ಮಂಗಳೂರು ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದಲ್ಲಿ ವಿಜೃಂಭಣೆ ಯಿಂದ ವಾರ್ಷಿಕ ಬಂಡಿ ಜಾತ್ರೆ ಯಲ್ಲಿ ದಿನ ನಿತ್ಯಭಕ್ತರಿಗೆ ಅನ್ನದಾನ ನೀಡಲಾಗುತ್ತಿದೆ. ಪ್ರತಿನಿತ್ಯ ಸುಮಾರು ಐದು ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ಅನ್ನದಾನ ಸೇವೆ ನೀಡಲಾಯಿತು. ಇಂದು ಬಿಲ್ಲವ ಸಂಘ ಮಂಗಳಾದೇವಿಯ ಖಾಯಂ ಸದಸ್ಯ ಶ್ರೀಮತಿ ಮತ್ತು ಶ್ರೀ ರೋಹಿದಾಸ್ ಮತ್ತು ಕುಟುಂಬ,ಮಾಲಕರು ದಾಸ್ಡೆಕೋರೇಟರ್ಸ್ ಮಂಗಳಾದೇವಿ ಇವರ ಸೇವಾರ್ಥ ಅನ್ನದಾನ ಸೇವೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಅನ್ನದಾನವನ್ನುಯಶಸ್ವಿಗೊಳಿಸುವಲ್ಲಿ ಸಹಕರಿಸಿದ ಅಡುಗೆ ತಯಾರಿಕ ವರ್ಗಕ್ಕೆ ಸನ್ಮಾನಿಸಲಾಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತುದುರ್ಗಾ ವಾಹಿನಿ ಅತ್ತಾವರ ಶಾಖೆ, ಏನ್. ವಿ. ಫ್ರೆಂಡ್ಸ್ ಅತ್ತಾವರ,ಇವರೂ ಕೂಡ ಅನ್ನದಾನ ಸೇವಾ ರೂಪದಲ್ಲಿ ಭಕ್ತರಿಗೆಸಮಾರ್ಪಿಸಿದರು. .ದೈವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶ್ರೀ ವಿದ್ಯಾಧರ್, ಶ್ರೀ ಪ್ರದೀಪ್ ಕುಮಾರ್, ಸಂದೀಪ್ಕುಮಾರ್, ವೈನಾ ಸಾರಂಗದರ, ತ್ರಿವೇದ್ ರಾಜ್,ಪ್ರಶಾಂತ್ ಕುಮಾರ್, ಪ್ರವೀಷ್ ಕುಮಾರ್,N.V. ಫ್ರೆಂಡ್ಸ್ ನ ಅಕ್ಷಿತ್, ಅನಿಲ್, ಅಖಿಲ್,ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಅತ್ತಾವರದ ಗಿರೀಶ್, ಸಂತೋಷ್ ಮತ್ತಿತರರು ಭಾಗವಹಿಸಿದರು