ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಬಂಡಿ ಉತ್ಸವದಲ್ಲಿ ಟಾ ಲಿವುಡ್ ನಟ ಸುಮನ್ ತಲ್ವಾರ್.
ಮಂಗಳೂರು ಹೃದಯ ಭಾಗದಲ್ಲಿರುವ ಅತ್ತಾವರದ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಬಂಡಿ ಉತ್ಸವದಲ್ಲಿ ದಕ್ಷಿಣ ದ ಪ್ರಸಿದ್ದ ಬಹು ಭಾಷಾ ನಟ, ಟಾಲಿವುಡ್ ಸ್ಟಾರ್ ಸುಮನ್ ತಲ್ವಾರ್ ಭಾಗವಹಿಸಿದರು.
ಮೂಲತ: ಮಂಗಳೂರು ಅತ್ತಾವರ ಗ್ರಾಮದರಾದ ಸುಮನ್ ತಲ್ವಾರ್ ವಿದ್ಯಾಭ್ಯಾಸ ಚೆನ್ನೈ ನಲ್ಲಿ ನಡೆಸಿ, ವೃತ್ತಿ ಜೀವನವನ್ನು ಹೈದರಾಬಾದ್ ನಲ್ಲಿ ಪ್ರಾರಂಭಿಸಿ, ಪ್ರಸಿದ್ದಿ ಯನ್ನು ಪಡೆದಿದ್ದಾರೆ. ಸರಳ ಸಜ್ಜನಿಕೆಯ ಸುಮನ್ ತಲ್ವಾರ್ ಅಪಾರ ದೈವ ಭಕ್ತರು.ತನ್ನ ಮೂಲ ಗ್ರಾಮವಾದ ಅತ್ತಾವರ ಬಂಡಿ ಉತ್ಸವವನ್ನು ನೋಡಿ ದೈವಗಳ ಕೃಪೆಗೆ ಪಾತ್ರ ರಾದರು. ತನ್ನ ಎರಡು ದಿನಗಳ ಕಾರ್ಯಕ್ರಮದಲ್ಲಿ ಶ್ರದ್ದೆ ಯಿಂದ ವೈದ್ಯನಾಥ ದೈವದ ಅರ್ಧ ಬಂಡಿಯನ್ನು ಸಾರ್ವಜನಿಕ ರೊಂದಿಗೆ ಸೇರಿ ಬಂಡಿ ಎಳೆದು ಭಕ್ತಿಯ ಸೇವೆಯನ್ನು ಸಲ್ಲಿಸಿದರು.
ಸುಮನ್ ತಲ್ವಾರ್. ಸುಮಾರ್ ಐನ್ನೂರಕ್ಕು ಹೆಚ್ಚು ಸಿನಿಮಾ ದಲ್ಲಿ ನಟಿಸಿದ ಸುಮನ್ ತಲ್ವಾರ್ ಅಪ್ಪಟ ತುಳು ಭಾಷಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ದೈವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶ್ರೀ ವಿದ್ಯಾಧರ್, ಶ್ರೀ ಪ್ರದೀಪ್ ಕುಮಾರ್, ಸಂದೀಪ್ ಕುಮಾರ್, ವೈನಾ ಸಾರಂಗದರ, ತ್ರಿವೇದ್ ರಾಜ್,ಪ್ರಶಾಂತ್ ಕುಮಾರ್, ಪ್ರವೀಷ್ ಕುಮಾರ್,ಸಾಮಾಜಿಕ ಕಾರ್ಯಕರ್ತ ರಾಜರತ್ನ ಸನಿಲ್, ಫಿಶೇರೀಸ್ ಡೆಪ್ಯುಟಿ ಡೈರೆಕ್ಟರ್ ಶ್ರೀ ಹರೀಶ್, ಬಿಲ್ಲವ ಮುಖಂಡ ಚಂದ್ರಹಾಸ್ ಸುವರ್ಣ ಮತ್ತಿತರರು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.