ಮಂಗಳೂರು: ನಮ್ಮಲ್ಲಿರುವ ಕೃಷಿ ತೋಟಗಳಲ್ಲಿ ದೊರಕುವ ಹಡೆ ಬಳ್ಳಿ ಮಾರಕ ಕ್ಯಾನ್ಸರ್ ರೋಗಕ್ಕೆ ಮದ್ದು ಎನ್ನುವುದನ್ನು ಮಂಗಳೂರಿನ ಸಸ್ಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಮಂಗಳೂರಿನ ವಿಜ್ಞಾನಿಗಳು ಹಡೆ ಬಳ್ಳಿ ಮೇಲೆ ಸಂಶೋಧನೆ ನಡೆಸಿದ್ದು ಮಾತ್ರವಲ್ಲದೆ ಅದನ್ನು ಶುದ್ಧೀಕರಣ ಮಾಡಿ ಕ್ಯಾನ್ಸರ್ ಗೆ ರಾಮಬಾಣವಾಗುವ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಇದಕ್ಕೆ ಭಾರತ ಸರಕಾರದಿಂದ ಪೇಟೆಂಟ್ ಸಹ ಪಡೆದಿದ್ದಾರೆ. ಹಡೆ ಬಳ್ಳಿ ಮೇಲೆ ನಡೆದ ದೇಶದ ಮೊದಲ ಸಂಶೋಧನೆ ಇದಾಗಿದ್ದು , ಭಾರತದ ಮೊದಲ ಪೇಟೆಂಟ್ ಸಹ ಇದಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ಸಂಶೋಧಕರಾದ ಪ್ರೊ. ಕೆ. ಆರ್.ಚಂದ್ರಶೇಖರ್ ಮತ್ತು ಪ್ರೊ. ಭಾಗ್ಯ ನಕ್ರೆ ಕಲಾಯ ಹಡೆ ಬಳ್ಳಿ ಯನ್ನೂ ಸಂಶೋಧನೆ ಮಾಡಿದ್ದು,ಸದ್ಯ ಈ ಇಬ್ಬರು ವಿಜ್ಞಾನಿಗಳು ಮಂಗಳೂರು ಖಾಸಗಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವಿಜ್ಞಾನಿಗಳು 2017 ರಂದು ಸಂಶೋಧನೆ ನಡೆಸಿ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಬಹಳ ಸಮಯದ ನಂತರ ಪೇಟೆಂಟ್ ಲಭ್ಯವಾಗಿದೆ.20 ವರ್ಷಗಳ ಅವಧಿಗೆ ಪೇಟೆಂಟ್ ಲಭ್ಯವಾಗಿದ್ದು,ಈ ಸಂಶೋಧನಾ ಅಂಶ ಬಳಸಿ ಔಷಧಿ ತಯಾರಿಸಬಹುದಾಗಿದೆ. ಅಂಗಾಂಗ ಕಸಿ ಮಾಡಿದ ನಂತರ ರಾಸಾಯನಿಕ ಅಂಶ ಪತ್ತೆ ಮಾಡುವ ಸಂದರ್ಭದಲ್ಲಿ ಕ್ಯಾನ್ಸರ್ ಗೆ ಮರಕವಾಗಬಲ್ಲ ಟೆಂಟ್ರಾಡೈನ್ ಅಂಶವು ಈ ಹಡೆಬಳ್ಳಿ ಯಲ್ಲಿ ಇರುವ ಅಂಶ ಪತ್ತೆಯಾಗಿದೆ. ಭಾರತದಲ್ಲಿ ಇಲ್ಲಿಯವರೆಗೆ ಯಾರೂ ಕೂಡ ಈ ವಿಷಯದಲ್ಲಿ ಸಂಶೋಧನ ಮಾಡಿರಲಿಲ್ಲ. ಅದರಿಂದಾಗಿ ಇದು ಭಾರತದ ಮೊದಲ ಸಂಶೋಧನೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಇದಕ್ಕೂ ಹಿಂದೆ ಚೀನಾದಲ್ಲಿ ಈ ರೀತಿಯ ಸಂಶೋಧನೆ ಮಾಡಲಾಗಿತ್ತು.ಅಲ್ಲಿನ ಬಳ್ಳಿಯಲ್ಲಿ ಟೆಂಟ್ರಾಡೈನ್ ಅಂಶವನ್ನು ಪತ್ತೆಮಾಡಿದ್ದರು. ಸಾಮಾನ್ಯವಾಗಿ ಈ ಹಡೆ ಬಳ್ಳಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗದಲ್ಲಿ ಹೇರಳವಾಗಿ ದೊರೆಯುತ್ತವೆ. ಹಳ್ಳಿ ಜನರು ಈ ಬಳ್ಳಿಯನ್ನು ಹರೆದು ಹಣೆಗೆ ಹಚ್ಚುತ್ತಿದ್ದರು. ನೆಗಡಿ ಜ್ವರ ಶೀತ , ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ಇದು ಔಷಧವಾಗಿದೆ