ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ಇದರ ವತಿಯಿಂದ, ಸಂಕ್ರಾಂತಿ ಸಂಭ್ರಮ ದ ಜೊತೆ ಗೆಸಂಸ್ಥೆ ಯಿಂದ ನಡೆದ ತುಳಸಿ ಕಟ್ಟೆಯೊಂದಿಗೆ ಗೃಹಿಣಿ ಛಾಯಚಿತ್ರ ಸ್ಪರ್ಧೆ ಯ ವಿಜೇತರಿಗೆ ಬಹುಮಾನ ವಿತರಣೆ, ಶ್ರೀಶೈಲ ಪ್ರೊಡಕ್ಷನ್ಅರ್ಪಿಸುವ ಸ್ವರ ಸಿಂಚನ ಸ್ಪರ್ಧೆ ಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಆಟೋಟಗಳನ್ನುನಡೆಸಿ, ಮಹಿಳೆ ಯರಿಗೆ ಸಂಕ್ರಾಂತಿ ಸಂಭ್ರಮದಲ್ಲಿ ಸಂಪ್ರದಾಯದಂತೆ ಹೂವು, ಅರಶಿನ, ಕುಂಕುಮ ಹಚ್ಚಿ ಮಹಿಳೆ ಯರ ಮನದಲ್ಲಿನಗು ಮೂಡಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿಶುಸಂರಕ್ಷಣಾಧಿಕಾರಿ ಶ್ರೀಮತಿ ಗಾಯತ್ರಿ ಕಂಬಳಿ ನೆರವೇರಿಸಿವಾತ್ಸಲ್ಯಮಯಿ ಸಂಸ್ಥೆ 8 ವರ್ಷಗಳಿಂದ ಬಹಳ ಉತ್ತಮ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರುತ್ತಿದ್ದು, ಸಂಸ್ಥೆಯ ಸೇವೆಶ್ಲಾಘನೀಯ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ, ಮಹಿಳಾ ಸಂರಕ್ಷಣಾಧಿಕಾರಿ ಶ್ರೀಮತಿ ಭಾರತಿ ಬೇಬಿ ಕುಂದರ್,ಜೇಸಿ ಐ ಜೋಡುಮಾರ್ಗ ನೇತ್ರಾವತಿ ಯ ಕಾರ್ಯದರ್ಶಿ
ಶ್ರೀಮತಿ ಮಲ್ಲಿಕಾ ಆಳ್ವಾ , ಸಂಸ್ಥೆಯ ಟ್ರಸ್ಟಿ ಅನ್ನಪೂರ್ಣ ಬಾಬುರಾಜ್ಉಪಸ್ಥಿತರಿದ್ದರು. ಸಂಸ್ಥೆ ಯ ಸಂಸ್ಥಾಪಕರು ಶ್ರೀಮತಿ ಶೈಲಜಾ ರಾಜೇಶ್ ಸ್ವಾಗತಿಸಿ ಸ್ಪರ್ಧಿಗಳಿಗೆ ಶುಭಹಾರೈಸಿ ಈ ರೀತಿಯ ಸ್ಪರ್ಧೆನಡೆಸುವುದರಿಂದ, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ದೊರಕುವುದರ ಜೊತೆಗೆ ಪರಸ್ಪರ ಸ್ನೇಹ ಬಾಂಧವ್ಯಗಳು ಹೆಚ್ಚುತ್ತದೆ ಎಂದುಹೇಳಿದರು. ಕಾರ್ಯಕ್ರಮ ದ ನಿರೂಪಣೆಯನ್ನು ನಾಗರಾಜ್ ರವರು ನಡೆಸಿಕೊಟ್ಟರು.