ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಚೌಕಿ ಪೂಜೆಯ ದೇವರ ಬೆಳ್ಳಿಯ ಎರಡು ಕಿರೀಟ ಮತ್ತು ಬೆಳ್ಳಿಯ ಸುದರ್ಶನ ಚಕ್ರದ ಸಂಪೂರ್ಣ ವೆಚ್ಚ ಶ್ರೀ ಕೆ. ಚಿತ್ತರಂಜನ್ ಗರೋಡಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುಲೋಚನ ಅಮ್ಮ ಅವರ ಭಕ್ತಿಯ ಸೇವೆ
ತಾನು ಸಂಪಾದಿಸಿರುವ ಮುಕ್ಕಾಲು ಭಾಗವನ್ನು ಶೈಕ್ಷಣಿಕವಾಗಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ, ಸಮಾಜಕ್ಕೆ ಅರ್ಪಿಸಿ ರುವ ಕಲಿಯುಗದ ಮಹಾ ಧಾನಶೂರೆಂದೆ ಪ್ರಖ್ಯಾತಿಯನ್ನು ಪಡೆದವರು ಶ್ರೀ ಕೆ. ಚಿತ್ತರಂಜನ್ ಗರೋಡಿ. ಶ್ರೀಯುತರು ದೇಯಿ ಬೈದೆತಿ-ಕೋಟಿ-ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಅಡಿಪಾಯದ ರೂವಾರಿ ಗಳು.
ಮಂಗಳೂರಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ಪ್ರಸಿದ್ಧ ಕಾರಣಿಕದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ.. ತುಳುನಾಡಿನ ಅದೆಷ್ಟೋ ಗರಡಿ ಕ್ಷೇತ್ರ, ದೈವ-ದೇವಸ್ಥಾನಗಳ ಅಭಿವೃದ್ಧಿಯ ರೂವಾರಿ ಗಳು ಮಾತ್ರವಲ್ಲದೇ ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿ, ಕೊಡುಗೈ ಧಾನಿಗಳಾಗಿ ಅನೇಕ ಸಮಾಜಸೇವೆಯಲ್ಲಿ ಪಾಲ್ಗೊಂಡು, ಅದೆಷ್ಟೋ ಜನರ ಮತ್ತು ಸಮಾಜದ ಬಗ್ಗೆ ಕಾಳಜಿ ಹಾಗು ಅವರ ಸಮಸ್ಯೆಯಯನ್ನು ಬಗೆಹರಿಸಲು ಸದಕಾಲ ಶ್ರಮಿಸಿರುವ ಶ್ರೀಯುತರ ಸಾಧನೆ ತುಂಬಾ ಮೆಚ್ಚುವಂತದ್ದು. ಪ್ರಸ್ತುತ ಶ್ರೀ ಆದಿ ಧೂಮಾವತಿ, ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಗೌರವ ಸಲಹೆಗಾರರಾಗಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಾ, ಗೆಜ್ಜೆಗಿರಿ ಕ್ಷೇತ್ರದ ಪುನರುತ್ಥಾನಕ್ಕೆ ನೀಡಿರುವ ಸೇವೆಯನ್ನೂ ಸ್ಮರಿಸುತ್ತ ಶ್ರೀಯುತರಿಗೆ ಇನ್ನಷ್ಟು ಕಾಲ ಸರ್ವರ ಹಾರೈಕೆಗಳೊಂದಿಗೆ ಆಯುರಾರೋಗ್ಯ ಸುಖ, ಶಾಂತಿ ನೆಮ್ಮದಿಯ ಜೀವನವನ್ನು ಆ ಭಗವಂತನು ಹಾಗು ಕ್ಷೇತ್ರದ ಶಕ್ತಿಗಳು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಗೆಜ್ಜೆಗಿರಿ ಮತ್ತು ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಪರವಾಗಿ ಧನ್ಯವಾದಗಳು.