ಮಾನವೀಯ ನ್ಯಾಯಕ್ಕಾಗಿ ಪ್ರತಿಭಟನೆ
ಸಾಮಾಜಿಕ ಕಾರ್ಯಕರ್ತ ಶಂಕರ ಶಾಂತಿಗೆ ಮಾರಣಾಂತಿಕ ಹಲ್ಲೆಯಾಗಿದ್ದು ಈ ಕುರಿತು
ಪೋಲಿಸ್ ಠಾಣೆಗೆ ಹಾಗೂ ವರಿಷ್ಠಾಧಿಕಾರಿಗೆ ದೂರು ದಾಖಲಿಸಿದ್ದರೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ.
ಆದುದರಿಂದ ಸಮಾನ ಮನಸ್ಕ ಬಿಲ್ಲವರನ್ನು ಕೂಡಿಕೊಂಡು
“ಮಾನವೀಯ ನೆಲೆಯಲ್ಲಿ ಶಂಕರ ಶಾಂತಿಗೆ ನ್ಯಾಯವನ್ನು ಆಗ್ರಹಿಸಿ” 01-03-2021,ಸೋಮವಾರ ಸಂಜೆ -3 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಬನ್ನಂಜೆ ಬಿಲ್ಲವ ಸಂಘದ ವಠಾರದಲ್ಲಿ ನಾವೆಲ್ಲರೂ ಜೊತೆಗೂಡಿ ಎಸ್‌ಪಿ ಕಚೇರಿಯತ್ತ ತೆರಳೋಣ.
ಸಾಮಾಜಿಕ ಹೋರಾಟವನ್ನು ಮಾಡುತ್ತಾ ಪತ್ನಿ ,ಮೂವರು ಚಿಕ್ಕ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ
ಒಬ್ಬ ಸಾಮಾನ್ಯ ಬಿಲ್ಲವನಿಗಾದ ಅನ್ಯಾಯವನ್ನು ವಿರೋಧಿಸೋಣ.ಸತ್ಯ ನಿಷ್ಠೆಯ ಪರವಾಗಿ ಒಟ್ಟು ಸೇರೋಣ.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಹಾಗೂ ಸರ್ವಸದಸ್ಯರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)