TOP STORIES:

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ವೈವಿಧ್ಯ ಹೂವುಗಳಿಂದ ಸರ್ವಾಲಂಕಾರಗೊಂಡ ಯಾಗಮಂಡಲ ಎಲ್ಲರನ್ನೂ ಆಕರ್ಷಿಸುತ್ತಿತ್ತು.


ಮಂಗಳೂರು: ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಗರಡಿ ಸಂಭ್ರಮ -150 ನಮ್ಮೂರ ಸಂಭ್ರಮ ಅಂಗವಾಗಿಶನಿವಾರ ಸಹಸ್ರ ನಾರಿಕೇಳ ಗಣಯಾಗ ನಡೆಯಿತು.

ವೇದಮೂರ್ತಿ ಕೆ. ವಾಸುದೇವ ಶಾಂತಿಯವರ ಉಪಸ್ಥಿತಿಯಲ್ಲಿ ಬಿ. ಗಂಗಾಧ ಶಾಂತಿ ನೇತೃತ್ವದಲ್ಲಿ ನಾರಾಯಣಗುರು ವೈದಿಕ ಸಮಿತಿಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಗರಡಿ ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಯಾಗ ಮಂಟಪದಲ್ಲಿಬೆಳಗ್ಗೆ 5.00ರಿಂದ ಸಹಸ್ರ ನಾರಿಕೇಳ ಗಣಯಾಗ ಶಾಂತಿ ಋತ್ವಿಜರ ಉಪಸ್ಥಿತಿಯಲ್ಲಿ ಆರಂಭವಾಯಿತು. ಮಧ್ಯಾಹ್ನ ವೇಳೆಗಣಯಾಗದ ಪೂರ್ಣಾಹುತಿ ನಡೆಯಿತು. ನೂರಾರು ಮಂದಿ ಶಾಂತಿ ಋತ್ವಿಜರು, ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ನಾನಾ ಬಗೆಯ ಗೊಂಡೆ, ಹೂವು, ಹಿಂಗಾರ ಸೇರಿದಂತೆ ವೈವಿಧ್ಯ ಹೂವುಗಳಿಂದ ಸರ್ವಾಲಂಕಾರಗೊಂಡ ಯಾಗಮಂಡಲ ಎಲ್ಲರನ್ನೂಆಕರ್ಷಿಸುತ್ತಿತ್ತು.

ಸಂದರ್ಭ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಲತಿ ಜೆ. ಪೂಜಾರಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕವೇದವ್ಯಾಸ ಕಾಮತ್, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಗರಡಿ ಸಂಭ್ರಮದ ಅಧ್ಯಕ್ಷ ಮೋಹನ್ ಉಜ್ಜೋಡಿ, ಮ್ಯಾನೇಜರ್ ಜೆ. ಕಿಶೋರ್, ಗರಡಿ ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, . ವಾಮನ, ಬಿ. ದಾಮೋದರ ನಿಸರ್ಗ, ದಿವರಾಜ್, ಜಗದೀಪ್ ಡಿ. ಸುವರ್ಣ, ದಿನೇಶ್ ಅಂಚನ್, ಜೆ. ವಿಜಯ, ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ, ಸಂದೀಪ್ ಗರಡಿ, ಆರ್ಥಿಕ ಸಮಿತಿ ಮುಖ್ಯಸ್ಥ ಶರಣ್ ಪಂಪ್‌ವೆಲ್ ಉಪಸ್ಥಿತರಿದ್ದರು.


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »