ಯಾವುದೇ ಪ್ರತಿಫಲ ಬಯಸದೆ ಸಮಾಜದ ಹಿತಕ್ಕಾಗಿ ತನ್ನ ಕೈಲಾದಷ್ಟು ಸೇವೆ ಮಾಡುವ ಸೇವಾ ಮಾಣಿಕ್ಯ,ಉಡುಪಿ ಜಿಲ್ಲಾ ಅಧ್ಯಕ್ಷರು ಮತ್ತು ವೃತ್ತಿಯಲ್ಲಿ ನ್ಯಾಯವಾದಿ ಆಗಿರುವ ಸರಳ ಸಜ್ಜನ ವ್ಯಕ್ತಿತ್ವ ಪ್ರವೀಣ್ ಎಮ್. ಪೂಜಾರಿ ಯವರು.
ಮಲ್ಪೆ ಕೊಡವೂರಿನ ಮೋಹನ್ ಪೂಜಾರಿ ಮತ್ತು ಅಪ್ಪಿ ಇವರ ಮಗ, ಪ್ರಾಥಮಿಕ ಶಿಕ್ಷಣವನ್ನು ಮಲ್ಪೆಯಲ್ಲಿ ಪಿ. ಯು.ಸಿ ಯನ್ನು ಬೋರ್ಡ್ ಹೈಸ್ಕೂಲ್ ಉಡುಪಿ ಯಲ್ಲಿ ಬಿ. ಎ ಡಿಗ್ರಿ ಪಿಪಿಸಿ ಯಲ್ಲಿ ಮತ್ತು ಎಲ್.ಎಲ್. ಬಿ ಯನ್ನು ಬಾಳಿಗ ಲಾ ಕಾಲೇಜ್ ಕುಂಜಿಬೆಟ್ಟಲ್ಲಿ ಮುಗಿಸಿದ ಇವರು ಈಗ ನ್ಯಾಯವಾದಿವಾಗಿ ಸೇವೆಯನ್ನು ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯ ಬಿಲ್ಲವ ವೇದಿಕೆಯ ಜಿಲ್ಲಾ ಅಧ್ಯಕ್ಷರು ಆಗಿರುವ ಇವರು, ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗರೋಡಿ ಗುರಿಕಾರ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು.
ವೃತ್ತಿಯಲ್ಲಿ ನ್ಯಾಯವಾದಿ ಆಗಿರುವ ಇವರು ಜಾತಿ – ಭೇದ ಇಲ್ಲದೆ ನ್ಯಾಯದ ಪರವಾಗಿ ಇದ್ದು ನ್ಯಾಯ ದೊರಕಿಸಿ ಕೊಟ್ಟಿದ್ದಾರೆ, ಅನೇಕ ಅಸಹಾಯಕರ ಪರವಾಗಿ ಉಚಿತವಾಗಿ ವಕಾಲತ್ತು ಮಾಡಿ ಅನ್ಯಾಯ ಆಗದಂತೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ.
ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾ ಮಾಣಿಕ್ಯ ಇವರು ದೀನ ದಲಿತರ ಸೇವೆ ಮಾಡುವುದು ಮತ್ತು ಅಪಾರ ಸಂಖ್ಯೆಯ ಗೆಳೆಯರ ಬಳಗವನ್ನು ಹೊಂದಿರುವ ಸ್ನೇಹ ಜೀವಿ.
ಬಿಲ್ಲವ ಮಹಾ ಸಮಾವೇಶವಾಗಲು ಮೂಲ ಕಾರಣ ಆದವರು ಇದೆ ಪ್ರವೀಣ್ ಪೂಜಾರಿ , ಇವರ ಬಗ್ಗೆ ತುಂಬ ಹೆಮ್ಮೆ ಇದೆ. ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಚಿರಋಣಿ.
ನಮ್ಮ ಸಮಾಜದ ಹೆಮ್ಮೆಯ ನ್ಯಾಯವಾದಿ ಪ್ರವೀಣ್ ಎಮ್. ಪೂಜಾರಿ ಹೀಗೆ ಇವರ ಸೇವೆ ಮುಂದುವರಿಯಲಿ.
Billavaswarriors.com