TOP STORIES:

ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ


ಮಾನವೀಯ ಮೌಲ್ಯಗೆ ಹೊಸ ಭಾಷ್ಯ ಬರೆದ ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ                

ಗರೋಡಿ ಅರ್ಚಕರಿಗೆ ಆಹಾರ ಸಾಮಾಗ್ರಿ ವಿತರಣೆ

  ಧಾರ್ಮಿಕ ಕ್ಷೇತ್ರಗಳನ್ನು ಮಾನವ  ಕಲ್ಯಾಣ ಕೇಂದ್ರಗಳನ್ನು  ರೂಪಿಸಬೇಕು ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡ ಬ್ರಹ್ಮಶ್ರೀನಾರಾಯಣ ಗುರುಗಳಿಂದ ಸ್ಥಾಪನೆಗೊಂಡ  ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಕೇಂದ್ರಿಕರಿಸಿಕೊಂಡು ಮಾನವತಾವಾದಿನಿಷ್ಕಲಂಕ ವ್ಯಕ್ತಿತ್ವದ ಶ್ರೀ ಬಿ.ಜನಾರ್ಧನ ಪೂಜಾರಿ ಇವರ ಮಾರ್ಗದರ್ಶನದಲ್ಲಿ ಜನಪರ ಕಾಳಜಿಯ ಬಹುಮುಖ  ವ್ಯಕ್ತಿತ್ವದನ್ಯಾಯವಾದಿ ಶ್ರೀ ಪದ್ಮರಾಜ್ ರವರ ನೇತೃತ್ವದಲ್ಲಿ  ರಚಿತವಾದ  ಸಂಸ್ಥೆಯೇ ಗುರು ಬೆಳದಿಂಗಳು ಸೇವಾ ಸಂಸ್ಥೆ .  ಕೋರೊನಾಸಂಕಷ್ಟದ ಕಾಲಘಟ್ಟದಲ್ಲಿ  ಸರಕಾರಿ ವ್ಯವಸ್ಥೆಗಳು ಜನರ ಬವಣೆಯನ್ನು ನೀಗಿಸಲು ಹಲವಾರು ಯೋಜನೆಗಳನ್ನು  ರೂಪಿಸಿದರೂಆರ್ಹ ಫಲಾನುಭವಿಗಳನ್ನು ಪೂರ್ಣ ಪ್ರಮಾಣದಲ್ಲಿ  ತಲುಪುವುದು ಅಸಾಧ್ಯವಾಗುತ್ತಿರುವುದು ಕಾಣಬಹುದಾಗಿದೆ.ಸಾಮಾಜಿಕವಾದಮಹತ್ತರವಾದ ಹೊಣೆಗಾರಿಕೆಯಿಂದ ಗುರುತಿಸಿಕೊಂಡ ಗುರುಬೆಳದಿಂಗಳು ಸಂಸ್ಥೆ ಸಾಮಾಜಿಕ ಹಾಗು ಆರ್ಥಿಕ ಮತ್ತು ಆರೋಗ್ಯಸೇವಾ ವಲಯದಲ್ಲಿ ಸಹಾಯಹಸ್ತವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ವ್ಯವಸ್ಥಿತವಾಗಿ ನೀಡುತಿದ್ದು ಸಂಕಷ್ಟಕಾಲಘಟ್ಟದಲ್ಲಿ ಗರೋಡಿಯಲ್ಲಿ ಪೂ ಪೂಜನೆಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಪೂಜಾರಿಗಳಿಗೆ ದೈನಂದಿನ ಉಪಯೋಗಕ್ಕೆಪೂರಕವಾಗಿ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಕುರಿತು ಸರಕಾರಿ ಆಡಳಿತಕ್ಕೆ ಸೇವಾ ಸಂಘಗಳು ಮನವಿಯನ್ನು ಸಲ್ಲಿಸಿದ್ದರೂಕೂಡಾ ಕನಿಷ್ಟ ಸ್ಪಂದನೆಯು ಸಿಗದೇ ಇರುವ ಸಮಯದಲ್ಲಿ ಗುರು ಬೆಳದಿಂಗಳ ಸಂಸ್ಥೆಯ ಉಪಾಧ್ಯಾಕ್ಷರಾದ ಶ್ರೀ ರಘುನಾಥಮಾಬಿಯಾನ್ ಇವರ ಸಮಯೋಚಿತ ನಿಲುವುಗಳನ್ನು ಶ್ರೀ ಪದ್ಮರಾಜ್ ಇವರ ಗಮನಕ್ಕೆ ತಂದಿದ್ದು, ಕ್ಷೀಪ್ರವಾಗಿ ಪ್ರತಿಕ್ರಿಯಿಸಿದಲ್ಲದೇಸಂಸ್ಥೆಯ ವತಿಯಿಂದಲೆ ಸಹಾಯ ಹಸ್ತವನ್ನು ನೀಡುವುದನ್ನು ಪ್ರಕಟಿಸಿ ಕಾರ್ಯತತ್ಪರವಾಗಿ ತಮ್ಮ ಸಂಗಡಿಗರನ್ನು ಒಡಗೂಡಿಸಿಗರೋಡಿ ಗೈಸ್ ಸಂಸ್ಥೆಯು ನೀಡಿದ ಆರ್ಹ ಪಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ  ಕೇವಲ 2 ದಿನಗಳಲ್ಲಿ ಸರಿ ಸುಮಾರು 72 ಕ್ಕೂಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ತಯಾರಿಸಿ ದಿನಾಂಕ 30/05/2021 ರಂದು ಉಡುಪಿಯ ಕಿನ್ನಿಮೂಲ್ಕಿ ಬೆಮ್ಮೆರ್ಬೈದರ್ಲೆ ಗರೋಡಿಯಲ್ಲಿ ಹಿರಿಯರಾದ ಬನ್ನಂಜೆ ಬಾಬು ಅಮೀನ್, ಉಡುಪಿ ವೃತ್ತ ನೀರಿಕ್ಷಕರಾದ ಶ್ರೀ ಮಂಜುನಾಥ ,ಬಿಲ್ಲವ ಯುವವೇದಿಕೆಯ  ಪ್ರವೀಣ ಎಂ ಪೂಜಾರಿ ಯುವವಾಹಿನಿಯ ಪ್ರಮುಖರು ಹಾಗೂ ಗರೋಡಿ ಗೈಸ್ ಸದಸ್ಯರುಗಳ  ಸಮ್ಮುಖದಲ್ಲಿಉಡುಪಿ ಜಿಲ್ಲೆಯ ಗರೋಡಿಗಳ ಪೂ ಪೂಜನೆಯ ಅರ್ಚಕರಿಗೆ ಸಾಂಕೇತಿಕವಾಗಿ ಅಹಾರ ಸಾಮಾಗ್ರಿಗಳ ಕಿಟ್ ಗಳನ್ನುಹಸ್ತಾಂತರಿಸಲಾಯಿತು. ಗುರು ಬೆಳಂದಿಗಳ ಸೇವಾ ಸಂಸ್ಥೆಯ ವೈಶಿಷ್ಟ್ಯ ಪೂರ್ಣ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಆರ್ಥಿಕವಾಗಿ ಸಬಲರುಳ್ಳವರು ದುರ್ಬಲ ವ್ಯಕ್ತಿಗಳಿಗೆ ಸಾಹಾಯ ಹಸ್ತ ನೀಡುವುದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನುಸಜ್ಜುಗೊಳಿಸಿ ತರಬೇತು ನೀಡಲು ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥರವರು  ಕರೆ ನೀಡಿದರು. ಶ್ರೀ ಪದ್ಮರಾಜ್ ರವರುಮಾತನಾಡುತ್ತಾ ಗುರು ಬೆಳಂದಿಗಳು ಸೇವಾ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸುತ್ತಾ ಸಂಸ್ಥೆಯು  ಸದಾಕಾಲದುರ್ಬಲರ ಶೋಷಿತರ ಪರವಾದ ಧ್ವನಿಯಾಗಿ  ಇರುತ್ತದೆ ಎಂಬ ಭರವಸೆಯನ್ನು ನೀಡಿದರು. ಬನ್ನಂಜೆ ಬಾಬು ಅಮೀನ್ ರವರುಮಾತನಾಡುತ್ತಾ ತುಳುನಾಡಿನ ಮಣ್ಣಿನ ಶಕ್ತಿಗಳ ಅಂತಸತ್ವದ  ಪರಿಚಯವನ್ನು ಮಾಡುತ್ತಾ ಕೊರೊನಾ ಕಾಲಘಟ್ಟದಲ್ಲಿ ಸಂಸ್ಥೆಯಸೇವಾಕಾರ್ಯವು ಬೇರೆ ಸಂಸ್ಥೆಗಳಿಗೆ ಮಾದರಿಯಾಗಲಿ  ಎಂದು ಹಾರೈಸಿದರು. ಶ್ರೀ ಭಾಸ್ಕರ ಸುವರ್ಣ ಇವರು ಕಾರ್ಯಕ್ರಮವನ್ನುನಿರ್ವಹಿಸಿ ಸ್ವಾಗತಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಧನ್ಯವಾದ ಸಮರ್ಪಿಸಿದಕಾರ್ಯಕ್ರಮದಲ್ಲಿ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಕುಮಾರ್ , ಮಂಜೇಶ್ ಕುಮಾರ್ , ಯುವವಾಹಿನಿಗರೋಡಿ ಗೈಸ್  ಗುರುಬೆಳದಿಂಗಳು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಸಾಮಾಜಿಕ ಸೇವಾ ಸಂಸ್ಥೆಯಲ್ಲಿ ಆತ್ಮ ಸಮರ್ಪಣಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಗುರು ಬೆಳದಿಂಗಳು ಸಂಸ್ಥೆಯ ಮಾನವೀಯ ಮೌಲ್ಯದ ಕಾರ್ಯಗಳು ಹೊಸಭಾಷ್ಯವನ್ನು ಬರೆದಂತಾಗಿದೆ.ಕಳೆದ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ 350 ಕಿಂಟ್ವಾಲ್ ಅಕ್ಕಿ ಹಾಗೂ ಪ್ರತಿ ದಿನ 1200 ಜನರಿಗೆಊಟದ ವ್ಯವಸ್ಥೆಯನ್ನು  ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಿರ್ವಹಿಸಲ್ಪಟ್ಟಿದ್ದು ಜನಮನ್ನಣೆಗೆ ಪಾತ್ರವಾಗಿರುತ್ತದೆ. ಗುರುಬೆಳದಿಂಗಳು ಸಂಸ್ಥೆಯು ಕೇವಲ ಜಿಲ್ಲೆಗೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿ ಮನುಕುಲದ ಅಭಿವೃದ್ದಿಗೆನಾರಾಯಣಗುರುಗಳು ನೀಡಿದ ಕೊಡುಗೆಯನ್ನು ಮುಂದುವರೆಸುವ ಶಕ್ತಿಯಾಗಿ ಮೂಡಿಬರಲೆಂದು ಹಾರೈಸುತ್ತೇವೆ.

ಬರಹ : ಪಾಂಡು ಕೋಟ್ಯಾನ್ ಕೆಳಾರ್ಕಳಬೆಟ್ಟು

 

 


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »