ಸನ್ಮಾನ್ಯ ಶಾಸಕರಾದ ಉಮಾನಾಥ ಕೋಟ್ಯಾನ್‌ರವರಿಂದ ಶ್ಲಾಘನೀಯ ಪ್ರಯತ್ನ
ನಾವೆಲ್ಲ ಅಭಿಮಾನಪಟ್ಟುಕೊಳ್ಳುವ ಕಾರ್ಯಕ್ಕೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಮುಂದಾಗಿದ್ದಾರೆ.ಅಮರ ವೀರರಾದ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡುವಂತೆ ವಿಧಾನಸೌಧ ದಲ್ಲಿ ಒತ್ತಾಯಿಸಿದ್ದಾರೆ.ಇವರ ಧ್ವನಿಗೆ ಇನ್ನಷ್ಟು ಜನಪ್ರತಿನಿಧಿಗಳು ಧ್ವನಿಗೂಡಿಸಲಿ.ಸಮಾಜಾಭಿಮಾನ ಮತ್ತು ಇಚ್ಚಾಶಕ್ತಿಯ ರಾಜಕಾರಣಕ್ಕೆ ಉಮಾನಾಥ ಕೋಟ್ಯಾನ್ ಆದರ್ಶಪ್ರಾಯರೆನಿಸಿದ್ದಾರೆ.
ಇಂತಹ ಸಮಾಜಪರ ಸ್ವಾಭಿಮಾನದ ನಿಲುವುಗಳನ್ನು ಪಕ್ಷಬೇಧವಿಲ್ಲದೆ ಬೆಂಬಲಿಸೋಣ.ರಾಜಕೀಯ ನಡೆಯಲ್ಲಿ ಉಮಾನಾಥ ಕೋಟ್ಯಾನ್ ರವರ ಇಂತಹ ಒಳ್ಳೆಯ ನಿಲುವನ್ನು ಉಡುಪಿ ಜಿಲ್ಲಾ ಯುವ ವೇದಿಕೆಯು ಸದಾ ಬೆಂಬಲಿಸುತ್ತದೆ.ಶ್ರೀಯುತರಿಗೆ ಗೌರವಪೂರ್ವಕ ಶುಭಾಶಯಗಳು.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಮತ್ತು ಸರ್ವಸದಸ್ಯರು,
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)