ತನ್ನಲ್ಲಿರುವ ಪ್ರತಿಭೆಗೆ ದೊರೆತಿರುವ ಪ್ರೋತ್ಸಾಹ, ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ಮಿಂಚಿದ ಬಿಲ್ಲವ ಸಮಾಜದಯುವ ಪ್ರತಿಭೆ ಮೇಘ ಕೋಟ್ಯಾನ್.
(Copyrights owned by: billavaswarriors.com )
ಇವರು ಎಡಪದವಿನ ಗಣೇಶ್ ಪೂಜಾರಿ ಹಾಗು ಸುನೀತ ದಂಪತಿಗಳ ಮಗಳು. ತನ್ನ ಪ್ರೌಢ ಶಿಕ್ಷಣದ ಅವಧಿಯಲ್ಲಿ ಕ್ರೀಡಾಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಿದ ಇವರು ಮುಂದೆ ತನ್ನನ್ನು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡರು. ಸ್ವಾಮಿವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಇಲ್ಲಿ ಪಿಯುಸಿ ಶಿಕ್ಷಣ ಪೂರೈಸಿದರು. ತಮ್ಮ ಪಿಯುಸಿ
(Copyrights owned by: billavaswarriors.com )
ವಿದ್ಯಾಭ್ಯಾಸದಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಫ್ಲೋರ್ ಬಾಲ್ ಆಟ ಆಡಿದ ಹೆಮ್ಮೆ ಇವರದ್ದಾಗಿದ್ದು, 2019ರಲ್ಲಿ ಚತ್ತಿಷ್ಗಡ್ ನಲ್ಲಿ ನಡೆದ ಫ್ಲೋರ್ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಹಾಗು 2020 ರಲ್ಲಿ ದೆಹಲಿಯಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಸಾಧನೆಇವರದ್ದಾಗಿದೆ.
“ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು” ಆಗ ಯಶಸ್ಸು ಖಚಿತ ಎಂಬಂತೆ ಇವರ ಸಾಧನೆಗೆ ಬೆಂಬಲಿಸಿದವರು ದೈಹಿಕಶಿಕ್ಷಣ ಶಿಕ್ಷಕರಾದ ಪ್ರೇಮನಾಥ ಶೆಟ್ಟಿಯವರು. ಅಮ್ಮ ಹಾಗು ಸಹೋದರನ ಪ್ರೀತಿ, ಸಹಕಾರ ಅವರು ನೀಡುವ ಪ್ರೋತ್ಸಾಹವೇ ನನಗೆಸದಾ ಪ್ರೇರಣೆ ಎನ್ನುತ್ತಾರೆ ಮೇಘ ಕೋಟ್ಯಾನ್.
ಪ್ರಸ್ತುತ ದವಳ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯೋಗ ಹಾಗು ಫಿಲ್ಮ್ ಆ್ಯಕ್ಟಿಂಗ್ ನಲ್ಲೂಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಸಮಾಜದ ಆಧಾರ ಸ್ತಂಭವಾಗಿರುವ ನ್ಯಾಯ ರಕ್ಷಣೆಯ ವಕೀಲರಾಗುವಕನಸನ್ನು ಹೊಂದಿರುವ ಇವರ ಭವಿಷ್ಯ ಉಜ್ವಲವಾಗಿರಲಿ. ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ನಮ್ಮೆಲ್ಲರ ಆಶಯ…
(Copyrights owned by: billavaswarriors.com )
www.billavaswarriors.com
✍ ಬರಹ: ನಳಿನಿ.ಎಸ್.ಸುವರ್ಣ. ಜಾರ್ಕಳ ಮುಂಡ್ಲಿ