ಸಂಗೀತ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಎಂತಹ ಕಟು ಮನಸ್ಸನ್ನು ಕೂಡ ಮಂತ್ರ ಮುಗ್ದವಾಗಿಸುವ ಶಕ್ತಿ ಇದೆ. ಹೀಗೆ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಪುಟಾಣಿ ಪ್ರತಿಭೆ ತನ್ವಿ ಅಮೀನ್
ಉಡುಪಿ ಕೊಡವೂರಿನ ಗಣೇಶ ಮತ್ತು ತ್ರಿವೇಣಿ ಗಣೇಶ್ ದಂಪತಿಗಳ ಮುದ್ದಿನ ಮಗಳು ಇವರಿಗೆ ಸಿಂಗಿಂಗ್, ಗಿಟಾರ್ ನುಡಿಸುವುದು, ಆಕ್ಟಿಂಗ್ ಹೀಗೆ ಅನೇಕ ಹವ್ಯಾಸ ಇವರಿಗೆ ಇದೆ
ಮೂಲತಃ ಉಡುಪಿಯವರಾದ ಇವರು ಪ್ರಸ್ತುತ ಬೆಹರೈನ್ ನಲ್ಲಿ ಇದ್ದು ಅಲ್ಲಿಯೂ ತನ್ನ ಪ್ರತಿಭೇನ ಬೆಳೆಸುತ್ತಿದ್ದಾರೆ.
*ಒಂದರಿಂದ ನಾಲ್ಕನೇ ತರಗತಿವರೆಗೆ ಕಟಪಾಡಿಯ ಎಸ್ ವಿ ಕೆ ಇಂಗ್ಲಿಷ್ ಮೀಡಿಯಂನಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ತಂದೆ ತಾಯಿ ಜೊತೆ ಹೊರದೇಶ ದಲ್ಲಿ ಮುಂದಿನ ಶಿಕ್ಷಣ ಆರಂಭಿಸಿದರು ಈಗ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸಣ್ಣ ಪ್ರಾಯದಲ್ಲಿ ಹಾಡುವುದು ರೂಡಿ ಮಾಡಿಕೊಂಡ ಇವರಿಗೆ ಸಂಗೀತ ಎಂದರೆ ಪಂಚ ಪ್ರಾಣ. ಬಹುಭಾಷೆಯ ಗಾಯಕಿ ಹಿಂದಿ, ತುಳು, ಕನ್ನಡ, ಇಂಗ್ಲಿಷ್ ಹೀಗೆ ಎಲ್ಲಾ ಭಾಷೆಯಲ್ಲಿಯೂ ಹಾಡಿ ಸೈ ಎಣಿಸಿಕೊಂಡಿದ್ದಾರೆ.
ಹೊರದೇಶದಲ್ಲಿ ಬಿಲ್ಲವ ಸಂಘ, ಕನ್ನಡ ಸಂಘ, ಹೀಗೆಯೇ ಅನೇಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನಲ್ಲೂ ಪ್ರತಿಭೆ ಇದೆ ಎಂದು ತೋರಿಸಿದ್ದಾರೆ. ಕೇವಲ ಹಾಡುಗಾರ್ತಿ ಮಾತ್ರ ಅಲ್ಲ ಅನೇಕ ವೇದಿಕೆಯಲ್ಲಿ ಡ್ಯಾನ್ಸ್ ಪ್ರೋಗ್ರಾಮ್ ನೀಡಿದ್ದಾರೆ ಮತ್ತು ನಟನೆಯಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಡಿಸೆಂಬರ್ ನಲ್ಲಿ ನಡೆದ ಒಂದು ಕಾರ್ಯ ಕ್ರಮ ಒಟ್ರಾಸಿ ಮಂಡೆ ಬೆಚ್ಚ ನಾಟಕದಲ್ಲಿ ನಾಯಕಿ ಪಾತ್ರ ಮಾಡಿ ಜನ ಮನ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾದರು.
ಇವರ ಈ ಸಾಧನೆ ತನ್ನ ಪರಿಶ್ರಮ ಮತ್ತು ತಂದೆ ತಾಯಿಯ ಪ್ರೋತ್ಸಹದಿಂದ ಸಂಗೀತ ವಿದ್ಯಾಭ್ಯಾಸಮಾಡಿ ಫೇಸ್ಬುಕ್ ಲೈವ್ ಪ್ರೋಗ್ರಾಮ್ ನೀಡಿ ಜನರನ್ನು ರಂಜಿಸುತ್ತಿದ್ದಾರೆ. ಇವರು ಭಾಗವಹಿಸಿದ ಹೆಚ್ಚಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರ ದೊರಕಿದೆ. ಇವರ ತಾಯಿ ಗಾಯಕಿ, ಕವನ, ಸಾಹಿತ್ಯಗಾರ ಆಗಿರುವುದರಿಂದ ತಾಯಿಯ ಸಪೋರ್ಟ್ ಸಂಪೂರ್ಣ ಸಿಕ್ಕಿತ್ತು ತನ್ವಿ ಅಮೀನ್ ಇನ್ಸ್ಟ ಗ್ರಾಮ್, ತನ್ವಿ ಅಮೀನ್ ಫೇಸ್ಬುಕ್ ಪೇಜ್, ತನ್ವಿ ಮ್ಯೂಸಿಕ್ ಯುಟ್ಯೂಬ್ ಚಾನಲ್ ನಂತಹ ಸೋಶಿಯಲ್ ಮೀಡಿಯಾದಲ್ಲಿ ತನ್ನ ಪ್ರತಿಭೇನ ತೋರಿಸುತ್ತಿದ್ದಾರೆ ಸದ್ಯಕ್ಕೆ ಇವರು ಹಾಡಿರುವ ನ್ಯಾಯದೂತೆ ಕಾರ್ಣಿಕದ ಅಜ್ಜೆ ಸಾಂಗ್ ಬಿಡುಗಡೆಯಾಗಲಿದೆ. ಗಾಂಧಿ ಜಯಂತಿ ದಿನ ಹಾಡಿದ ಸಾಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಿಂದಿ ಮೂವತ್ತು, ಕನ್ನಡ 15, ತುಳು 20, ಇಂಗ್ಲಿಷ್ ಸಾಂಗ್ 10, ಭಕ್ತಿಗೀತೆ 15 ಹೀಗೆ ಒಟ್ಟು ಟೋಟಲ್ 90 ಸಾಂಗ್ ಹಾಡಿರುವ ಹೆಗ್ಗಳಿಕೆ ಇವರದು.
ಇಷ್ಟು ಸಣ್ಣ ಪ್ರಾಯದಲ್ಲಿ ಇಷ್ಟೊಂದು ಸಾಧನೆ ಮಾಡಿರುವ ಇವರಿಗೆ ಮುಂದಿನ ಹಾದಿ ಸುಗಮವಾಗಲಿ ತುಳುನಾಡಿನ ಹೆಸರನ್ನು ಹೊರದೇಶದಲ್ಲಿಯೂ ಬೆಳೆಸಿದ ಇವರಿಗೆ ದೈವ ದೇವರುಗಳ ಅನುಗ್ರಹ ಸದಾ ಇರಲಿ ಎಂದು ಹಾರೈಸುವ.
ಬರಹ: ಪ್ರಶಾಂತ್ ಅಂಚನ್ ಮಸ್ಕತ್ತ್