ಮೂರ್ತೆದಾರರ ಸೇವಾ ಸಹಕಾರಿ ಬ್ಯಾಂಕ್ ಕುಂಬ್ರ ಇದರ ವಿಶಿಷ್ಟ ಸಾಧನೆಗೆ ಡಿಸಿಸಿ ಬೇಂಕ್ ಮಹಾಸಭೆಯ ಸಂದರ್ಭದಲ್ಲಿ ವಿಶೇಷ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಆರ್ ಸಿ ನಾರಾಯಣ್ ಮತ್ತು ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ನೀಡಿದರು ಈ ಸಂದರ್ಭದಲ್ಲಿ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್ ಬಿ ಜಯರಾಮ ರೈ ,ಪ್ರಸಾದ್ ಕೌಶಲ್ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರನಿರ್ದೇಶಕರಾದ ನಿತೀಶ್ ಕುಮಾರ್ ಶಾಂತಿನವ ಉಪಸ್ಥಿತರಿದ್ದರು. ಸಂಸ್ಧೆಯು ಪುತ್ತೂರು ತಾಲ್ಲೂಕಿನ 14 ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿದೆ .ಕುಂಬ್ರ ಅಕ್ಷಯ ಆರ್ಕೇಡ್ ನಲ್ಲಿ ಸಂಪೂರ್ಣಕಂಪ್ಯೂಟರೀಕೃತ ಹಾಗು ಆಧುನಿಕ ರೀತಿಯ ಬ್ಯಾಂಕಿಂಗ್ ಸೇವೆ ನೀಡುತ್ತಿದೆ . ಒಳಮೊಗರು ,ಅರಿಯಡ್ಕ,ಕೆದಂಬಾಡಿ, ಕೆಯ್ಯಾರು, ಪಾಲ್ತಾಡಿ, ಕೊಳ್ತಿಗೆ,ಮಾಡ್ನೂರು,ನೆಟ್ಟಣಿಗೆ ಪಮೂಡ್ನೂರು,ಪಡುವನ್ನೂರು,ಬಡಗನ್ನೂರು,ನಿಡ್ಪಳ್ಳಿ,ಪಾಣಾಜೆ,ಬೆಟ್ಟಂಪಾಡಿ,ಇರ್ದೆ ಗ್ರಾಮಗಳ ವ್ಯಾಪ್ತಿ ಇದೆ . ನಮ್ಮಲ್ಲಿ ಎಲ್ಲಾ ತರದ ಸಾಲ ಸೌಲಭ್ಯ ಇದ್ದು ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಸ್ವೀಕರಸಲಾಗುವುದು. ಗ್ರಾಮಾಂತರ ಪ್ರದೇಶದ ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ವ್ಯವಸ್ಧೆ, ಇ–ಸ್ಟ್ಯಾಂಪ್ ಪೇಪರ್ ಸೌಲಭ್ಯ ಇದೆ, ಅರ್.ಟಿ.ಸಿ, ಪ್ರಿಂಟ್ ಪಾನ್ ಕಾರ್ಡ್ ವ್ಯವಸ್ಧೆ ಮಾಡಿಕೊಡಲಾಗುವುದು