TOP STORIES:

FOLLOW US

“ರತನ್ ರಮೇಶ್ ಪೂಜಾರಿ – ಪ್ರಧಾನಿ ಮೋದಿಯವರೇ ಇವರ ಕಾರ್ಯಕ್ಕೆ ಟ್ವಿಟ್ಟರ್ನಲ್ಲಿ ಹಿಂಬಾಲಕರಾದರು


“ನಗುವಿನ ಮುಖಕ್ಕೆ ಪಾದರಸದಂತಹ ಕ್ರಿಯಾಶೀಲ ವ್ಯಕ್ತಿತ್ವವೇ ಇವರ ಕೈಗನ್ನಡಿ ದಣಿವಿಲ್ಲದ ದೇಹ, ಉತ್ಸಾಹ ಬತ್ತದ ಜೀವ!! ಆಪತ್ಕಾಲಕ್ಕೆ ಆಪ್ತಮಿತ್ರನೆಂಬ ಅನ್ವರ್ಥನಾಮ ಇವರೇ ರತನ್ ರಮೇಶ್ ಪೂಜಾರಿ.

ಇವರದು ಸಾವಿರದ ವ್ಯಕ್ತಿತ್ವದ ವರ್ಚಸ್ಸು, ವಿನಯದಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ರಕ್ಷಕನೀತ!!

ಕುಂದಾಪುರ ತಾಲೂಕಿನ ಕಟ್ಟಬೇಲ್ತೂರು ಗ್ರಾಮದಲ್ಲಿ ದಿವಂಗತ ಮಂಜುನಾಥ ಪೂಜಾರಿ ಮತ್ತು ಗಿರಿಜ ಪೂಜಾರಿಯ ಹಿರಿಯ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಕಟ್ಟಬೇಲ್ತೂರುನಲ್ಲಿ ಪೂರ್ಣಗೊಳಿಸಿದರು .6 ಮತ್ತು 7 ನೇಯ ತರಗತಿಯನ್ನು ಹೆಮ್ಮಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಜನತಾ ಹೈ ಸ್ಕೂಲ್, ಪದವಿ ಪೂರ್ವ ಶಿಕ್ಷಣವನ್ನು ಸರಸ್ವತಿ ವಿದ್ಯಾಲಯ(S.V) ಗಂಗೊಳ್ಳಿಯಲ್ಲಿ ಉನ್ನತ ಶ್ರೇಣಿಯಲ್ಲಿ (Distinction) ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿ ಇವರು! ತಾಂತ್ರಿಕ ಶಿಕ್ಷಣವನ್ನು ಮಣಿಪಾಲದ ಎಂ.ಐ.ಟಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್- ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗನ್ನು ಪೂರ್ಣಗೊಳಿಸಿದರು.

ಕಾಲೇಜು ದಿನಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡು ಅದಾಗಲೇ ಭವಿಷ್ಯತ್ ನಾಯಕನಾಗಿ ಹೊರಹೊಮ್ಮವ ಎಲ್ಲಾ ಇರುವಿಕೆಯನ್ನು ಸಣ್ಣದಾಗಿ ಬಿತ್ತರಿಸುತ್ತಿದ್ದರು. ಹಲವಾರು ಸಂಘ- ಸಂಸ್ಥೆಗಳಲ್ಲಿ ತನ್ನ ದಾಪುಗಾಲನ್ನು ಕಾಲೇಜು ದಿನಗಳಲ್ಲಿ ಇಡತೊಡಗಿದರು. ಕಾಲೇಜು ದಿನಗಳಲ್ಲಿ ನಾಟಕ ಮತ್ತು ನೃತ್ಯ ಕಾರ್ಯಕ್ರಮಗಳಲ್ಲಿ ಸೈ ಎನಿಸಿಕೊಂಡು ತನ್ನ ಪ್ರತಿಭೆಯ ಮುಖಾಂತರನೆ ಹಲವಾರು ಪ್ರಶಸ್ತಿಗಳನ್ನು ತನ್ನೆಡೆಗೆ ಸೆಳೆದುಕೊಂಡರು.ತಾಂತ್ರಿಕ ಶಿಕ್ಷಣವನ್ನು ಪೂರೈಸಿದ ನಂತರ ಇವರನ್ನು ಬೆಂಗಳೂರು ಕೈ ಬೀಸಿ ಕರೆಯುತ್ತಿತ್ತು, ಅದರ ಕರೆಗೆ ಓಗೊಟ್ಟು ಬೆಂಗಳೂರಿನ ಒಡಲನ್ನು ಸೇರಿಕೊಂಡರು!! ಖಾಸಗಿ ಕಂಪನಿಯಲ್ಲಿ ತನ್ನ ಉದ್ಯೋಗದ ಜೊತೆಗೆ ಜೀವನವನ್ನು ಪ್ರಾರಂಭಿಸಿದರು! ತದನಂತರ ನೃತ್ಯ ತರಬೇತಿಯ ದೊಡ್ಡ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡರು..!! 1000 ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯ ವಿದ್ಯೆಯನ್ನು ದಾನ ಮಾಡಿದರು!! ಆಗಲೇ ಬಣ್ಣದ ಜಗತ್ತಿಗೆ ಕಾಲಿಡುವ ದೊಡ್ಡ ಸಾಹಸಕ್ಕೆ ಕೈ ಹಾಕುವ ಯೋಚನೆ ಮತ್ತು ಯೋಜನೆಗೆ ಸಿದ್ಧರಾದರು!! ಏನಾದರು ಸಾಧನೆ ಮಾಡಬೇಕೆಂಬ ಅತೀವ ಹಂಬಲ ಆದಾಗಲೇ ರಕ್ತದಲ್ಲಿ ಬೇರೂರಿತ್ತು!! ” *ಅಭಿನಯತರಂಗ* ” ದಲ್ಲಿ ನಟನ ತರಬೇತಿಯನ್ನು ಪೂರ್ತಿಗೊಳಿಸಿದರು.

ಅದ್ಭುತ ನಟನ ಪ್ರತಿಭೆ, ಹೊಸತನದ ಪ್ರಯೋಗ , ವಿಭಿನ್ನ ವಿಷಯ ಇವರ ನಟನೆಗೆ ವಿಷಯ ವಸ್ತುಗಳಾಗಿದ್ದವು. 2 ಧಾರಾವಾಹಿಗಳಲ್ಲಿ ನಟನ ಪ್ರಬುದ್ಧತೆಯನ್ನು ತೋರಿಸಿ ,11 ಕಿರುಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡು ನಿಂತಂತಹ ಒಬ್ಬ ನಗುವಿನ ಪಯಣಿಗ. (https://youtu.be/iBQt3Y3BzVU)

ಐದು ಕನ್ನಡ ಸಿನಿಮಾಗಳಲ್ಲಿ ನಟನೆ ಮತ್ತು ನಿರ್ದೇಶನದ ವಿಭಾಗದಲ್ಲಿ ಕಾರ್ಯ ಪ್ರಬುತ್ತೆಯನ್ನು ತೋರಿಸಿದರು. ಹಾಗೆಯೇ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಸಾಹೇಬ, ಕಾಲಭೈರವ, ವರ್ತಮಾನ, ಗಾಜನೂರು ಮುತ್ತು ಮತ್ತು ಆಕರ್ಷಕ ಚಿತ್ರಗಳಲ್ಲಿ ನಿರ್ದೇಶನ ಮತ್ತು ಅಭಿನಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು.

ಸಹಾಯ ಎಂದು ಬಂದವರಿಗೆ ತನ್ನಿಂದಾದ ಸಹಾಯವನ್ನು ಮಾಡುವ ಹಂಬಲ ಯಾವಾಗಲೂ ಇವರ ಮನಸಲ್ಲಿ ಇದ್ದೇ ಇದೆ. ಇದಕ್ಕೆ ಸ್ಪಷ್ಟ ನಿದರ್ಶನ, ಬೇರೆ ಊರಿನಿಂದ ಬೆಂಗಳೂರಿಗೆ ಬಂದಂತಹ 30ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗದ ಜೊತೆಗೆ, ವಸತಿಯನ್ನು ಕೊಟ್ಟಂತಹ ಮಹನೀಯನೀತ, ಕಷ್ಟದಿಂದ ಬೆಳೆದು ಬಂದು ಇಂದು ಇತರರಿಗೆ ತನ್ನ ಕೈಲಾದಷ್ಟು ಸಹಾಯವನ್ನು ಮಾಡುವ ವ್ಯಕ್ತಿ ಇವರು, ಸ್ವಂತ ಉದ್ಯಮದ ಜೊತೆಗೆ ಬೆಂಗಳೂರಿನಲ್ಲಿ ಸಹೋದರರ ಜೊತೆಯಲ್ಲಿ”ಗಿರಿಜಾ ಸಾಗರ” ಎಂಬ ಹೋಟೆಲಿನ ಮತ್ತು ವಸ್ತ್ರೋದ್ಯಮದ ಸಹ ಮಾಲೀಕರಾಗಿದ್ದಾರೆ.ಜಗತ್ತೇ ಇಂದು ಮಹಾ ಮಾರಿಯ ಒಡಲಲ್ಲಿ,ಬಳಲಿ ಬೆಂಡಾಗಿ ಹೋಗಿದೆ.!ಆದರೆ ದಾನವಂತರ, ನಿಸ್ವಾರ್ಥಿಗಳ ಕೈ ಕೆಳಗೆ ಬಡ ಜನರ ಜೀವ ಕೊಂಚ ನಿರಾಳತೆಯನ್ನು ಕಂಡಿದೆ ಎಂದರೆ ತಪ್ಪಾಗಲಾರದು!! ಇದಕ್ಕೆ ಸ್ಪಷ್ಟ ಉದಾಹರಣೆ ರತನ್ ರಮೇಶ್ ಪೂಜಾರಿ. ಲಾಕ್ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ ಮತ್ತು ತನ್ನ ಊರಿನಲ್ಲಿ ಗೆಳೆಯರು ಮತ್ತು ಸಂಘಟನೆಗಳ ಜೊತೆ ಸೇರಿ ನೂರಾರು ಜನರಿಗೆ ಆಹಾರ (ಕಿಟ್) ಪೊಟ್ಟಣಗಳ ಜೊತೆ ಔಷಧಿ ತಲುಪಿಸುವ ಮಹಾನ್ ಕಾರ್ಯಕ್ಕೆ ಕೈ ಜೋಡಿಸಿದರು.

”ಮತ್ತೊಂದು ಹೆಮ್ಮೆಯ ವಿಚಾರವೇನೆಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇವರ ಕಾರ್ಯ ವೈಖರಿಗೆ ಸಾಮಾಜಿಕ ಜಾಲತಾಣದಲ್ಲಿ ಇವರ ಹಿಂಬಾಲಕರಾಗಿದ್ದಾರೆ ಎಂದರೆ, ಇವರ ಕಾರ್ಯ ವೈಖರಿ ಯಾವ ರೀತಿ ಇದೆ ಎಂದು ನಮಗೂ ಅನಿಸದು.” ಕರ್ನಾಟಕದಲ್ಲಿ ಮಾನ್ಯ ಪ್ರಧಾನಿಯವರು ಕೆಲವೆ ಕೆಲವು ಜನರನ್ನು ಮಾತ್ರ ಟ್ವೀಟರ್ ಖಾತೆಯ ಹಿಂಬಾಲಕರಾಗಿದ್ದಾರೆ ಅವರಲ್ಲಿ ಇವರು ಒಬ್ಬರು.“ರಾಷ್ಟ್ರೀಯ ಸ್ವಯಂ ಸೇವಕ* ” ಸಂಘದ ಕಾರ್ಯಕರ್ತರಾಗಿದ್ದಾರೆ. ಐ.ಟಿ.ಸಿಯನ್ನು ಕೂಡ ಪೂರ್ಣಗೊಳಿಸಿದ್ದಾರೆ.

“Youth for seva” ಮತ್ತು “ರಾಬಿನ್ ಹುಡ್”ಎಂಬ ದೊಡ್ಡ ಸಂಘಟನೆಯಲ್ಲಿ ಸ್ವಯಂ ಸೇವಕರಾಗಿ ತನ್ನ ಕಾರ್ಯದ ಮುಖಾಂತರ ಸಹಾಯದ ಸೇವೆಯನ್ನು ಈ ಮುಖಾಂತರ ಮಾಡುತ್ತಿದ್ದಾರೆ, ಇದರಲ್ಲಿ ಬಹುಜನ ಆಶ್ಚರ್ಯ ಪಡುವಂತಹ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಕಾರ್ಯ ವೈಖರಿಯನ್ನು ಕಂಡು ಹಲವರು ಕೂಡ ಆಶ್ಚರ್ಯ ಚಕಿತರಾಗಿದ್ದರೆ. “ಭಾರತೀಯ ಜನತಾ ಪಾರ್ಟಿ”ಯಲ್ಲಿ ಸಕ್ರೀಯ ಕಾರ್ಯಕರ್ತನಾಗಿ ತನ್ನ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ.

ಕಳೆದ ವರ್ಷ ಭಾರಿ ಮಳೆಗೆ ಕರ್ನಾಟಕ ತತ್ತರಿಸಿ ಹೋಗಿತ್ತು, ನೆರೆಗೆ ಒಳಗಾದ ಗ್ರಾಮಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವುದೇ ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ಸ್ವೀಕರಿಸಿ ನೇರವಾಗಿ ಕಾರ್ಯ ಪ್ರವೃತರಾದಂತಹ ವ್ಯಕ್ತಿ ಇವರು. ಬೆಳಗಾವಿಯ ಚಿಕ್ಕೋಡಿಯ ಪ್ರದೇಶಗಳಿಗೆ ಸಹಾಯದ ನೆರವಿನ ಹಸ್ತವನ್ನು ಲಾರಿಯ ಮುಖಾಂತರ ಅಲ್ಲಿನ ಆರ್. ಎಸ್.ಎಸ್ ಶಾಖೆಗೆ ತಲುಪಿಸಿ, ಅಲ್ಲೇ ಇದ್ದು ಅಲ್ಲಿಂದ ಹಲವು ಪ್ರದೇಶಗಳಿಗೆ ಆಹಾರ ಪೊಟ್ಟಣವನ್ನು ತಲುಪಿಸಿ , ಮಾನವೀಯತೆಯ ಧ್ವನಿಗೆ ಧ್ವನಿಯಾದರು.!! ಚಿಕ್ಕೋಡಿಯ ಸಂಕೇಶ್ವರ ದೇವಸ್ಥಾನದಲ್ಲಿ ಸುಮಾರು 1 ಅಡಿ ಕೆಸರನ್ನು ತೆಗೆಯುವ ಕಾರ್ಯಕ್ಕೆ ಯುವ ಬ್ರಿಗೇಡ್ ಮತ್ತು ವೈ.ಐ.ಎಫ್.ಎ ಜೊತೆ ಸೇರಿ ಅವರ ಹೆಗಲಿಗೆ ಹೆಗಲಾದರು.

ಇವರು ಒಬ್ಬ ಅತ್ಯುತ್ತಮ ಯೋಗ ಪಟು , ಬೆಂಗಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಗಾಗ ಉಚಿತ ಯೋಗ ತರಬೇತಿಯನ್ನು ನೀಡುತ್ತಿದ್ದಾರೆ, ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ಉಪನ್ಯಾಸದ ಜೊತೆಗೆ ವ್ಯಕ್ತಿತ್ವ ವಿಕಸನದ ದಾರಿಗೆ ದಾರಿ ತೋರಿಸಿದಂತಹ ನಿರ್ಮಲ ವ್ಯಕ್ತಿತ್ವದ ಜೊತೆಗಾರರು ಇವರು! ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಗಳಿಗೆ ತರಬೇತಿಯನ್ನು ನೀಡಿದಂತಹ ವ್ಯಕ್ತಿ ಈತ!..ಅದೆಷ್ಟೋ ಅನಾಥಾಶ್ರಮಗಳಿಗೆ ಹೋಗಿ ಅವರ ಜೊತೆ ಹೋಳಿ ಹಬ್ಬವನ್ನು ಆಚರಿಸಿ ಅವರಿಗೆ ಧೈರ್ಯದ ಜೊತೆಗೆ ಬೆನ್ನೆಲುಬಾಗಿ ನಿಂತರು!! ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಹೋಗಿ ಮಾತಿನ ಮುಖಾಂತರ ಯುವ ಭಾರತದ ಕಲ್ಪನೆಯನ್ನು ಬಿತ್ತರಿಸುತ್ತಿದ್ದರು.

ಅವರಲ್ಲಿ ಸೇವಾಮನೋಭಾವದಂತಹ ಯೋಜನೆಯನ್ನು ತಂದು ಯೋಚನಲಹರಿಯಲ್ಲಿ ಬದಲಾವಣೆಗೆ ಕಾರಣಿಕರಾದರು. ಅವರ ಜೊತೆ “ರಕ್ಷಾಬಂಧನ”ವನ್ನು ಕೂಡ ಆಚರಿಸುವಂತಹ ವ್ಯಕ್ತಿತ್ವ ಇವರದು..”ಭಾರತ ಭಾಗ್ಯವಿಧಾತ”ಸಂಘಟನೆ ಯನ್ನು ಹುಟ್ಟು ಹಾಕಿ, ಇದರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಮೇಶ್ ಅಣ್ಣನ ಒಡನಾಡಿ ಒಂದು ಮಾತನ್ನು ನೆನಪಿಸಿಕೊಳ್ಳುತ್ತಾರೆ,”ಅಥ್ಲೆಟಿಕ್ ಆಟಗಾರ್ತಿಗೆ ತೊಂದರೆ ಆದಾಗ ಸ್ವತಃ ಊರಿನಿಂದ ದೆಹಲಿಗೆ ಕುಟುಂಬದ ಜೊತೆಗೆ ಸೇರಿ, ಕರೆದುಕೊಂಡು ಹೋಗಿ, ಕ್ರೀಡಾ ಸಚಿವರಿಗೆ (ಕಿರಣ್ ರಿಜು) ಮಾಹಿತಿ ನೀಡಿ ಅವರ ಕಚೇರಿಗೆ ತೆರಳಿ , ಅವರ ಬೆನ್ನಿಗೆ ನಿಂತ ಒಬ್ಬ ನಿಸ್ವಾರ್ಥಿ.

“ರಾಬಿನ್ ಹುಡ್ ಆರ್ಮಿ”ಎಂಬ ಸಂಸ್ಥೆಯ ಜೊತೆ ಸೇರಿ ಸಭೆ- ಸಮಾರಂಭ, ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಉಳಿದ ಆಹಾರವನ್ನು ಬಡ ಜನರಿಗೆ,ಅನಾಥಾಶ್ರಮ ಮತ್ತು ಬಡ ಮಕ್ಕಳಿಗೆ ವಿತರಿಸುವ ದೊಡ್ಡ ಸೇವಾ ಭಾವನೆಯೇ ಇವರಲ್ಲಿ ಅಡಗಿದೆ! ಅಪ್ರತಿಮ ದೇಶ ಭಕ್ತಿ, ಸಹಾಯದ ಮನೋಭಾವ ಇವರನ್ನು ಇಂದು ಉತ್ತಮ ಸೇನಾನಿಯಾಗಿಸಿದೆ!! ಇವರ ಗೆಳೆಯರ ಬಳಗದಲ್ಲಿ ರತನ್ ರಮೇಶ್ ಪೂಜಾರಿಯ ಹೆಸರಿಗೆ ತನ್ನದೇ ಆದ ಗೌರವ ಇದೆ.

ಮುಂದೊಂದು ದಿನ ರತನ್ ರಮೇಶ್ ಪೂಜಾರಿ ಅಣ್ಣ ಒಬ್ಬ ಅಪ್ರತಿಮ ನಾಯಕನಾಗಿ ನಿಲ್ಲುವ ಎಲ್ಲಾ ಸೂಚನೆಗಳು ಇಂದೇ ದೊರೆತಿವೆ ನೂರಾರು ಬಡ ಜನರಿಗೆ ಬೆನ್ನೆಲುಬಾಗಿ ನಿಲ್ಲುವ ಹಂಬಲವೇ ಇವರಿಗೆ ಕನಸಾಗಿದೆ. ಈ ಕರ್ಣ ಮುಂದೊಂದು ದಿನ ಈ ಯುಗದ ರಥದ ಸಾರಥಿಯಾಗಲಿ ಎಂಬುದೇ ನಮ್ಮ ಆಶಯ.

ರತನ್ ಅಣ್ಣನ ಈ ನಿಸ್ವಾರ್ಥ ಸೇವೆಯ ಮಾಹಿತಿ ಪಡೆಯಬೇಕಾದರೆ ಅವರ ಹಲವಾರು ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳಬೇಕಾಯಿತು, ರತನ್ ಅಣ್ಣನ ಸಹಾಯದ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮುಖಾಂತರ ಮಾಹಿತಿಯನ್ನು ಪಡೆಯಲಾಯಿತು. ಒಂದು ಕೈಗೆ ಕೊಟ್ಟದ್ದು ಇನ್ನೂಂದು ಕೈಗೆ ಗೊತ್ತಾಗಬಾರದು ಎಂಬುದು ಅವರ ದೊಡ್ಡ ಗುಣವಾಗಿತ್ತು.

ಇವರದು ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ!! ಹಲವಾರು ಅಶಕ್ತರ ಜೀವನದ ಸಾರಥಿಯಾಗಿ, ಅವರ ನಗುವಿನ ಹಿಂದಿನ ರುವಾರಿಯಾಗಿ ತನ್ನ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ “ಸಾಹೇಬ” ನೀತ.

ಪ್ರತಿದಿನವು ಹೊಸ ಯೋಜನೆ , ಯೋಚನೆಯಿಂದ ಹಲವರಲ್ಲಿ ಒಬ್ಬರಾಗಿ ನಿಲ್ಲುವ ಕಾರ್ಯಕರ್ತನಿವರು!! ತನ್ನಿಂದ ಏನೇ ಸಹಾಯವಾದರು, ಅದು ನನ್ನಿಂದ ಆದ ನನ್ನ ಕರ್ತವ್ಯವೆಂದು ಭಾವಿಸುವ ರತನ್ ಅಣ್ಣ, ತನ್ನ ಕಾಣುವ ಕಾರ್ಯವನ್ನು ಅದೃಶ್ಯ ಮಾಡುವತ್ತ ಸಾಗುತ್ತಾರೆ..!! ಆದರೆ ಸಹಾಯ ಪಡೆದವರಿಗೆ ಆ ದೃಶ್ಯ ಜೀವನ ಪರ್ಯಂತ ನೆನಪಿರುವಂತೆ ಮಾಡಿರುತ್ತಾರೆ!!
ಸಹಾಯ ಎಂದು ಕೇಳಿದವರಿಗೆ ತನ್ನಿಂದ ಏನು ಆಗುತ್ತೊ ಅದನ್ನು ಮಾಡಿಯೇ ತೀರುತ್ತಾರೆ. ಅಧ್ಭುತ ವಾಕ್ ಚತುರ, ತನ್ನ ಮಾತಿನಿಂದ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಕಲ್ಪನ ಲೋಕದಲ್ಲಿ ಕನಸು ಕಟ್ಟಿ, ನನಸು ಮಾಡಲು ದಾರಿ ತೋರಿಸಿ ಕೊಡುವ ಸ್ನೇಹಮಯಿ ಜೀವಿ ಈತ.

ನನ್ನ ಕೆಲವು ಗೆಳೆಯರು ಮುಂಬೈಯ ಮಾಯ ನಗರಿಯಲ್ಲಿ ಲಾಕ್ಡೌನ್ ಸಮಯದಲ್ಲಿ ಊರಿಗೆ ಬರಲು ಬಹಳ ತೊಂದರೆಯನ್ನು ಅನುಭವಿಸಿದರು, ಅವರು ನನಗೂ ಮಾಹಿತಿಯನ್ನು ನೀಡಿದರು, ಆಗ ನಾನು ಫೇಸ್ಬುಕ್ ಮುಖಾಂತರ ರತನ್ ಅಣ್ಣನನ್ನು ಕೇಳಿದೆ… ಬಹಳ ವೇಗವಾಗಿ ಈ ಸಮಸ್ಯೆಗೆ ಧ್ವನಿಗೂಡಿ ಮಾಹಿತಿಯನ್ನು ನೀಡಿದರು, ಇನ್ನೊಂದು ನಿದರ್ಶನವು ಕೂಡ ಹೇಳಲೆಬೇಕು ನಮ್ಮ ಊರಿನಲ್ಲಿ ಒಬ್ಬ ವ್ಯಕ್ತಿಗೆ ಅಪಘಾತವಾಗಿ ಆಸ್ಪತ್ರೆಯ ಬಿಲ್ಲನ್ನು ಕಟ್ಟಲು ಪರದಾಡುತ್ತಿದ್ದಾಗ ನಾನು ನೇರವಾಗಿ ಇವರಿಗೆ ಮಾಹಿತಿಯನ್ನು ನೀಡಿದೆ, ಬಹಳ ವೇಗವಾಗಿ ತನ್ನ ಕಾರ್ಯವನ್ನು ಇವರು ಮಾಡಿದರು!! ಆವಾಗಲೇ ನಾನು ಇವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಹುಡುಕತೊಡಗಿದೆ, ಇವರ ಬಗ್ಗೆ ಬರೆಯಬೇಕು ಎಂದು ನಿರ್ಧರಿಸಿದೆ…

ಇದು ರತನ್ ರಮೇಶ್ ಪೂಜಾರಿಯ ಬದುಕಿನ ಪುಸ್ತಕದ ಕೆಲವು ಪುಟಗಳಷ್ಟೇ, ಇನ್ನುಳಿದವು ಇತಿಹಾಸ.

Credits: ವಿಜೇತ್ ಪೂಜಾರಿ ಶಿಬಾಜೆ

Email us: billavaswarriors@gmail.com


Share:

More Posts

Category

Send Us A Message

Related Posts

ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ: ಗೀತಾಂಜಲಿ ಸುವರ್ಣ ಹೆಸರು ಮುಂಚೂಣಿಗೆ


Share       ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಕೋಟ ಅವರ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಉದ್ಭವ ವಾಗುತ್ತಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೈಪೋಟಿ ಶುರುವಾಗಿದ್ದು, ಜಾತಿ ಲೆಕ್ಕಾಚಾರ, ಪಕ್ಷದಲ್ಲಿನ ಹಿರಿತನ ಎಲ್ಲವೂ ಗಣನೆಗೆ ತೆಗೆದುಕೊಂಡು


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ರಿ ವತಿಯಿಂದ 5ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ವತಿಯಿಂದ ಇಂದು ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ 5ನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಹಿಂದು ಹಿಂದುಗಳನ್ನೇ ತುಳಿದು ಬಡಿದಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ


Read More »

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಳ್ಳಾಲ್‍ಬಾಗ್ 5 ಕುಟುಂಬಗಳಿಗೆ 1.50 ಲಕ್ಷ ರೂ ವೈದ್ಯಕೀಯ ನೆರವು


Share       ಬಿರುವೆರ್ ಕುಡ್ಲ-ಫ್ರೆಂಡ್ಸ್  ಬಳ್ಳಾಲ್‍ಬಾಗ್ 5 ಕುಟುಂಬಗಳಿಗೆ ವೈದ್ಯಕೀಯ ನೆರವು ಕುದ್ರೋಳಿ,ಜೂ.1: ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಫ್ರೆಂಡ್ಸ್ ಬಳ್ಳಾಲ್‍ಬಾಗ್ ,ಬಿರುವೆರ್ ಕುಡ್ಲದ ವತಿಯಿಂದ ಐದು ಅರ್ಹ ಕುಟುಂಬಗಳ ಸದಸ್ಯರ ವೈದ್ಯಕೀಯ ನೆರವಿಗೆ ಆರ್ಥಿಕ


Read More »

ಬಹುಮುಖ ಪ್ರತಿಭೆಯ ರಿಷಿತ್ ರಾಜ್ ಗೆ ಸುಳ್ಯ ರಂಗಮನೆ ಪ್ರತಿಭಾ ಪುರಸ್ಕಾರ


Share       ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರಮೇಳದಲ್ಲಿ  ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಫೈನಲಿಸ್ಟ್ ಪ್ರತಿಭಾನ್ವಿತ ಬಾಲಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರಿಗೆ


Read More »

ಬಂಟ್ವಾಳ ಬಿ. ಸಿ. ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ತೆರವು


Share       ಬಂಟ್ವಾಳ: ಬಿ.ಸಿ.ರೋಡಿನ ಪ್ರಮುಖ ಲ್ಯಾಂಡ್ ಮಾರ್ಕ್ ಎನಿಸಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವು ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ‌ ಹಿನ್ನೆಲೆಯಲ್ಲಿ ತೆರವುಗೊಂಡಿದೆ. ನಾರಾಯಣ ಗುರು ವೃತ್ತದ ನಿರ್ಮಾಣ ಹಾಗೂ ನಿರ್ವಹಣೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಂಘ


Read More »

ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು ಒಟ್ಟಾಗ ಬೇಕಿದೆ. ಉದಯ ಪೂಜಾರಿ ಬಲ್ಲಾಳ್ ಭಾಗ್.


Share       ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು ಒಟ್ಟಾಗ ಬೇಕಿದೆ. ಬಿಲ್ಲವರು ಎಲ್ಲವನ್ನೂ ಬಲ್ಲವರು. ಹಿಂದುತ್ವ ಸಿದ್ಧಾಂತವನ್ನು ಅರಿತುಕೊಂಡವರು, ಜಿಲ್ಲೆಯ ಬಹು ಸಂಖ್ಯಾತ ಸಮಾಜ,ರಾಜಕೀಯವನ್ನು ನಿರ್ಧಾರ ಮಾಡುವ ನಿರ್ಣಾಯಕರಾಗಿದ್ದಾರೆ. ಉದಯ ಪೂಜಾರಿಯವನ್ನು ತುಳಿಯುವ ಪ್ರಯತ್ನ ಬಹಳ


Read More »