ದೊಡ್ಡ-ದೊಡ್ಡ ಹೋಟೆಲುಗಳಿಗೆ, ಅಂಗಡಿಗಳಿಗೆ ಬಿಸಿ ಮುಟ್ಟಿಸಿದರು.

ಎಲ್ಲಾ ವಿಷಯದಲ್ಲಿ ನೇರವಾಗಿ ಮಾತನಾಡುವ ಸೌರಜ್ ಅಣ್ಣ, ತನ್ನ ಕಾರ್ಯದಿಂದ ಹಿಂದೆ ಸರಿದವರಲ್ಲ. ಆ ಕಾರ್ಯ ಕಾರ್ಯರೂಪಕ್ಕೆ ಬರುವ ತನಕ ಅದರ ಬೆನ್ನ ಹಿಂದೆ ಬಿದ್ದು ಆ ಕಾರ್ಯಕ್ಕೆ ಪೂರ್ಣ ವಿರಾಮ ನೀಡುತ್ತಿದ್ದರು.

ಮಂಗಳೂರಿನ ಕೆಲವು ಬಸ್ಸು ತಂಗುದಾಣಗಳ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿ ಅದನ್ನು ಸರಿಪಡಿಸುವ ತನಕ ಅದರ ಬೆನ್ನ ಹಿಂದೆ ಬಿದ್ದು ಸಾಮಾನ್ಯ ತಂಗುದಾಣವನ್ನಾಗಿ ಪರಿವರ್ತಿಸಲು ಬಹಳಷ್ಟು ಶ್ರಮಿಸಿದರು.

ಇವರ ಕೆಲವೊಂದು ಸಮಾಜಮುಖಿ ಕಾರ್ಯಗಳನ್ನು ನಾನು ಇಲ್ಲಿ ಬರೆಯಲೇಬೇಕು. ಸಾವಿರಕ್ಕಿಂತಲೂ ಹೆಚ್ಚಿನ ಅನಾಥ ಮಕ್ಕಳಿಗೆ ಉಚಿತ ಬಟ್ಟೆಯನ್ನು ತನ್ನ ಸ್ವಂತ ಹಣದಿಂದಲೇ ನೀಡಿದ್ದಾರೆ. ಹಲವಾರು ಅನಾಥಾಶ್ರಮಗಳಿಗೆ ತನ್ನ ಕೈಲಾದಷ್ಟು ಸಹಾಯವನ್ನು ಬೆನ್ನ ಹಿಂದೆಯೇ ನಿಂತು ಮಾಡಿದ್ದಾರೆ. ಹೆಚ್.ಐ.ವಿ ಪೀಡಿತ ಮಕ್ಕಳಿಗೆ ಉಚಿತ ಬಟ್ಟೆಗಳನ್ನು ನೀಡಿ ಅವರಿಗೆ ಧೈರ್ಯವನ್ನು ನೀಡುವ ಜವಾಬ್ದಾರಿಗೆ ಹೆಗಲಾದವರು ಇವರೇ.

ದೊಡ್ಡ-ದೊಡ್ಡ ಸಭೆ-ಸಮಾರಂಭಗಳಲ್ಲಿ ಉಳಿದ ಊಟವನ್ನು ತನ್ನ ಗೆಳೆಯರ ಜೊತೆ ಸೇರಿ ನಿರಾಶ್ರಿತರಿಗೆ ಹಂಚುವ ಕಾಯಕವನ್ನು ಸದ್ದಿಲ್ಲದೆ ಮುಗಿಸಿದವರಲ್ಲಿ ಇವರು ಒಬ್ಬರು. ಎಂದೂ ತನ್ನ ಕಾರ್ಯದ ಬಗ್ಗೆ ಎಲ್ಲಿಯು ಹೇಳಿಕೊಳ್ಳದ ಅಣ್ಣ ,ತನ್ನ ಕಾರ್ಯದಿಂದಲೇ ಮಂಗಳೂರಿನ ಜನರಲ್ಲಿ ಚಿರ-ಪರಿಚಿತ ವ್ಯಕ್ತಿಯಾಗಿದ್ದಾರೆ.

ದಿನ ನಿತ್ಯ ಕೆಲಸದ ನಿಮಿತ್ತ ದಾರಿಯಲ್ಲಿ ಸಾಗುವಾಗ ಹಲವಾರು ಬಿಕ್ಷುಕರನ್ನು ತನ್ನ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಮತ್ತು ನಿರಾಶ್ರಿತರ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ತನ್ನ ಮಾನವೀಯತೆಯ ಮುಖವನ್ನು ಎಲ್ಲರಿಗೂ ತೋರಿಸಿದ್ದಾರೆ.

ಹಲವಾರು ಅಪಘಾತದ ಸಂದರ್ಭದಲ್ಲಿ ಏನನ್ನು ಲೆಕ್ಕಿಸದೆ ಹಲವಾರು ಜೀವಗಳನ್ನು ಉಳಿಸಿದ ನೆಮ್ಮದಿ ಸೌರಜ್ ಅಣ್ಣನಿಗೆ ಇದೆ. ಇದಕ್ಕೆ ಅಡ್ಯಾರ್, ಪಡುಬಿದ್ರೆಯಲ್ಲಿ ನಡೆದ ಕೆಲವು ಘಟನೆಗಳೇ ಸಾಕ್ಷಿ. ತುರ್ತು ರಕ್ತದ ಸಂದರ್ಭದಲ್ಲಿ ಹಲವು ಬಾರಿ ರಕ್ತ ದಾನ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.ಯಾವ ಕಾರ್ಯದಲ್ಲೂ ಪ್ರತಿಫಲವನ್ನು ಬಯಸದ ಇವರು ತನ್ನ ಕಾರ್ಯವನ್ನು ಮಾಡುತ್ತಲೇ ಇದ್ದಾರೆ.

ಮಂಗಳೂರಿನ ಬೀದಿಗಳಲ್ಲಿ ಬಿಕ್ಷಾಟನೆ ಮಾಡುವ ಹಲವು ಮಕ್ಕಳನ್ನು, ವೃದ್ಧರನ್ನು ನಿರಾಶ್ರಿತರ ಕೇಂದ್ರಗಳಿಗೆ ಸೇರಿಸಿ ಅವರ ಪಾಲಿಗೆ ಬೆಳಕಾದಂತವರು ಇವರು.

ಮಂಗಳೂರಿನ ಹೃದಯ ಭಾಗದ ಕದ್ರಿ ಪಾರ್ಕಿನಲ್ಲಿ ನಕಲಿ ಮಂಗಳ ಮುಖಿಯರ ವೇಷ ಧರಿಸಿ ಹಣ ವಸೂಲಿ ಮಾಡುತ್ತಿದ್ದ ಹಲವರನ್ನು ಲೈವ್ ವೀಡಿಯೋದ ಮುಖಾಂತರ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಕೀರ್ತಿ ಸೌರಜ್ ಅಣ್ಣನಿಗೆ ಸಲ್ಲುತ್ತದೆ. ಪ್ರತಿಷ್ಠಿತ ಬಡಾವಣೆಗಳಲ್ಲಿ ನಕಲಿ ಹೈಟೆಕ್ ಬಿಕ್ಷಾಟನೆ ಮಾಡುತ್ತಿದ್ದ ಕೆಲವರಿಗೆ ಲೈವ್ ವೀಡಿಯೋದ ಮುಖಾಂತರ ಉತ್ತರವನ್ನು ನೀಡಿದ್ದಾರೆ.ಸುಮ್ಮನೆ ಕಿವಿ ಕೇಳದವರಂತೆ ನಟಿಸಿ, ಕೈ ಕಾಲು ಸರಿ ಇಲ್ಲ ಎಂದು ನಂಬಿಸುವ ಕೆಲವು ಅನ್ಯ ರಾಜ್ಯದವರ ಬೆವರಿಳಿಸಿ ಪೊಲೀಸರಿಗೆ ಒಪ್ಪಿಸಿದ್ದವರಲ್ಲಿ ಇವರು ಒಬ್ಬರು.
ಕೆಲವು ವರುಷಗಳ ಹಿಂದೆ ಮಂಗಳೂರಿನಲ್ಲಿ ಸಕ್ರೀಯವಾಗಿದ್ದ ನಕಲಿ ಬಾಬಗಳ ವೇಷಗಳನ್ನು ಎಂದಿನಂತೆಯೇ ಕಳಚಿದ್ದಾರೆ.

ಮಂಗಳೂರಿನ ಸೌಂದರ್ಯಕ್ಕೆ ಅಡ್ಡಿಯಂತೆ ಇದ್ದ ಫ್ಲೆಕ್ಸ್ ಗಳ ಹಾವಳಿಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಇವರು ಕೂಡ ಒಬ್ಬರು. ಇದರ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಉದಾಹರಣೆಗಳು ಹಲವಾರು ಇದೆ.

ಜನೌಷದಿ ಕೇಂದ್ರಗಳ ಉಪಯೋಗವನ್ನು ಜನರಿಗೆ ತಿಳಿಸುವ ಕಾರ್ಯದಲ್ಲಿಯೂ ತೊಡಗಿಕೊಂಡು ಅದರ ಮಾಹಿತಿಯನ್ನು ಎಲ್ಲರಿಗೂ ತಿಳಿಸುವ ಕಾರ್ಯವನ್ನು ಮಾಡಿದರು.

ಕಳೆದ 2-3 ತಿಂಗಳ ಹಿಂದೆ ಕೊರೋನಾದಿಂದಾಗಿ ಸರ್ಕಾರ ಹೇರಿದ್ದ ಲಾಕ್ಡೌನ್ ಸಮಯದಲ್ಲಿ ಹಾಸನದ ಮುಸ್ಲಿಂ ಕುಟುಂಬದ ಸಹಾಯಕ್ಕೆ ನಿಂತು, ಶಾಸಕರಾದ ವೇದವ್ಯಾಸ್ ಕಾಮತರ ನೆರವಿನಿಂದ ಸೌರಜ್ ಅಣ್ಣ, ಮಳೆಯ ಜೊತೆಯಲ್ಲಿ ಆ ಕುಟುಂಬಕ್ಕೆ ಆ ರಾತ್ರಿ ಅವರಿಗೆ ವಾಸ್ತವ್ಯವನ್ನು ನೀಡಿ ಮರುದಿನ ಮಂಗಳೂರಿನಿಂದ ಹಾಸನಕ್ಕೆ ಗೆಳೆಯನ ವಾಹನದಲ್ಲಿ ಕರೆದುಕೊಂಡು ಹೋಗಲು ನೆರವಾಗಿ ಮಗದೊಮ್ಮೆ ಮಾನವೀಯತೆಯ ಪಾಠವನ್ನು ಸವಿಸ್ತಾರವಾಗಿ ತಿಳಿಸಿದರು.

ಕೊರೋನ ಎಂಬುದು ಸಾವಿರಾರು ಅನ್ನದ ತಟ್ಟೆಗೆ ಕಲ್ಲನ್ನು ಹಾಕಿದ ಮೃತ ರಾಕ್ಷಸನೀತ, ಹಲವರ ಉದ್ಯೋಗವನ್ನು ಕೂಡ ಕಸಿದುಕೊಂಡಿತ್ತು! ಆದರೆ ಅವರಿಗೆ ಉದ್ಯೋಗವನ್ನು ದೊರಕಿಸಿ ಕೊಡುವ ಅಥವಾ ಇನ್ಯಾವುದೇ ಮಾಹಿತಿಯನ್ನು ನೀಡುವ ಕಾರ್ಯಕ್ಕೆ ಯಾವ ಜನ ಪ್ರತಿನಿಧಿಗಳು ಮುಂದಾಗಲೇ ಇಲ್ಲಾ.ಆದರೆ ಸೌರಜ್ ಅಣ್ಣ ಈ ಕಾರ್ಯಕ್ಕೆ ಮುಂದಾದರು, ಹಲವರಿಗೆ ಉದ್ಯೋಗವನ್ನು ಉದ್ಯೋಗದಾತರಿಂದ ದೊರಕಿಸಿಕೊಟ್ಟರು. ಲೈವ್ ವೀಡಿಯೋದ ಮುಖಾಂತರ ಸುಮಾರು 100ಕ್ಕಿಂತ ಹೆಚ್ಚಿನ ಯುವಕರಿಗೆ ಉದ್ಯೋಗವನ್ನು ಒದಗಿಸಿಕೊಡುವತ್ತಾ ವೇದಿಕೆಯನ್ನು ನಿರ್ಮಿಸಿದರು.

ಯಾವತ್ತೂ ಸಮಾಜಮುಖಿ ಸೇವೆ,ಮಾನವೀಯತೆಯ ಅನಾವರಣದಿಂದಲೇ ಒಬ್ಬ ವ್ಯಕ್ತಿ ಎಲ್ಲರ ಹೃದಯದಲ್ಲಿ ಸ್ಥಾನ ಪಡೆಯಲು ಸಾಧ್ಯ, ಅಂತಹ ಸಾಲಿನಲ್ಲಿ ಸೌರಜ್ ಅಣ್ಣನು ನಿಲ್ಲುತ್ತಾರೆ.
ತನ್ನ ಉದ್ಯೋಗದ ಜೊತೆಗೆ ಇತರರ ಜೀವನಕ್ಕೆ ನೆರವಾಗಿ, ಸಮಾಜದಲ್ಲಿ ನಡೆಯುವ ತಪ್ಪುಗಳ ಬಗ್ಗೆ
ನೇರವಾಗಿ ಮಾತನಾಡುವ ಅಣ್ಣನ ಈ ಗುಣ ಮೆಚ್ಚುವಂತದ್ದು.

ಇದು ಅಣ್ಣನ ಬಗ್ಗೆ ಸಿಕ್ಕ ಕೆಲವು ನಿದರ್ಶನಗಳು ಅಷ್ಟೇ, ಕೆದಕಿದಷ್ಟು ಮಾನವೀಯ ಮುಖಗಳ ಪಾಠ ಎದ್ದು ಕಾಣುತ್ತವೆ..!!
ಇದು ಸೌರಜ್ ಅಣ್ಣನ ಬದುಕಿನ ಪುಸ್ತಕದ ಕೆಲವು ಪುಟಗಳಷ್ಟೇ ಇನ್ನುಳಿದವು ಇತಿಹಾಸ..!!

ಬರಹ: ವಿಜೇತ್ ಪೂಜಾರಿ ಶಿಬಾಜೆ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »