ಪುತ್ತೂರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನ್ ಬಿತ್ತಿಲ್ ನಲ್ಲಿ ಭಾನುವಾರದಂದು ಬೆಳಿಗ್ಗೆಬಿಲ್ಲವ ಸಮುದಾಯದ ಯುವ ಉದ್ಯಮಿ ಹಾಗೂ ಗೆಜ್ಜೆಗಿರಿ ನಂದನ್ ಬಿತ್ತಿಲಿನ ಪ್ರಸಾದ ತಯಾರಿಕ ಘಟಕದ ಸಂಚಾಲಕರಾಗಿಕಳೆದೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಪ್ರವೀಣ್ ನೆಟ್ಟಾರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮನಡೆಯಿತುಈ ಸಂದರ್ಭದಲ್ಲಿ ಆರ್ಯ ಈಡಿಗ ಸಂಸ್ಥಾನ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ ಪ್ರವೀಣ ನೆಟ್ಟಾರುಅನೇಕ ಸಂಘ ಸಂಸ್ಥೆ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಕೆಲಸ–ಕಾರ್ಯಗಳ ಮಾಡುತ್ತಿದ್ದರು ಅವರ ಆತ್ಮಕ್ಕೆಭಗವಂತ ಸದ್ಗತಿಯನ್ನು ಕರುಣಿಸಲಿ ಅವರ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಹೇಳಿದರು. ಗೆಜ್ಜೆಗಿರಿ
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪಿತಾಂಬರ ಹೇರಾಜೆ ಮಾತನಾಡಿ ಪ್ರವೀಣ್ ಒಬ್ಬ ಉತ್ಯುತ್ತಮ ವ್ಯಕ್ತಿ, ಎಲ್ಲರೊಂದಿಗೆ ಬೆರೆತು ಯುವಜನರನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದರು ಅವರ ಆಕಸ್ಮಿಕ ಅಗಲುವಿಕೆಯು ನಮ್ಮ ಸಮಾಜಕ್ಕೆ ತುಂಬಲಾರದನಷ್ಟವಾಗಿದೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ಮತ್ತು ಜಯಂತ್ ನಡುಬೈಲು, ಪ್ರಧಾನ ಕಾರ್ಯದರ್ಶಿಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯದರ್ಶಿ ಚಂದ್ರಹಾಸ ಉಚ್ಚಿಲ್, ಜನಾರ್ಧನ ಪೂಜಾರಿಪಡುಮಲೆ, ಗೋಪಿನಾಥ್ ಬಗಂಬಿಲ, ಗಣೇಶ್ ಗಂಜಿಮಠ, ಧನಂಜಯ ಮಟ್ಟು, ಸದಾನಂದ ಪೂಜಾರಿ ಬರಿಮಾರ್, ದೀಪಕ್ಸಜಿಪ, ಪುರುಷೋತ್ತಮ ಕುಪ್ಪೆಪದವು, ಶಶಿಧರ್ ಕಿನ್ನಿಮಜಲು, ಭಾಸ್ಕರ ಸಾಲಿಯಾನ್ ಮುಂಬೈ, ಸೂರ್ಯಕಾಂತ ಸುವರ್ಣಮುಂಬೈ, ಚಂದ್ರಕಾಂತ ಶಾಂತಿವನ, ನಾರಾಯಣ ಮಚ್ಚಿನ ಮುಂತಾದವರು ಉಪಸ್ಥಿತರಿದ್ದರು.