ಪರೀಕ್ಷೆಯಲ್ಲಿ ಡಾ| ನಿಧಿಕಾ ವಿಜಯಕುಮಾರ್ ಸೊರಕೆಯವರಿಗೆ 7ನೇ ರಾಂಕ್..
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ 2022-23ನೇ ಸಾಲಿನ MD DERMATOLGY ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡಾ|ನಿಧಿಕಾ ವಿಜಯಕುಮಾರ್ ಸೊರಕೆ ಇವರು 7ನೇ ರಾಂಕ್ ಪಡೆದಿರುತ್ತಾರೆ.
ಜೊತೆಗೆ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ MD DERMATOLGY ವಿಭಾಗದಲ್ಲಿ ಪ್ರಥಮ ಸ್ಥಾನವನ್ನುಪಡೆದು MD DERMATOLGY ವಿಭಾಗದ ಮುಖ್ಯಸ್ಥ ಡಾ|ಶರತ್ ಕುಮಾರ್ ಬಿ.ಸಿ ಅಕಾಡೆಮಿಕ್ ಎಕ್ಷೆಲೆನ್ಸಿ ಅವಾರ್ಡ್ ಗೂ ಡಾ|ನಿಧಿಕಾ ವಿಜಯಕುಮಾರ್ ಸೊರಕೆಯವರು ಭಾಜನರಾಗಿದ್ದಾರೆ.
ಏ. 29 ರಂದು ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಡಾ|ನಿಧಿಕಾ ವಿಜಯಕುಮಾರ್ ಸೊರಕೆಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇವರು ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯವಿಜಯಕುಮಾರ್ ಸೊರಕೆ ಹಾಗೂ ಸುಕೃತ ವಿಜಯಕುಮಾರ್ ಸೊರಕೆ ದಂಪತಿ ಸುಪುತ್ರಿ.