ಮಂಗಳೂರು: ಸಾವಿರಾರು ಜನರ ಸಮ್ಮುಖದಲ್ಲಿ ಮಂದಸ್ಮಿತ,ವೀಣಾವಾಣೆ ಶಾರಾದಾ ಮಾತೆ ಯ ಮೂರ್ತಿಯನ್ನು ದೇವಳದ ಪುಷ್ಕರಣಿ ಯಲ್ಲಿ ವಿಸರ್ಜನೆ ಮಾಡುವ ಮೂಲಕ ಮಂಗಳೂರು ದಸರಾ ವೈಭದಿಂದ ಸಂಪನ್ನಗೊಂಡಿದೆ.
ಸಾಕಷ್ಟು ನಿರ್ಬಂಧಗಳ ಹಾಕಿ ಬಹಳ ವಿಬೃಂಜನೆಯಿಂದ ಆಚರಣೆಯಾಯಿತು, ಮಂಗಳೂರು ದಸರಾ ಲಕ್ಷಾಂತರ ಪ್ರವಾಸಿಗರೊಂದಿಗೆ ಅದ್ಧೂರಿಯಾಗಿಯೇ ನಡೆದಿದೆ.
ಶುಕ್ರವಾರದಂದು ದಸರಾದ ಕೊನೆಯ ದಿನದ ಅಂಗವಾಗಿ ಕ್ಷೇತ್ರದ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಸುಮಾರು 14 ಹುಲಿ ವೇಷ ತಂಡಗಳು ಶಾರದಾ ಮಾತೆಯ ಸೇವೆಯಾನುಸಾರವಾಗಿ ಹುಲಿಕುಣಿತ ಮಾಡಿದ್ದು, ನೆರೆದಿದ್ದ ಸಾವಿರಾರು ಜನರನ್ನು ರಂಜಿಸಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಮೆರವಣಿಗೆ ಸ್ಥಗಿತಗೊಳಿಸಿ, ನವದುರ್ಗೆಯರ ಮೂರ್ತಿಯನ್ನು ದೇವಳಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಆಮೇಲೆ ವಿಸರ್ಜನೆ ಮಾಡಲಾಗುತ್ತಿದೆ.
ಹತ್ತು ದಿನಗಳ ಕಾಲ ದಸರಾ ವೈಭವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಲಕ್ಷಾಂತರ ಜನ ಸಾಕ್ಷಿಯಾಗಿದ್ದಾರೆ. ಮಾಜಿ ಕೇಂದ್ರ ಸಚಿವ, ಹಿರಿಯ ಮತ್ಸದ್ಧಿ, ಬಿ. ಜನಾರ್ದನ ಪೂಜಾರಿ ಮಂಗಳೂರು ದಸರಾದ ರೂವಾರಿಯಾಗಿದ್ದು, ಇಳಿ ವಯಸ್ಸಿನಲ್ಲೂ ದಸರಾ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದಸರಾ ಉತ್ಸವಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಈ ಬಾರಿ ನಮ್ಮ ದಸರಾ- ನಮ್ಮ ಸುರಕ್ಷತೆ ಎಂಬ ಧ್ಯೇಯವಾಕ್ಯದಡಿ ವೈಭವದ ದಸರಾ ನಡೆದಿದೆ.