ಒಬ್ಬ ವ್ಯಕ್ತಿ ತನ್ನ ನಿಸ್ವಾರ್ಥ ಸೇವೆಯಿಂದ ಇನ್ನೊಬ್ಬರ ಬದುಕಿನ ಚಿತ್ರಕ್ಕೆ ಬಣ್ಣದಿಂದ ಕೂಡಿದ ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೋ ಆಗ ಮಾತ್ರ ವೇದಿಕೆ ಸಿಗುತ್ತದೆ ತನ್ನಲಿರುವ ಪ್ರತಿಭೆಯ ಜೊತೆಗೆ ಇನೊಬ್ಬರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ವೇದಿಕೆ ಕಲ್ಪಿಸಿಕೊಡುವ ಯುವ ಪ್ರತಿಭೆ ಅರ್ವಿಂದ್ ವಿವೇಕ್.
ಮಂಗಳೂರಿನ ಪುತ್ತುರ್ ನಲ್ಲಿ ಪುಟ್ಟ ಹಳ್ಳಿಯಲ್ಲಿ ಜನಿಸಿದ ಇವರು, ಬೆಳೆದ್ದದು ಬೆಳ್ತಂಗಡಿ ತಾಲೂಕಿನ ಮಡ್ಯಾಂತರು. ಸಣ್ಣ ವಯಸ್ಸಿನಿಂದಲೇ ಹಾಡುವುದು ಎಂದರೆ ಪಂಚಪ್ರಾಣ. ಮನೆಯಲ್ಲಿ ಯಾರ ಪ್ರೋತ್ಸಾಹ ಸಿಗಲಿಲ್ಲ ಆದರೂ ಸಂಗೀತದ ಹುಚ್ಚ ಬಿಡಲಿಲ್ಲ. ತುಳುಚಿತ್ರರಂಗ, ರಂಗ ಭೂಮಿಯಲ್ಲಿ ಹಾಡಲು ಮೊದಲು ಬಾರಿಗೆ ಅವಕಾಶ ಕಲ್ಪಿಸಿಕೊಟ್ಟು ಸ್ನೇಹ ಮ್ಯೂಸಿಕ್ ನ ಪ್ರಶಾಂತ್ ಭಾರದ್ವಾಜ್ ಇವರ ಜೊತೆ ಅನೇಕ ಕಾರ್ಯಕ್ರಮಗಲ್ಲಿ 400 ಕ್ಕೂ ಹೆಚ್ಚು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ ಇವರು ಕಾರಣಾಂತರದಿಂದ ಸಂಗೀತದಿಂದ ದೂರಾನೇ ಉಳಿದರು.
ನಂತರ 2006 ರಲ್ಲಿ ಗಾಯನದ ಜೊತೆ ಸಂಗೀತ ನಿರ್ದೇಶಕರಾಗಿ ರಂಗಭೂಮಿ ಪ್ರವೇಶಮಾಡಿದ ಇವರು ಮತ್ತೆ ಹಿಂದೆ ನೋಡಲಿಲ್ಲ, ಒಂದು ಕಾಲದಲ್ಲಿ ನಾಟಕದಲ್ಲಿ ಹಿನ್ನಲೆ ಹಾಡುಗಾರ ನಾಗಿದ್ದ ಇವರು ನಾಟಕ ಸೂಪರ್ ಹಿಟ್ ಆಗುವುದರಲ್ಲಿ ಎರಡು ಮಾತಿಲ್ಲ ಮತ್ತು ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಡುಗಾರರು ಆಗಿದ್ದರು ಸ್ಥಳೀಯ ನಾಟಕ ನಿಂತು, ಟೀಮ್ ನಾಟಕ ಆದಾಗ ಲ್ಯಾಪ್ ಟಾಪ್ ಸಂಗೀತ ಶುರು ಆದಾಗ ರಂಗ ಭೂಮಿಯಿಂದ ದೂರ ಸರಿದು ಸಂಗೀತ ರಸ ಮಂಜರಿ ಕಾರ್ಯಕ್ರಮ ನೀಡಲು ಶುರು ಮಾಡಿದ ಇವರು ಅನೇಕ ಹೊಸ ಪ್ರತಿಭೆಗಳು ಪರಿಚಯ ಮಾಡಿ ಕೊಟ್ಟು ಅವರಿಗೆ ವೇದಿಕೆ ಕಲ್ಪಿಸಿ ಕೊಟ್ಟರು.
20ವರ್ಷದಿಂದ ಸಂಗೀತ ಕ್ಷೇತ್ರದಲ್ಲಿ ಇದ್ದ ಇವರು ಕಳೆದ ನಾಲ್ಕು ವರ್ಷದಿಂದ ಉತ್ತಮ ಸಂಗೀತ ನಿರೂಪಕರಾಗಿ ಹೆಸರು ಗಳಿಸಿದ್ದಾರೆ.
ಇಡೀ ಜಗತ್ತಿನಲ್ಲಿ ಮಹಾಮಾರಿ ಕೋರೋಣ ಬಂದು ಲಾಕ್ಡೌನಿಂದ ಬೇಸತ್ತ ಜನರ ಮನಸ್ಸನ್ನು ಮುದಗೊಳಿಸಲು ಸಂಗೀತ ಫೇಸ್ಬುಕ್ ಲೈವ್ ಪ್ರೋಗ್ರಾಮ್ ಪ್ರಾರಂಭಿಸಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ 40ಕ್ಕೂ ಹೆಚ್ಚು ಲೈವ್ ಪ್ರೋಗ್ರಾಮ್ ಯಶಸ್ವಿ ಮಾಡಿ ಅನೇಕ ಪ್ರತಿಭೆಗಳ ಪರಿಚಯ ಮಾಡಿ ಅವರಿಗೆ ಮುನ್ನಡೆಯಲು ಅವಕಾಶ ಮಾಡಿಕೊಟ್ಟ ಹೆಮ್ಮೆ ಇವರದ್ದು. ಇವರ ಈ ಲೈವ್ ಪ್ರೋಗ್ರಾಮ್ ಲಕ್ಷಾಂತರ ವೀಕ್ಷಕರು ನೋಡುವುದರ ಮೂಲಕ ಇವರ ಹೆಸರು ಇನ್ನಷ್ಟು ಎತ್ತರಕ್ಕೆ ಬೆಳೆಯಿತ್ತು.
ತನ್ನ ಪ್ರತಿಭೆ ಜೊತೆ ಇನ್ನೊಬ್ಬರ ಪ್ರತಿಭೆಗೆ ಪ್ರೋತ್ಸಾಹ ಕೊಡುವ ಇವರ ಒಳ್ಳೆಯ ಮನಸ್ಸಿಗೆ ದೇವರ ಅನುಗ್ರಹ ಸದಾ ಇರಲಿ ಸಂಗೀತದಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡವಲಿ ಯಶಸ್ವಿಯಾಗಲಿ ಎಂದು ದೇವರಲ್ಲಿ ಬೇಡುವ.
ಪ್ರಶಾಂತ್ ಅಂಚನ್ – ಮಸ್ಕತ್ತ್ (Billava warriors)