ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ತುಳುವೆರೆ ಜಾಲ್ ತಂಡದ ಸಹಭಾಗಿತ್ವ ದಲ್ಲಿ ಮಂಗಳೂರು ಪಂಜಿಮೊಗರು ಉರುಂದಾಡಿ ಗುಡ್ಡೆಯ ನಿವಾಸಿ ನವೀನ್ ಇವರ ಮಗಳು ಶ್ರೇಯ ಕಳೆದ ಹಲವಾರು ವರ್ಷಗಳಿಂದ ಕಾಲು ನೋವು ಮತ್ತು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದು ಹಾಗೂ ಪ್ರಸ್ತುತ ಸಾಲಿನ S.S.L.C.ಪರೀಕ್ಷೆ ಯಲ್ಲಿ 557 ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಲಾಗಿದ್ದಾಳೆ. ಈ ನಿಟ್ಟಿನಲ್ಲಿ ಇವಳ ಮುಂದಿನ ವಿದ್ಯಾಭ್ಯಾಸ ನೆರವಿಗೆ 10,000 ರೂಗಳನ್ನು 19.08.2020 ಈ ದಿನ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವಾನ್ವಿತ ಚಾವಡಿ ಯ ಹರೀಶ್ ಶಾಂತಿ ಪುತ್ತೂರು, ಅಧ್ಯಕ್ಷೆ ನಳಿನಿ ಬಿ. ಸಿ.ರೋಡ್,ಕಾರ್ಯದರ್ಶಿ ವಿಜಯ್ ಕುಮಾರ್ ಆಮ್ಟಾಡಿ ನಿಸ್ವಾರ್ಥ ಸೇವಾ ಮಾಣಿಕ್ಯ ಶಿವು ಕುಮಾರ್ ಪುತ್ತೂರು, ಬಲಿಷ್ಠ ಬಿಲ್ಲವೆರ್ ತಂಡದ ಸಂಪತ್ ಪೂಜಾರಿ ಕುಕ್ಕೆಡಿ, ಬಿರುವೆರ್ ಕುಡ್ಲ ಬಜ್ಪೆ ಘಟಕದ ಉಪಾಧ್ಯಕ್ಷ ರಾದ ಚಂದ್ರ ಪೂಜಾರಿ ಪೆರಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.