ಡಾ. ಸದಾನಂದ ಪೂಜಾರಿಯವರಿಗೆ ಸಾಧನಾ ಶ್ರೀ ಪ್ರಶಸ್ತಿ
ಮಂಗಳೂರು: ಮಂಗಳೂರಿನ ಜನಪ್ರಿಯ ವೈದ್ಯ, ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞ ಡಾ. ಸದಾನಂದಪೂಜಾರಿಯವರು’ ಸಾಧನಾ ಶ್ರೀ ‘ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನವೆಂಬರ್ 2 ರಂದು ಸಂಜೆ 7 ಗಂಟೆಗೆ ಬೆಳ್ತಂಗಡಿ ನಾರಾಯಣ ಗುರು ಮಂದಿರದಲ್ಲಿ ನಡೆಯಲಿರುವ ಬೆಳ್ತಂಗಡಿ ಜೇಸಿಐಯ ಜೇಸಿಸಪ್ತಾಹದಲ್ಲಿ ಮಾಜಿ ಸಚಿವ ಕೆ. ವಸಂತ ಬಂಗೇರ ಮೊದಲಾದ ಗಣ್ಯರ ಸಮ್ಮುಖದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ನಿಸ್ವಾರ್ಥಮತ್ತು ಅನನ್ಯ ಸೇವೆಗಾಗಿ ಡಾ. ಸದಾನಂದ ಪೂಜಾರಿಯವರಿಗೆ ಸಾಧನಾ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.