ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಮನವಿ ನೀಡಿದ ಕರಾವಳಿ ಶಾಸಕರುಗಳ ಪ್ರಯತ್ನ ಶ್ಲಾಘನೀಯ”
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರ ವೀರರಾದ ಕೋಟಿ ಚೆನ್ನಯರ* ಹೆಸರನ್ನಿಡಬೇಕೆಂದು ಕರಾವಳಿಯ ಶಾಸಕರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮಾನ್ಯ ಮುಖ್ಯಮಂತ್ರಿಗೆ ಮನವಿ ನೀಡಿರುವುದು ಅಭಿನಂದನಾರ್ಹ ಸಂಗತಿ.ಸಮಸ್ತ ಸಮಾಜದ ಸಮಂಜಸವಾದ ಬೇಡಿಕೆಯನ್ನು ಈಡೇರಿಸುವ ಕುರಿತಾದ ಜನಪ್ರತಿನಿಧಿಗಳ ನಿರ್ಧಾರ ಮೆಚ್ಚುವಂತದ್ದು.ಈ ಪ್ರಯತ್ನವು ಮುಂದುವರಿಯಲಿ.ಕೋಟಿ ಚೆನ್ನಯರ ಹೆಸರು ನೋಂದಣಿಯಾಗುವವರೆಗೂ ಇಚ್ಚಾಶಕ್ತಿಯಿಂದ ಜನಪ್ರತಿನಿಧಿಗಳಲ್ಲಿ ಒಮ್ಮತದ ಬದ್ದತೆಯಿರಲಿ ಎಂದು ಬಯಸುತ್ತೇವೆ.ಹಲವಾರು ಸಂಘಟನೆಗಳ ಬೇಡಿಕೆಯನ್ನು ಪರಿಗಣಿಸಿ ಕೋಟಿಚೆನ್ನಯರ ಹೆಸರೇ ಹೆಚ್ಚು ಸೂಕ್ತವೆನಿಸಿದ್ದು ಸಾರ್ವಕಾಲಿಕ ಸತ್ಯಕ್ಕೆ ಸಂದ ಅತಿಶ್ರೇಷ್ಠ ಗೌರವವಾಗಿದೆ.
ಇಂತಹ ಒಳ್ಳೆಯ ನಡೆಗೆ ಸದಾ ನಮ್ಮ ಸಹಮತವಿದೆ.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಮತ್ತು ಸರ್ವಸದಸ್ಯರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ)