TOP STORIES:

ಮೂರು ದಶಕಗಳ ಸಾರ್ಥಕ ಸೇವೆಯಿಂದ ಡಾ. ಸದಾನಂದ ಪೆರ್ಲ ಆಕಾಶವಾಣಿಯಿಂದ ನಿವೃತ್ತಿ


ಕಲ್ಬುರ್ಗಿ : ಕರ್ನಾಟಕ ರಾಜ್ಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು ಹಾಗೂ ಆಕಾಶವಾಣಿಯ ಹಿರಿಯಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಅವರು ಆಕಾಶವಾಣಿಯಲ್ಲಿ 30 ವರ್ಷಗಳ ಸಾರ್ಥಕ ಸೇವೆಯನಂತರ ಕಲ್ಬುರ್ಗಿ ಆಕಾಶವಾಣಿಯಿಂದ ಮೇ 31 ರಂದು ನಿವೃತ್ತಿ ಹೊಂದಿದರು.

       ಡಾ. ಸದಾನಂದ ಪೆರ್ಲ ಅವರು ಮೂಲತಃ ಕಾಸರಗೋಡು ಪೆರ್ಲದವರಾಗಿದ್ದು 1994 ಅಕ್ಟೋಬರ 12ರಂದುಕಲಬುರ್ಗಿ ಆಕಾಶವಾಣಿಯಲ್ಲಿ ಪ್ರಸಾರ ನಿರ್ವಾಹಕರಾಗಿ ಸೇವೆಗೆ ಸೇರಿ 29 ವರ್ಷ 8 ತಿಂಗಳುಗಳ ಕಾಲ ಕಾರ್ಯಕ್ರಮವಿಭಾಗದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ್ದಾರೆ. ಕಲಬುರ್ಗಿ ಆಕಾಶವಾಣಿಯಲ್ಲಿ ಒಟ್ಟು 20 ವರ್ಷಗಳ ಕಾಲಮಂಗಳೂರು ಆಕಾಶವಾಣಿಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಕೇಳುಗವೃಂದಕ್ಕೆ ನೀಡಿದ ಹೆಗ್ಗಳಿಕೆ ಅವರದು. ಕಲ್ಬುರ್ಗಿ ಆಕಾಶವಾಣಿಯನ್ನು ಜನಮಾನಸಕ್ಕೆ ಮುಟ್ಟಿಸಿ ಜನಪ್ರಿಯಗೊಳಿಸಿದವರು. ನೇರ ಫೋನ್ಇನ್ ಸಂವಾದ ಸಂದರ್ಶನ ,ರೂಪಕ ,ನಾಟಕ ಮಾತುಕತೆ ಭಾಷಣ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುವದರ್ಪಣ, ಕೃಷಿ ರಂಗ ಮುಂತಾದ ವಿವಿಧ ವಿಭಾಗಗಳಲ್ಲಿ ತನ್ನ ಪ್ರತಿಭಾ ಸಂಪನ್ನತೆಯನ್ನು ಮೆರೆದ ಇವರು ಜನಾನುರಾಗಿಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಹೆಸರು ಮಾಡಿದವರು. ಸಾಪ್ತಾಹಿಕ ಸಂಕೀರ್ಣನೀವೇನಂತೀರಿ, ಜೊತೆಜೊತೆಯಲಿ ಫೋನ್ಇನ್ ಕಾರ್ಯಕ್ರಮ, ಹೊಸ ಓದು, ಗಾಂಧೀ ಸ್ಮೃತಿ ಮಾತೇಕತೆ ಮುಂತಾದ ಹತ್ತು ಹಲವುಕಾರ್ಯಕ್ರಮಗಳ ಮೂಲಕ ಶ್ರೋತ್ರು ಗಳನ್ನು ಮುಟ್ಟಿದವರು. ಅಮೃತ ಸ್ವಾತಂತ್ರ್ಯದ ಹೆಜ್ಜೆಗಳು ಸರಣಿಯನ್ನು ನೇರಪ್ರಸಾರದಲ್ಲಿ ಬಿತ್ತರಿಸಿ ಕೃತಿಗೆ ತಂದವರು . ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 32 ಗಂಟೆಗಳ ಕಾಲ ಕಲ್ಬುರ್ಗಿ ಆಕಾಶವಾಣಿಯಲ್ಲಿ ನೇರ ಪ್ರಸಾರದಲ್ಲಿ ಬಿತ್ತರ ಮಾಡಿ ದಾಖಲೆ ನಿರ್ಮಿಸಿದವರು. ಕರೋನಾಸಂದರ್ಭದಲ್ಲಿ ಜನರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲು 120ಕ್ಕೂ ಹೆಚ್ಚು ನೇರ ಫೋನ್ ಇನ್ ಸಂವಾದವನ್ನುನಡೆಸಿ ಆಕಾಶವಾಣಿಯನ್ನು ಜನಮಾನಸಕ್ಕೆ ಕೊಂಡೋಯ್ದವರು. ಮಂಗಳೂರು ಆಕಾಶವಾಣಿಯಲ್ಲಿ 10 ವರ್ಷಗಳ ಕಾಲತುಳುಕನ್ನಡ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಛಾಪು ಮೂಡಿಸಿ ಬಾನುಲಿಯನ್ನು ಕರಾವಳಿಯ ಮನೆ ಮಾತಾಗಿಸಿದವರು. ಗಾಂಪಣ್ಣನ ತಿರುಗಾಟ , ಸ್ವರಮಂಟಮೆ ಎಂಬ ಅನೇಕ ಸಾರ್ಥಕ ತುಳು ಕಾರ್ಯಕ್ರಮಗಳು ಅಚ್ಚುಮೆಚ್ಚಿನದು. ಚಾವಡಿಮದಿಪು, ಜವ್ವನೆರೆ ಕಲ, ಸಿರಿ ದೊಂಪ, ಪದರಂಗೀತ, ತುಳು ಕಾರ್ಯಕ್ರಮಗಳು ,ಬಾನುಲಿ ಗ್ರಾಮಾಯಣ,ರೇಡಿಯೋ  ಪಾರ್ಲರ್ ಎಂಬ ಕಾರ್ಯಕ್ರಮಗಳ ಮೂಲಕ ಹಾಗೂ ಹರ್ಷ ವಾರದ ಅತಿಥಿಯ ಮೂಲಕ ಕರಾವಳಿಯ ಸಾಧಕರನ್ನುನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಇವರದು. ಹರ್ಷದ ಅತಿಥಿ ಕೃತಿ ರೂಪಕ್ಕೆ ಬಂದು ದಾಖಲೆ ಮಾಡಿರೋದು ಉಲ್ಲೇಖನೀಯ. ಕೊಲ್ಲೂರು ನವರಾತ್ರಿ ಉತ್ಸವ, ಧರ್ಮಸ್ಥಳ ಲಕ್ಷದೀಪೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನಗಳು,ಭೂತನಾಥೇಶ್ವರಕ್ರೀಡೋತ್ಸವ, ಕರಾವಳಿ ಉತ್ಸವ, ಅಬ್ಬಕ್ಕ ಉತ್ಸವ, ಆಳ್ವಾಸ್ ನುಡಿಸಿರಿ ಕರ್ಣಾಟಕ ಬ್ಯಾಂಕ್ ಸಂಸ್ಥಾಪನ ದಿನ, ಉಡುಪಿಯ ಪರ್ಯಾಯ ಮಹೋತ್ಸವ ಹೀಗೆ ಹಲವಾರು ಬೃಹತ್ ಕಾರ್ಯಕ್ರಮಗಳಿಗೆ ಆಕಾಶವಾಣಿಯ ನೇರ ಪ್ರಸಾರಸೇವೆ ಒದಗಿಸಿ, ಜನರ ಬಳಿಗೆ ಬಾನುಲಿಯನ್ನು ಕರೆದೊಯ್ದ ಹೆಗ್ಗಳಿಕೆ ಇವರದು. ಬಾನುಲಿ ಗ್ರಾಮಾಯಣದ ಮೂಲಕ ಗ್ರಾಮವಾಸ್ತವ್ಯ ಮಾಡಿ ವಿಶೇಷ ಕಾರ್ಯಕ್ರಮ ಬಿತ್ತರಿಸಿದ್ದಲ್ಲದೆ ಹಲವಾರು ಗ್ರಾಮಗಳಲ್ಲಿ ರೇಡಿಯೋ ಹಂಚಿ ದಾಖಲೆನಿರ್ಮಿಸಿದವರು. ತಮ್ಮ ಅಸಾಧಾರಣ ಪ್ರತಿಭೆ, ವಿದ್ವತ್ತು ಮುಂತಾದವುಗಳನ್ನು ಬಳಸಿ ಬಾನುಲಿಗೆ ಹೊಸ ರೂಪವನ್ನುಕೊಟ್ಟವರು. ಇದಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಾಟಕ ನಿರ್ಮಾಣದಲ್ಲಿ ಪ್ರಥಮ ಬಹುಮಾನವನ್ನು ಪಡೆದು ಹೆಸರುಮಾಡಿದರು.ಆಕಾಶವಾಣಿ ವಾಣಿಜ್ಯ ಗಳಿಕೆಯಲ್ಲಿ  ಇವರ ಸಾಧನೆಗೆ ಪುರಸ್ಕಾರ ಲಭಿಸಿದೆ.

                       ಪೋಷಣ ಅಭಿಯಾನ ವಿಶೇಷ ಕಾರ್ಯಕ್ರಮಕ್ಕೆ ಪ್ರಶಸ್ತಿ ಲಭಿಸಿದೆ. ಇವರ ಮಾಧ್ಯಮ ಸೇವೆಯನ್ನು ಪರಿಗಣಿಸಿಕರ್ನಾಟಕ ಸರಕಾರವು 2013ರಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಇದುವರೆಗೆ ಆರುಕೃತಿಗಳನ್ನು ಹೊರತಂದಿದ್ದು ಕಯ್ಯಾರರ ಸಾಹಿತ್ಯ ಮತ್ತು ಕಾಸರಗೋಡಿನ ಹೋರಾಟ ಮಹಾಪ್ರಬಂಧವನ್ನು ಮಂಡಿಸಿಡಾಕ್ಟರೇಟ್ ಪಡೆದವರು. ದುಬೈಯಲ್ಲಿ ನಡೆದ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡವರು ಅನೇಕರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸ ನೀಡಿ ಗೌರವಕ್ಕೆ ಪಾತ್ರರಾದವರು. ಕರಾವಳಿಯಿಂದಕರ್ನಾಟಕದ ಉತ್ತರದ ಜಿಲ್ಲೆ ಧರಿನಾಡು ಬೀದರ್ ವರೆಗೆ ತಮ್ಮ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಮತ್ತು ವಾಕ್ಪಟುತ್ವದಿಂದಜನಾನುರಾಗಿ ಆದವರು. ಉತ್ತಮ ವೀಕ್ಷಕ ವಿವರಣೆಯನ್ನು ನೀಡುವ ಇವರು ಶಬರಿಮಲೆಯಲ್ಲಿ ಮಕರ ಜ್ಯೋತಿಸಂದರ್ಭದ ರಾಜ್ಯ ಮಟ್ಟದ ನೇರ ಪ್ರಸಾರದ ವೀಕ್ಷಕ ವೀಕ್ಷಣೆಯನ್ನು ನೀಡಿ ಖ್ಯಾತರಾದವರು. ಕಲ್ಬುರ್ಗಿ ದೂರದರ್ಶನಕೇಂದ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ಚುನಾವಣಾ ನೇರ ಪ್ರಸಾರದ ವಿವರಣೆ ನೀಡಿದವರು. ಕಲ್ಬುರ್ಗಿಯಲ್ಲಿ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿರುವ ಇವರು ಸಾಂಸ್ಕೃತಿಕ, ಸಾಮಾಜಿಕಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನಸೇವೆ ನಿರತರಾಗಿದ್ದಾರೆ.

ಕಳೆದ ಮೂರು ದಶಕಗಳಿಂದ ಮಾಧ್ಯಮ ರಂಗಕ್ಕೆ ನೀಡಿದ ಗಣನೀಯ ಸೇವೆಗಾಗಿ ಕಲ್ಬುರ್ಗಿ ಆಕಾಶವಾಣಿಯಲ್ಲಿ ನಿವೃತ್ತಿಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಗೌರವಿಸಿ ಪೆರ್ಲ ಅವರ ಸೇವೆ ಭಾಗಕ್ಕೆ ಇನ್ನಷ್ಟುಬೇಕಾಗಿದೆ ಮತ್ತು ಅವರ ದೂರದೃಷ್ಟಿ ಆಲೋಚನೆ ಅತ್ಯಂತ ಉಪಯುಕ್ತ ಎಂದು ಅವರು ಸಂದರ್ಭದಲ್ಲಿ ಹೇಳಿದರು .

              ಕಲ್ಬುರ್ಗಿ ಆಕಾಶವಾಣಿಯ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಸಂಜೀವ್ ಕುಮಾರ್ ಮಿರ್ಜಿ ಮತ್ತುತಾಂತ್ರಿಕ ವಿಭಾಗದ ಉಪನಿರ್ದೇಶಕರಾದ ಜಿ. ಗುರುಮೂರ್ತಿ ಅವರು ಮೈಸೂರು ಪೇಟ, ಶಾಲು, ಹಾರ ಹಾಗೂ ಸ್ಮರಣಿಕೆನೀಡಿ ಗೌರವಿಸಿ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ತಾಂತ್ರಿಕ ವಿಭಾಗದ ಅಶೋಕ್ ಕುಮಾರ ಸೋ0ಕಾವಡೆ, ಕುಮಾರ್ಅಮರಗೊಳ್  ಸೇವೆಯಿಂದ ನಿವೃತ್ತಿ ಹೊಂದಿದ್ದು ಅವರನ್ನು ಆತ್ಮೀಯವಾಗಿ ಗೌರವಿಸಿ ಬೀಳ್ಕೊಡಲಾಯಿತು. ಸಂದರ್ಭದಲ್ಲಿ ಸಂಗಮೇಶ್ ಶ್ರೀಮತಿ ಶಾರದಾ ಜಂಬಲದಿನ್ನಿ, ನಿವೃತ್ತಅಧಿಕಾರಿಗಳಾದ ಅನಿಲ್ ಕುಮಾರ್ ಹೆಚ್ ಎನ್ರಾಜೇಂದ್ರ ಕುಲಕರ್ಣಿ ಜಿ ವಿಜಯಕುಮಾರ್ ಗೋವಿಂದ ಕುಲಕರ್ಣಿ ಪ್ರಭು ನಿಷ್ಟಿ, ಶಿವಯೋಗಿ ಎಂ ಕೋರಿ, ಮೊಹಮ್ಮದ್ಅಬ್ದುಲ್ ರವೂಫ್, ಅನಿಲ್ ಕುಮಾರ್ ಶರಣಬಸಪ್ಪ ಬೈರ್ಜಿ ಅನುಷಾ ಡಿ.ಕೆ, ಸುರೇಶ್ ರಾಂಪುರೆ, ಶ್ರೀಮಂತ ನಾಲವಾರ, ಬಾಳಪ್ಪ ,ಶೇಷಗಿರಿ ನಾಮದೇವ  ಅವಿನಾಶ್, ಕುಪೇಂದ್ರ ಶಾಸ್ತ್ರಿ ಕೃಷ್ಣಮೂರ್ತಿ ಹಳ್ಳಿಕೇಡ್,(ಬಿ) ಭೀಮರಾವ್, ಹೇಮನೂರಮತ್ತಿತರ ಅನೇಕರು ಉಪಸ್ಥಿತರಿದ್ದರು. ಆಕಾಶವಾಣಿಯ ಉದ್ಘೋಷಕರು,ಕಾರ್ಯಕ್ರಮ ನಿರ್ಮಾಣ ಸಹಾಯಕರುಹಾಜರಿದ್ದರು.


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »