TOP STORIES:

ರೂಬಿಕ್ಸ್ ಕ್ಯೂಬ್ ಮಾಯಾಗಾರ – ಮಹೇಶ್ ಮಲ್ಪೆ


ರೂಬಿಕ್ಸ್ ಕ್ಯೂಬ್ ಮಾಯಾಗಾರಮಹೇಶ್ ಮಲ್ಪೆ

ತನ್ನೊಳಗೆ ಹುದುಗಿರುವ ಕಲೆಯನ್ನು ಗುರುತಿಸಿ, ದೊರೆತ ಅವಕಾಶಗಳನ್ನು, ವೇದಿಕೆಗಳನ್ನು ಉಪಯೋಗಿಸಿಕೊಂಡು ಸಾಧನೆಯಹಾದಿಯಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆಯ ಯುವ ಕಲಾವಿದ ಮಹೇಶ್ ಮಲ್ಪೆ.

    ಉಡುಪಿ ಜಿಲ್ಲೆಯ ಮಲ್ಪೆಯವರಾದ ಇವರು ಶೇಖರ್ ಪೂಜಾರಿ ಹಾಗು ಶ್ರೀಮತಿ ಮೀನಾಕ್ಷಿ ದಂಪತಿಗಳ ಮಗ. ಪ್ರಸ್ತುತಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಡಿಪಾರ್ಟ್ಮೆಂಟ್ನಲ್ಲಿ ಮಾರ್ಕೆಟಿಂಗ್ಹಾಗು ಫೀಲ್ಡ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆಯಲ್ಲಿ ಪಡೆದರು. ಶ್ಯಾಮಿಲಿ ಕಾಲೇಜಿನಲ್ಲಿ ಪದವಿ ಪೂರ್ವಶಿಕ್ಷಣ ಹಾಗು ಉಪೇಂದ್ರ ಪೈ ಮೆಮೊರಿಯಲ್  ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು.

ನಟನೆಯಲ್ಲಿ ಅಪಾರ ಆಸಕ್ತಿಯುಳ್ಳ ಇವರು ರಂಗಭೂಮಿ (ರಿ.) ಉಡುಪಿ ಕಿರ್ದಾರ್ ಥಿಯೆಟರ್ ಗ್ರೂಪ್, ವಿ ಆರ್ ಫ್ರೆಂಡ್ಸ್ ಸಾಸ್ತಾನತಂಡದ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ನಾಟಕ ನಿರ್ದೇಶಕರು ಆಗಿದ್ದು ನಾಟಕ ತರಬೇತಿಯನ್ನು ನೀಡುತ್ತಿದ್ದಾರೆ. ರಾಜ್ಯಹಾಗು ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ. ಕವನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಬಹುಮಾನ ಪಡೆದಿದ್ದಾರೆ.

ಎಲ್ಲದಕ್ಕೂ ಒಂದು ಆರಂಭ ಇದ್ದೇ ಇರುತ್ತದೆ ಎಂಬಂತೆ ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು  ಪೆನ್, ಪೆನ್ಸಿಲ್ಬಳಕೆಯಿಲ್ಲದೆ ಉಪ್ಪು ಮತ್ತು ಬಣ್ಣಗಳನ್ನು ಬಳಸಿ ಮಾಡಿದ ಭಾರತ ನಕ್ಷೆಗೆ ದೊರೆತ ಪ್ರೋತ್ಸಾಹ ಮುಂದೆ ಇವರು ಇನ್ನಿತರ ಬೇರೆ ಬೇರೆವಸ್ತುಗಳನ್ನು ಉಪಯೋಗಿಸಿಕೊಂಡು ಚಿತ್ರ ನಿರ್ಮಾಣ ಮಾಡುವ  ಯೋಜನೆಗೆ ದಾರಿಯಾಯಿತು ಎನ್ನುತ್ತಾರೆ. ಪದವಿ ಪೂರ್ವಶಿಕ್ಷಣದ ಅವಧಿಯಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸಲು ಮೊದಲು ಪ್ರಯತ್ನಿಸಲು ಆರಂಭಿಸಿದ್ದು ಈಗ ಕೇವಲ 35 ರಿಂದ 45 ಸೆಕೆಂಡ್ಗಳಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುತ್ತಾರೆ. ಫೋಟೋ ಶಾಪ್ ಕೆಲಸ ಮಾಡುತ್ತಿರುವಾಗ ಫೋಟೋದಲ್ಲಿರುವ ಸಣ್ಣ ಸಣ್ಣ ಫಿಕ್ಸೆಲ್ಗಳನ್ನು ಗಮನಿಸಿದ ಇವರು ಫಿಕ್ಸೆಲ್  ಆರ್ಟ್ ನಲ್ಲಿ ವಿಶೇಷ ಆಸಕ್ತಿ ಬೆಳೆಸಿದರು. ಈಗ ಫಿಕ್ಸೆಲ್ ಕಾರ್ನರ್ ಸಂಸ್ಥೆಯರೂವಾರಿಯಾಗಿದ್ದಾರೆ. ತನ್ನ ಕಲ್ಪನೆಯೊಳಗಿನ ಚಿತ್ರಗಳಿಗೆ ರೂಬಿಕ್ಸ್ , ಪುಸ್ತಕ, ಗ್ರಾಫ್ ಶೀಟ್ ಹೀಗೆ ಇನ್ನಿತರ ವಸ್ತುಗಳನ್ನು ಬಳಸಿಚಿತ್ರಿಸಿ ಅದಕ್ಕೆ ಕಲಾತ್ಮಕವಾಗಿ ಜೀವ ನೀಡುವ ವಿಶೇಷ ಕಲೆ ಇವರದ್ದಾಗಿದೆ. ಕೋಟಿ ಚೆನ್ನಯ ಹಾಗು ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಪ್ರತಿರೂಪವನ್ನು  1,500 ರೂಬಿಕ್ಸ್ ಕ್ಯೂಬ್ ನಿಂದ ರಚಿಸಿ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. ನೆಸ್ಟ್ಲೆ ಕಂಪೆನಿಆಯೋಜಿಸಿದ್ದ ರಾಷ್ಟ್ರಮಟ್ಟದ 2020 ಮಂಚ್ ಸ್ಟಾರ್ ಪ್ರತಿಭಾ ಪ್ರದರ್ಶನದಲ್ಲಿ 1,300 ರೂಬಿಕ್ಸ್ ಕ್ಯೂಬ್ ನಲ್ಲಿ ಕಲಾಕೃತಿಯೊಂದನ್ನುರಚಿಸಿದರು. ವಿಶಿಷ್ಟ ಸಾಧನೆಗೆ ಪ್ರಥಮ ಬಹುಮಾನದೊಂದಿಗೆ 5ಲಕ್ಷ ಬಹುಮಾನವನ್ನು ಗೆದ್ದಿರುವ ಹೆಗ್ಗಳಿಕೆ ಇವರದ್ದಾಗಿದೆ. ಮಾರ್ಚ್ 2021ರಂದು ನಡೆದ ರೆಡ್ ಎಫ್ ಎಮ್ ಹಾಗು ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನಡೆಸಿದ ಟ್ಯಾಲೆಂಟ್ ಅನ್ ಲಾಕ್ಡ್ಆನ್ಲೈನ್ ಸ್ಪರ್ಧೆಯಲ್ಲಿ ಭಾರತದಾದ್ಯಂತ 56,000 ಸ್ಪರ್ಧಿಗಳು ಭಾಗವಹಿಸಿದ್ದು ಇದರಲ್ಲಿ ಮಹೇಶ್ 1,300 ಕ್ಕೂ ಹೆಚ್ಚು ರೂಬಿಕ್ಸ್ಕ್ಯೂಬ್ ನಲ್ಲಿ ಇರ್ಫಾನ್ ಖಾನ್ ರವರ ಭಾವಚಿತ್ರ ರಚಿಸಿ ಪ್ರಥಮ ಬಹುಮಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ತನ್ನ ವಿಶೇಷ ಪ್ರತಿಭೆಯನ್ನು ಕೇವಲ ತನಗೆ ಮಾತ್ರ ಸೀಮಿತಗೊಳಿಸದೆ ಅನೇಕ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ರೂಬಿಕ್ಸ್ ಕ್ಯೂಬ್ತರಬೇತಿಯನ್ನು, ಕಾರ್ಯಗಾರವನ್ನು ಮಾಡುತ್ತಿದ್ದಾರೆ. ಇಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುವ ಜೊತೆಗೆ ಜೀವನ ಪಾಠವನ್ನುಹೇಳುವುದು ಇವರ ವಿಶೇಷತೆಯಾಗಿದೆ.

ನಟನೆ, ಫೋಟೋಗ್ರಫಿ, ಹಾಡುಗಾರಿಕೆ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ತಮ್ಮ ರೂಬಿಕ್ಸ್ ಕ್ಯೂಬ್ ಮತ್ತು ಮೊಸೈಕ್ ಆರ್ಟ್ಎರಡು ಕಲೆಯನ್ನು ಸೇರಿಸಿ ಗಿನ್ನಿಸ್ ರೆಕಾರ್ಡ್ ಮಾಡುವ ಕನಸನ್ನು ಹೊಂದಿದ್ದಾರೆ. ಸತತ ಪರಿಶ್ರಮ, ಪ್ರಯತ್ನದೊಂದಿಗಿನ ಇವರ ಉತ್ಸಾಹಿ ಹೆಜ್ಜೆಗಳು ಯಶಸ್ಸನ್ನು ಪಡೆಯಲಿ.

✍️ನಳಿನಿ ಎಸ್ ಸುವರ್ಣ

ಆಳ್ವಾಸ್ ಕಾಲೇಜು ಮೂಡುಬಿದಿರೆ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »