*ತಾನು ತನ್ನದು ಎನ್ನುವ ಈ ಕಾಲದಲ್ಲಿ ಪರರ ಕಷ್ಟಕ್ಕೆ ಸ್ಪಂದಿಸುವ ಹೃದಯ ತನ್ನಿಂದ ಏನಾದರೂ ಸಮಾಜಕ್ಕೆ, ಸಮಾಜದ ಏಳಿಗೆಗೆ ದುಡಿಯುವ ಯುವ ಸೇವಾ ಸೇನಾನಿ ರಮಾನಂದ್ ಕಟೀಲ್.
*ದಕ್ಷಿಣ ಕನ್ನಡ ಜಿಲ್ಲೆಯ ಕಟೀಲ್ ದುರ್ಗಾ ನಗರದ ನಾರಾಯಣ ಪೂಜಾರಿ ಮತ್ತು ಸುಮತಿ ಪೂಜಾರಿ ಇವರ ಮಗ*
*ಸಣ್ಣ ವಯಸ್ಸಿಗೆ ತಾನು ಸಮಾಜ ಸೇವೆ ಮಾಡಬೇಕು ಬಡವರ ಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಬೇಕು ಎನ್ನುವ ಆಸೆಯಂತೆ ಅನೇಕ ಬಡವರ ಪಾಲಿಗೆ ಆಶಾ ಕಿರಣವಾದವರು
*ಶ್ರೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಾಲೆ ಎಕ್ಕಾರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಗಿಸಿ ವೃತ್ತಿ ಶಿಕ್ಷಣ ಐ ಟಿ ಐ ಯನ್ನು ಕಿನ್ನಿಗೋಳಿ* *ಕೆ. ಐ. ಟಿ. ಸಿ ಮತ್ತು ಎಮ್. ಸಿ. ಟಿ. ಸಿ ತಾಂತ್ರಿಕ ವಿದ್ಯಾಭ್ಯಾಸ ಕೇಂದ್ರದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದರು
*ಕೇವಲ ಸಮಾಜ ಸೇವೆ ಅಲ್ಲ ಇವರಲ್ಲೂ ಪ್ರತಿಭೆ ಇದೆ ಯಕ್ಷಗಾನ, ನಾಟಕ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳು ಬಂದಿವೆ*
*ವಿಜಯಾಂಜನೇಯ ವ್ಯಾಯಾಮ ಶಾಲೆ ಕಟೀಲ್, ಬಿರ್ವೆರ್ ಕುಡ್ಲ ಬಜ್ಪೆ ಘಟಕ, ರಾಮ್ ಸೇನಾ ಕೇಸರಿ ಕಟೀಲ್, ಕಟೀಲ್ ರಾಮ್ ಫ್ರಂಡ್ಸ್ (ಕಟೀಲ್) ಗೆಳೆಯರ ಬಳಗ ಕಟೀಲ್, ಚೇತನ ಯುವ ಜನ ಸೇವಾ ಸಮಿತಿ, ಹೀಗೆ ಅನೇಕ ಸೇವಾ ಸಂಸ್ಥೆಗಳ ಕಾರ್ಯ ಕ್ರಮದಲ್ಲಿ ಭಾಗಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.*