ಸರಕಾರಿ ಅಧಿಕಾರಿಯೋರ್ವರನ್ನು ವೈಯಕ್ತಿಕ ಧ್ವೇಷಕ್ಕೆ ಅಮಾನತು ಮಾಡಿ, ಸಂಬಳ ನೀಡದೇ ಸತಾಯಿಸುತ್ತಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಪುತ್ತೂರು ಉಪ ವಲಯ ಸಂರಕ್ಷಣಾಧಿಕಾರಿ ಸಂಜೀವ ಪೂಜಾರಿ ಅವರನ್ನು ಹಿರಿಯ ಅಧಿಕಾರಿಗಳು ಸರಿಯಾದ ಕಾರಣವಿಲ್ಲದೇ ಅಮಾನತು ಮಾಡಿದ್ದರು. ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿ ಅಧಿಕಾರಿ ಸಂಜೀವ್ ರಾಜ್ಯ ಆಡಳಿತ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧೀಕರಣವು ಪುತ್ತೂರು ಉಪ ವಲಯಾಧಿಕಾರಿ ಪರವಾಗಿ ತೀರ್ಪು ನೀಡಿತ್ತು.ಆದಾಗ್ಯೂ, ಹಿರಿಯ ಅಧಿಕಾರಿಗಳು ಸಂಬಳ ನೀಡಿದೇ ಮತ್ತೆ ಸತಾಯಿಸುತ್ತಿದ್ದಾರೆ. ಈ ಮೂಲಕ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ನನಗೆ ಮೇಲಾಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ವೈಯಕ್ತಿಕ ಧ್ವೇಷದಿಂದಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಸಂಜೀವ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ