ಪಠ್ಯ ಸೇರ್ಪಡೆಗೆ ಶಿಕ್ಷಣ ಸಚಿವರ ಮನವೊಲಿಸಿದ ಸಚಿವ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ಕಟೀಲ್ ಅವರಿಗೆ ಕೃತಜ್ಞತೆಗಳು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ಪ್ರತಿಕ್ರಿಯಿಸಿದ್ದಾರೆ.
ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯಭಾಗವನ್ನು ಸಮಾಜ ವಿಜ್ಞಾನದಲ್ಲೇ ಮರು ಸೇರ್ಪಡೆಗೆಆದೇಶಿಸುವಂತೆ ಶಿಕ್ಷಣ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹವಾಗಿದೆ
ಪಠ್ಯ ಸೇರ್ಪಡೆಗೆ ಶಿಕ್ಷಣ ಸಚಿವರ ಮನವೊಲಿಸಿದ ಸಚಿವ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಅವರಿಗೆ ಕೃತಜ್ಞತೆಗಳು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ ಪ್ರತಿಕ್ರಿಯಿಸಿದ್ದಾರೆ.
ಆದಷ್ಟು ಶೀಘ್ರದಲ್ಲೇ ರಾಜ್ಯ ಸರಕಾರ ಈ ಬಗ್ಗೆ ಆದೇಶ ಹೊರಡಿಸಬೇಕು. ಅಧಿಕೃತ ಆದೇಶವಾದ ಕೂಡಲೇ ಈಗಾಗಲೇ ಕರೆನೀಡಲಾದ ಪ್ರತಿಭಟನಾ ಸಭೆಯನ್ನು ಕೈಬಿಡುವ ಬಗ್ಗೆ ನಿರ್ಧರಿಸಲಾಗುವುದು.
ಗುರುಗಳ ಪಠ್ಯ ವಿಚಾರದಲ್ಲಿ ಸತ್ಯಾಂಶವನ್ನು ಸಮಾಜದ ಮುಂದಿಟ್ಟ ಮಾಧ್ಯಮಗಳಿಗೆ, ಸಮಾಜವಿಜ್ಞಾನದಲ್ಲಿಮರುಸೇರ್ಪಡೆಗೊಳಿಸಲು ಒತ್ತಾಯಿಸಿದ ಗುರುಗಳ ಅನುಯಾಯಿಗಳಿಗೆ, ಹೋರಾಟ ಬೆಂಬಲಿಸಿದ ಸಮಾಜದ ಸಂಘಟನೆಗಳು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಹಾಗೂ ಗಾಳಿ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಸಮಸ್ತ ಸಮಾಜ ಬಾಂಧವರಿಗೆ ಹೃದಯಪೂರ್ವಕ ಧನ್ಯವಾದಗಳು.
ಇದೊಂದು ಸಂಘರ್ಷ ರಹಿತ ಹೋರಾಟಕ್ಕೆ ಸಂದ ಜಯ. ಮುಂದೆಯೂ ಗುರುಗಳ ತತ್ವದಂತೆ ಅನ್ಯಾಯದ ವಿರುದ್ಧ ಯಾವುದೇರಾಜಕೀಯ, ಸಂಘರ್ಷ ಇಲ್ಲದೆ ಹೋರಾಡೋಣ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.