ಗುರುವಾರದಿಂದ ಪ್ರಪಂಚದಾದ್ಯಂತ ಜೇಮ್ಸ್ ಚಿತ್ರದ ಜಾತ್ರೆ ನಡೆಯಲಿದೆ.ನಟ ಪುನೀತ್ ರಾಜ್ ಕುಮಾರರ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಈ ಚಿತ್ರದ ಬಿಡುಗಡೆ ದಿನ ಕನ್ನಡ ನಾಡಿಗೆ ಜಾತ್ರೆಯಾಗಿ ಪರಿಣಮಿಸಿದೆ. ಈ ಜಾತ್ರೆಗಿಂತ ಮೊದಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ ಸ್ತಬ್ಧಚಿತ್ರಗಳ ಜೊತೆಗೆ ಯುವಕರ ಮರವಣಿಗೆ ಸುದ್ದಿ ಮಾಡಿದೆ.
ಮಂಗಳವಾರ ರಾತ್ರಿಯಿಂದ ಪ್ರಾರಂಭವಾದ ದಕ್ಷಿಣ ಭಾರತದ ದೊಡ್ಡ ಜಾತ್ರೆ ಶಿರಸಿ ಮಾರಿ ಜಾತ್ರೆಯ ಮೆರವಣಿಗೆಯೇ ವಿಶೇಶ. ಈ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಮೆರವಣಿಗೆಯೇ ನಡೆಯುತ್ತದೆ. ಈ ವರ್ಷದ ಬುಧವಾರದ ಮುಂಜಾನೆಯ ಮಾರಿಕಾಂಬಾ ರಥಾಗಮನ ಸಂದರ್ಭದಲ್ಲಿ ಹಿಂದಿನಂತೆ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಆಕರ್ಷಣೆಗಳಿದ್ದವು. ಇವುಗಳೊಂದಿಗೆ ಈ ಬಾರಿ ಇಲ್ಲಿಯ ಯುವಕರು ರಥ ಮೆರವಣಿಗೆಯಲ್ಲಿ ಪುನೀತ್ ರಾಜ್ ಕುಮಾರ ವೈಶಿಷ್ಟ್ಯ ನೆನಪಿಸುವ ಮೆರವಣಿಗೆಯೊಂದಿಗೆ ಡೊಳ್ಳಿನ ಕುಣಿತ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ಪುನೀತ್ ರಾಜ್ ಕುಮಾರ್ ಬ್ಯಾನರ್ಗಳು, ಪೋಸ್ಟರ್ ಗಳೊಂದಿಗೆ ಡೊಳ್ಳು ಹೊಡೆದು ಸಿಳ್ಳೆ ಹಾಕಿದರು. ಜಾತ್ರೆಯಲ್ಲಿ ನಟನೊಬ್ಬನ ಆರಾಧನೆ, ಪುನೀತ್ ಸ್ಮರಣೆಗಾಗಿ ಬಾವುಟ,ಸ್ತಬ್ಧಚಿತ್ರ ಪ್ರದರ್ಶನ ಮಾಡಿ ಅಪ್ಪು ನೆನಪು ಚಿರಸ್ಥಾಯಿಯಾಗುವಂತೆ ಮಾಡಿದ್ದು ವಿಶೇ ಶವೆನಿಸಿತು.
ಇದರೊಂದಿಗೆ ಈ ವರ್ಷ ಬ್ರಹ್ಮಶ್ರೀ ನಾರಾಯಣ ಗುರುಗಳ ನೆನಪಿಗೆ ಹಳದಿ ಬಾವುಟ ಹಾರಿಸಿದ್ದೂ ವಿಶೇಶವೆನಿಸಿತು.
ರಾಜ್ಯದಾದ್ಯಂತ ನಾರಾಯಣ ಗುರುಗಳ ನೆನಪು, ಸ್ಮರಣೆ ಚಿಂತನೆಗಳ ಪ್ರಸಾರದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಹಳದಿ ಶಾಲಿನೊಂದಿಗೆ ಡೊಳ್ಳುಹೊಡೆದು ಹಳದಿ ಬಾವುಟ ಹಾರಿಸಿದ್ದು ಜನಾಕರ್ಷಣೆ ಎನಿಸಿತು. ಸಂಪ್ರದಾಯ, ಚಾರಿತ್ರಿಕ ಆಚರಣೆಗಳ ವೈಶಿಷ್ಟ್ಯದ ಜೊತೆಗೆ ಮಾರಿಜಾತ್ರೆಯ ತೇರಿನಲ್ಲಿ ಕಾಣಿಸಿಕೊಂಡ ಅಪ್ಪು ಅಭಿಮಾನಿಗಳು, ನಾರಾಯಣಗುರು ಅನುಯಾಯಿಗಳು ಈ ವರ್ಷದ ಜಾತ್ರಾ ಮೆರವಣಿಗೆ ಸೊಗಸು ಹೆಚ್ಚಿಸಿದರು. ಶಿರಸಿ ಪೇಟೆಯಿಡಿ ತುಂಬಿದ್ದ ಜನರ ಮಧ್ಯೆ ಮಾರಿಕಾಂಬಾ ರಥದ ಜೊತೆಗೆ ಡೊಳ್ಳಿನೊಂದಿಗೆ ಹೆಜ್ಜೆಹಾಕಿದ ಪುನೀತ್ ಅಭಿಮಾನಿಗಳು, ನಾರಾಯಣಗುರುಗಳ ಬಿ.ಎಸ್. ಎನ್.ಡಿ.ಪಿ.ಹಳದಿ ವಸ್ತ್ರ ಜನಾಕರ್ಷಣೆಯ ಕೇಂದ್ರವೆನಿಸಿದವು.ಜೊತೆಗೆ ರಾಜ್ಯದಾದ್ಯಂತ ನಾರಾಯಣ ಗುರುಗಳ[Narayana Guru] ನೆನಪು, ಸ್ಮರಣೆ ಚಿಂತನೆಗಳ ಪ್ರಸಾರದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳ ಪ್ರಮುಖರಾದ ಲೋಹಿತ್ ನಾಯಕ, ಜಗದೀಶ ನಾಯ್ಕ, ಪ್ರಭು ಸಾಲರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘು ಬೆಳಲೆ, ಹರೀಶ್ ನಾಯ್ಕ, ಪ್ರದೀಪ ನಾಯ್ಕ, ವಕೀಲರಾದ ಮಂಜುನಾಥ್, ಕನ್ನಡ ಪರ ಯುವ ಹೋರಾಟಗಾರರಾದ ಮಹೇಶ್, ನಾಗರಾಜ ಶೆಟ್ಟಿ, ನಾಮಧಾರಿ ಬಿಲ್ಲವ ಸಂಘದ ಮುಖಂಡರಾದ ಶೇಖರ್ ಪೂಜಾರಿ ಮುಂತಾದವರು ಭಾಗವಹಿಸಿದ್ದರು.