TOP STORIES:

ರಂಜು ತುಳುರಂಗ ಪ್ರೇಮಿ‌ ರಂಜಿತ್ ಕಕ್ಕಿಂಜೆ


ತುಳುನಾಡಿನ ಕಲಾವಿದರ ಧ್ವನಿಯಾಗಿ,ಪ್ರೋತ್ಸಾಹದ ಗರಿಯಾಗಿ,ಕಲಾ‌ ಪೋಷಕನಾಗಿ ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ ಆ ಒಂದು ಹೆಸರು ರಂಜು. ಓರ್ವ ಕಲಾವಿದನಿಗೆ ತಾನು ಬೆಳೆಯುತ್ತಾ ಇತರರನ್ನು ಬೆಳೆಸುವ ಗುಣವಿರಬೇಕಂತೆ.ಇನ್ನೊಬ್ಬರ ಪ್ರತಿಭೆಯಲ್ಲಿ ಮನೋಲ್ಲಾಸವನ್ನು ಪಡೆಯಬೇಕಂತೆ.

ಇಂತಹ ನೈಜ ಪಾರದರ್ಶಕ ಗುಣವಿರುವಂತಹ ವ್ಯಕ್ತಿಯೇ ರಂಜಿತ್ ಕಕ್ಕಿಂಜೆ.ಅದರಲ್ಲಿಯೂ ತಾನು ನಿಂತ ನೆಲೆಯಾದ ತುಳುನಾಡಿನ ಪ್ರತಿಭೆಗಳು ಎತ್ತರೆತ್ತರ ಬೆಳೆಯಬೇಕು ದೇಶದೆಲ್ಲೆಡೆ ಪಸರಿಸಬೇಕೆಂಬುದೇ ಇವರ ಮುಖ್ಯ ಉದ್ದೇಶವಾಗಿದೆ.ಈ ಅಸಮಾನ್ಯ ವ್ಯಕ್ತಿಯ ಬಗ್ಗೆ ತಿಳಿಯೋಣ.

ಬರಹ-ತೃಪ್ತಿ.ಜಿ.ಕುಂಪಲ.

ರಂಜಿತ್ ಕಕ್ಕಿಂಜೆ ಇವರು ವಸಂತ್ ಪೂಜಾರಿ ಹಾಗೂ ಉಷಾ ದಂಪತಿಯವರ ಸುಪುತ್ರ.ಇವರು ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ಎಸ್.ಡಿ.ಎಂ.ಐಟಿಸಿ ವೇಣೂರಿನಲ್ಲಿ‌ ಐಟಿಐ ಮುಗಿಸಿ,ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋರ್ಟಿನಲ್ಲಿ ಗ್ರೌಂಡ್ ಸಪೋರ್ಟ್ ಸರ್ವಿಸಸ್ ಮೈಂಟೇನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲಾವಿದನಾಗಿ,ಭಜಕನಾಗಿ,ನಾಯಕನಾಗಿ ಮುಂದುವರಿಯುತ್ತಿರುವ ಇವರು ಯುವ ಸಾಹಿತಿಯೂ ಹೌದು.ಒಬ್ಬ ಕಲಾವಿದನ ಸಾಧನೆಯನ್ನು ಎಳೆ ಎಳೆಯಾಗಿ ತನ್ನ ಬರವಣಿಗಯಲ್ಲಿ ಅಲಂಕರಿಸಿ ಸಾಧಕನ ಸಾಧನೆಗೆ ತನ್ನ ಲೇಖನಿಯ ಮುಖಾಂತರ ಜೀವ ತುಂಬುವ ಕಲಾ ಪೋಷಕರು ಇವರು.

ಭಜನೆಯೆಂದರೆ ಇವರಿಗೆ ಅಪಾರ ಪ್ರೀತಿ.ಬಾಲ್ಯದಲ್ಲೇ ಭಜನೆ ಮಾಡುತ್ತಾ ಬೆಳೆದವರು ಇವರು.ತನ್ನ ಊರಿನವರಾದ ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ “ಶ್ರೀ ಶಬರಿ ಭಜನಾ ಮಂಡಳಿ” ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು.ನಂತರ ವೃತ್ತಿಯನ್ನು ಹರಸಿ ಬೆಂಗಳೂರಿಗೆ ನಡೆದವರು ತನ್ನ ಕಲೆಯಲ್ಲಿನ ಉತ್ಸಾಹವನ್ನು ಬಿಡದೆ ಬೆಂಗಳೂರಿನಲ್ಲಿಯೂ “ಮಕರ ಶ್ರೀ ಭಜನಾ ಮಂಡಳಿ” ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು.ಹೀಗೇ ಕಲಾ ಆಸಕ್ತಿಯಿಂದ ಕಲಾಮಾತೆಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಧು ಬಂಗೇರ ಕಲ್ಲಡ್ಕ ಹಾಗೂ ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ(ರಿ) ಬೆಂಗಳೂರು ಘಟಕವನ್ನು ಸ್ಥಾಪಿಸಲು ಶ್ರಮಿಸಿದರು.ಈ ಸಂಸ್ಥೆಯ ಮೊದಲ ವರ್ಷಾವಧಿಯಲ್ಲಿ ಸಾಂಸ್ಕೃತಿಕ ನಿರ್ದೇಶಕರಾಗಿ ಕಲಾ ಸೇವೆಯನ್ನು ಸಲ್ಲಿಸಿದರು.

ರಂಗದಲ್ಲಿ ಸಾಹಿತಿಯಾಗಿ ಬರವಣಿಗೆಯ ಮಾಲಾರ್ಪಣೆಯನ್ನು ಗೈಯುತ್ತಾ ಇವರು ಶಬರಿ ಭಜನಾ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ “ಬುದ್ಧಿ ಬನ್ನಗ” ಎಂಬ ತುಳು ನಾಟಕದ ಸಾಹಿತ್ಯವನ್ನು ಸ್ವತಃ ತಾನೇ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು.ತದನಂತರ “ಗೌಜಿ ಗಮ್ಮತ್ತ್”, ” ಎನ್ನ ತಂಗಡಿ”, “ಮಲ್ಲಸ್ತಿಕೆದ ಮರ್ಮಾಲ್”,” ಒಂಜೆಕ್ ಒಂಜರೆ ಮಲ್ಪೊರ್ಚಿ” ಮೊದಲಾದ ನಾಟಕಗಳಿಗೆ ಸಾಹಿತ್ಯ ಬರೆದು ನಿರ್ದೇಶಿಸಿ ನಟಿಸಿರುವ ಹೆಗ್ಗಳಿಕೆ ಇವರದ್ದು.ಇವರು “ಗೋಲ್ಮಾಲ್” ಎಂಬ ತುಳು ಚಲನಚಿತ್ರದಲ್ಲಿಯೂ ನಟಿಸಿರುವರು. ತನ್ನ ವೃತ್ತಿಜೀವನದಲ್ಲೂ ತುಳುನಾಡಿನ ಯುವ ಪ್ರತಿಭೆಗಳಿಗೆ ನಿರಂತರ ನಿಸ್ವಾರ್ಥ ಸೇವೆಯಲ್ಲಿ ಇವರು “ಕಲಾವಿದೆರೆ ಕಡಲ್” ಎಂಬ ವಾಟ್ಸ್ ಆ್ಯಪ್ ಗ್ರೂಪ್ ನಿರ್ಮಿಸಿ ತುಳುನಾಡ ಪ್ರತಿಭೆಗಳಿಗೆ ತನ್ನ ಬರವಣಿಗೆಯ ಮೂಲಕ ಪ್ರೋತ್ಸಾಹವನ್ನು ನೀಡುತ್ತಾ,ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ನಿಸ್ವಾರ್ಥ ಕಲಾ ಸೇವೆಗೊಂದು ಗುರುತು ಎಂಬಂತೆ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ದೊರಕದೆ ಉಳಿದಿಲ್ಲ.ಯುವವಾಹಿನಿ(ರಿ).ಬೆಂಗಳೂರು ಘಟಕದ ವತಿಯಿಂದ ಸನ್ಮಾನ,ಮಡಿಲು ಸಂಸ್ಥೆಯಿಂದ “ಮಡಿಲು” ಪುರಸ್ಕಾರ,”ತೆಲಿಕೆದ ತೆನಾಲಿ” ಕಾರ್ಲ ತಂಡದಿಂದ “ಕಲಾವಿದರ ಕಣ್ಮಣಿ” ಎಂಬ ಬಿರುದು ನೀಡಿ ಗೌರವಿಸಲಾಗಿದೆ.ನಿಜವಾಗಿಯೂ ಇವರು ಕಲಾವಿದರ ಕಣ್ಮಣಿಯೆ ಹೌದು.ತೆರೆಮರೆಯಲ್ಲಿ ಅಡಗಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ರಂಜುರವರಂತಹ ಕಲಾ ಪೋಷಕ ಹುಟ್ಟಲೇಬೇಕು.ಕಲಾವಿದನು ಅರಳಲು ಪ್ರಶಂಸೆಗಿಂತ ಇತರರ ಪ್ರೋತ್ಸಾಹದಲ್ಲಿ ಖುಷಿಪಟ್ಟು ತ‌ನಗೆ ತಾನು ಪ್ರಶಂಸೆಯನ್ನು ಪಡೆವ ನಿಸ್ವಾರ್ಥ ಕಲಾಸೇವಕನ ಅಡಿಯಲ್ಲಿ ಮತ್ತಷ್ಟು ಪ್ರತಿಭೆಗಳು ಚಿಗುರಲಿ.ನಾಟಕ ಪ್ರೇಮಿಗಳ ಮನರಂಜಿಸಲು “ರಂಜು” ರವರಿಗೆ ಕಲಾಮಾತೆಯ ಆಶೀರ್ವಾದ ಸದಾ ಇರಲಿ. ದೇವರು ಒಳಿತನ್ನು ಕರುಣಿಸಲಿ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »