TOP STORIES:

FOLLOW US

ಶ್ರೀಯುತ ಗೋಪಾಲಕೃಷ್ಣ ಕುಂದರ್ ಬಜಪೆ ಇವರಿಗೆ ನವಕರ್ನಾಟಕ ರತ್ನ- 2022 ಗೌರವ ಪಶಸ್ತಿ ಪ್ರದಾನ


ಕನ್ನಡ ಭಾಷೆ ಅಳಿಯುವ ಭೀತಿ ಇದೆ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಆತಂಕದಆವಶ್ಯಕತೆಯಿಲ್ಲ. ಎರಡೂವರೆ ಸಾವಿರ ಇತಿಹಾಸವಿರುವ ಕನ್ನಡ ಭಾಷೆಯ ಬೇರುಗಳು ಗಟ್ಟಿಯಾಗಿವೆ. ಅದು ಎಂತಹಬಿರುಗಾಳಿಯನ್ನು ತಡೆದುಕೊಳ್ಳಬಲ್ಲದು, ಕಾಲಕಾಲಕ್ಕೆ ಒಂದಷ್ಟು ಬದಲಾವಣೆ ಯನ್ನು ಕಾಣಬಹುದಷ್ಟೆ ಭಾಷೆ ಗಟ್ಟಿಯಾಗಲು ಅದರಅವಶ್ಯಕತೆ ಇರುತ್ತದೆ. ಸಾಹಿತ್ಯ ರಚನೆ ಭಾಷೆಗೆ ಪುನಶ್ವೇತನ ನೀಡುವ ಮಾಧ್ಯಮ. ಕನ್ನಡದಲ್ಲಿ ಸಾಹಿತ್ಯ ರಚನೆ ಆಗಾದಪ್ರಮಾಣದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದು ಕನ್ನಡದ ಅಸ್ತಿತ್ವವನ್ನು ಮತ್ತಷ್ಟು ಬಲಿಷ್ಠ ವಾಗಿ ಸಾಗುತ್ತಿದೆ ಎಂದು .. ಜಿಲ್ಲಾಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್‌.ಕೆ. ಅಭಿಪ್ರಾಯ ಪಟ್ಟರು.

ಮಂಗಳೂರಿನ ಕುದ್ಮಲ್ ರಂಗರಾವ್ ಸಭಾಂಗಣ ದಲ್ಲಿ ನಡೆದ ಹೃದಯವಾಹಿನಿ ಮಂಗಳೂರು ಮತ್ತು ಲಯನ್ಸ್ ಕ್ಲಬ್, ಸ್ಮಾರ್ಟ್ ಸಿಟಿಮಂಗಳೂರು:ಜಂಟಿ ಆಶ್ರಯದಲ್ಲಿ

ಮಂಗಳೂರು ಪುರಭವನದಲ್ಲಿ

ಜರುಗಿದ 16ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಾಲ್ಕು ಕೃತಿಗಳನ್ನುಲೋಕಾರ್ಪಣೆಗೊಳಿಸಿ ಕೃಷ್ಣಮೂರ್ತಿ ಅಭಿಜಾಯಪಟ್ಟರು.

ಸಮ್ಮೇಳನಾಧ್ಯಕ್ಷ ಡಾ. ಸತೀಶ್ ಕುಮಾರ್ ಹೊಸಮನಿ ಮಾತನಾಡಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಆಧುನಿಕರಣಗೊಂಡಿದೆ. ಡಿಜಿಟಲ್ ಗ್ರಂಥಾಲಯದ ಮಾದರಿ ಯನ್ನು ಇತರ ರಾಜ್ಯಗಳು ಅನುಸರಿಸಬೇಕು ಎಂದು ಕೇಂದ್ರ ಸರ್ಕಾರದಮಾರ್ಗಸೂಚಿ ಇದೆ. ಇದು ನಮಗೆ ರಾಷ್ಟ್ರಮಟ್ಟದಲ್ಲಿ ದೊರೆತ ಶ್ರೇಷ್ಠ ಗೌರವವಾಗಿದೆ ಎಂದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣಪುನರೂರು ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್ ಬೋಳೂರು ಮುಂತಾದ ಗಣ್ಯರು ಭಾಗವಹಿಸಿದ್ದಾರೆ.

ಸಾರ್ವಜನಿಕ ಕ್ಷೇತ್ರದಲ್ಲಿ, ಅಪರಾಧ ಮುಕ್ತ ಸಮಾಜದ ನಿರ್ಮಾಣ ಪರಿಕಲ್ಪನೆಯ ಬಗ್ಗೆ ಪಾಠ ಮಾಡುತ್ತಿರುವ

ಶ್ರೀಯುತ ಗೋಪಾಲಕೃಷ್ಣ ಕುಂದರ್ ಬಜಪೆ  ಇವರಿಗೆ ನವಕರ್ನಾಟಕ ರತ್ನ– 2022 ಗೌರವ ಪಶಸ್ತಿ ಪ್ರದಾನ ಮಾಡಲಾಯಿತು.

ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಸ್ವಾಗತಿಸಿದರು.  ಪ್ರಿಯಾ ಮೊಂತೇರೊ ಕಾರ್ಯಕ್ರಮನಿರೂಪಿಸಿದರು. ಜಿ.ಕೆ. ಹರಿಪ್ರಸಾದ್ ಧನ್ಯವಾದ ಅರ್ಪಿಸಿದರು


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »