ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿಚಿಂತಾಜನಕವಾಗಿದ್ದು,ಈಗಾಗಲೇ ಭಾರತ ಅನೇಕ ರೀತಿಯಲ್ಲಿ ಸಹಾಯಕ್ಕೆನಿಂತಿದೆ.
ಇದೀಗ ಕೇರಳದ ತ್ರಿವೇಂಡ್ರಂ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳು ಶ್ರೀಲಂಕಾಕ್ಕೆ ಹೋಗುತ್ತಿದ್ದ 120ಕ್ಕಿಂತಲೂ ಹೆಚ್ಚು ವಿಮಾನಗಳಿಗೆತಾಂತ್ರಿಕ ಲ್ಯಾಂಡಿಂಗ್ ಮಾಡಲು ಅನುಮತಿಸಿವೆ.
ಅದಿಕಾರಿಗಳ ಈ ನಿರ್ಧಾರಕ್ಕೆ ಕೇಂದ್ರ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶ್ಲಾಘಿಸಿದ್ದಾರೆ. ಈ ಸಹಾಯವುನೆರೆರಾಷ್ಟ್ರದೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುತ್ತದೆ ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.