ಮಂಡ್ಯ: ಜಿಲ್ಲೆಯ ಗಾಂಧೀ ಭವನದಲ್ಲಿ ಡಿ 18 ರಂದು ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯ ಕವಿಗೋಷ್ಠಿ ಹಾಗೂ ಕಡಲು ಪುಸ್ತಕ ಬಿಡುಗಡೆ, ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ಮಂಗಳೂರಿನ ಯುವ ಕವಯಿತ್ರಿ ರಶ್ಮಿ ಸನಿಲ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಂದು ವರ್ಷದಲ್ಲಿ ಸತತವಾಗಿ 3 ರಾಜ್ಯ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಪ್ರಶಸ್ತಿ ಮುಡಿಗೆರಿಸಿಕೊಂಡಿದ್ದು ಮಂಗಳೂರಿಗೆ ಕೀರ್ತಿ ತಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಪೋತೆರ ಮಹಾದೇವು ಹಾಗೂ ಮುಖ್ಯ ಅತಿಥಿಗಳಾದ ನಾಗರತ್ನಮ್ಮ,ಹುಲಿಯೂರು ದುರ್ಗ ಲಕ್ಷೀ ನಾರಾಯಣ್,ಡಾ ಶಿವಕುಮಾರ್ ಗೌಡ, ಹೆಚ್ ಆರ್ ಅರವಿಂದ್,ಗುರುಪ್ರಸಾದ್ ವೇದಿಕೆ ಹಂಚಿಕೊಂಡರು.