ಮಾರ್ಚ್ 6ರಿಂದ 13ರವರೆಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ವಾರ್ಷಿಕ ಜಾತ್ರೆ, ಮಹಾ ಶಿವರಾತ್ರಿ ಮಹೋತ್ಸವ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಾರ್ಚ್ 6ರಿಂದ 13ರ ವರೆಗೆ ವರ್ಷಾವಧಿ ಜಾತ್ರೆ ಮತ್ತು ಮಹಾಶಿವರಾತ್ರಿ ಮಹೋತ್ಸವ ಆಚರಣೆ ಜರುಗಲಿದೆ.
ಮಾರ್ಚ್ 6: ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ಧ್ವಜಪೂಜೆ, ಬೆಳಗ್ಗೆ 10.35ಕ್ಕೆ ಧ್ವಜಾರೋಹಣ, ತೈಲಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ,ರಾತ್ರಿ 7ರಿಂದ 8ರವರೆಗೆ ಭಜನಾ ಕಾರ್ಯಕ್ರಮ, 8 ಗಂಟೆಗೆ ಮಹಾಪೂಜೆ, ಬಲಿ ಉತ್ಸವ , ಶಯನೋತ್ಸವ.
ಮಾರ್ಚ್ 7: ಬೆಳಗ್ಗೆ 10.30ಕ್ಕೆ ಮಹಾ ಮೃತ್ಯುಂಜಯ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ, ರಾತ್ರಿ 7ರಿಂದ 8ರವರೆಗೆ ಭಜನಾ ಕಾರ್ಯಕ್ರಮ. 8ಗಂಟೆಗೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 8: ಬೆಳಗ್ಗೆ 10.30ಕ್ಕೆ ಶಿವ ಶಾಸ್ತ್ರನಾಮ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ, ರಾತ್ರಿ 7ರಿಂದ 8ರವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 9:ಬೆಳಗ್ಗೆ 10.30ಕ್ಕೆ ಶಿವ ಪಂಚಾಕ್ಷರಿ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ ರಾತ್ರಿ 7ರಿಂದ 8ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 10: ಬೆಳಗ್ಗೆ 8.15ಕ್ಕೆ ಮಹಾರುದ್ರ ಹೋಮ ಪ್ರಾರಂಭ, ಪಾರ್ವತಿ – ಪರಮೇಶ್ವರ ಯಜ್ಞಮಂಟಪ ಪ್ರವೇಶ ಮತ್ತು ಹಗಲೋತ್ಸವ ಬಲಿ. ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ ರಾತ್ರಿ 7ರಿಂದ 8ರ ತನಕ ಭಜನಾ ಕಾರ್ಯಕ್ರಮ. 8ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 11:ಬೆಳಗ್ಗೆ 9.30ಕ್ಕೆ ಉಮಾಮಹೇಶ್ವರ ಹೋಮ, 11ಕ್ಕೆ ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ, ಮಧ್ಯಾಹ್ನ 1ಕ್ಕೆ ಮಹಾಪೂಜೆ. ರಾತ್ರಿ 8ಕ್ಕೆ ಸೇವಾ ರಥೋತ್ಸವ, 10ಕ್ಕೆ ವಿಷ್ಣುಬಲಿ ಉತ್ಸವ ಮತ್ತು ರಥೋತ್ಸವ. ರಾತ್ರಿ 1ಕ್ಕೆ ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ , ರಥೋತ್ಸವ , ಕೆರೆದೀಪ , ಮಂಟಪ ಪೂಜೆ.
ಮಾರ್ಚ್: 12:ಬೆಳಗ್ಗೆ 10ಕ್ಕೆ ತತ್ವ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ , ಮಹಾಪೂಜೆ. ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ. ರಾತ್ರಿ 2ರಿಂದ ಭೂತ ಬಲಿ, ಬಲಿಪೂಜೆ, ಅವಭೃತ ಸ್ನಾನ (ಓಕುಳಿ).
ಮಾರ್ಚ್ 13: ಮಧ್ಯಾಹ್ನ 11ಕ್ಕೆ ಧ್ವಜಾವರೋಹಣ. ರಾತ್ರಿ 8ಕ್ಕೆ ಗುರುಪೂಜೆ ಜರುಗಲಿದೆ.
ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ಕ್ಷೇತ್ರಾಡಳಿತ ಸಮಿತಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ