ಸಮಾಜಸೇವಕ,ಬಿಲ್ಲವ ಸಮಾಜದ ಬಂಧು ಬಾರ್ಕೂರು ಶಂಕರ ಶಾಂತಿಯ ಮೇಲಾದ ಮಾರಣಾಂತಿಕ ಹಲ್ಲೆ ಖಂಡನೀಯ.ಈ ದುಷ್ಕೃತ್ಯವೆಸಗಿದ ಎಲ್ಲಾ ಆರೋಪಿಗಳಿಗೂ ಶಿಕ್ಷೆಯಾಗಲಿ.
ತನ್ನ ಊರಿನಲ್ಲಿ ಜನಸಾಮಾನ್ಯರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ ಕಾನೂನು,ನಿಯಮಪಾಲನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶಂಕರ ಶಾಂತಿಯವರಿಗೆ ದಿನಾಂಕ; 21-02-2021,ಆದಿತ್ಯವಾರದಂದು ಮನೆಯ ಸಮೀಪ ಒಂದು ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ,ಚಿತ್ರ ಹಿಂಸೆ ನೀಡಿ ಹಲ್ಲೆ ನಡೆಸಲಾಗಿದೆ.
ಅದೇ ಸಮಯ ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಶಂಕರ ಶಾಂತಿಯವರ ಹೆಂಡತಿಯು ರಕ್ತದ ಮಡುವಿನಲ್ಲಿದ್ದ ತನ್ನ ಗಂಡನನ್ನು ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿದ್ದಾರೆ.RTI ಕಾರ್ಯಕರ್ತನಾಗಿ ಸಾಮಾಜಿಕ ನೆಲೆಯಲ್ಲಿ ತನ್ನ ಊರಿನಲ್ಲಿ ಹಾಗೂ ಸುತ್ತಮುತ್ತ ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದವರು ಶಂಕರ ಶಾಂತಿ.ರಸ್ತೆ ಸಾರಿಗೆ ಸುರಕ್ಷತೆ ವಿಷಯ,ಕಾಂಕ್ರೀಟ್ ರಸ್ತೆ ಕಳಪೆ ವಿಷಯ,ಬಾರ್ಕೂರು ಜೈನ ಬಸದಿ ಆಕ್ರಮಣ ತೆರವು,ಹೊಸಾಳ ಗರಡಿಯಲ್ಲಿ ವೈದಿಕನೋರ್ವನ ಅನಾಚಾರ ಪ್ರಶ್ನಿಸುವಿಕೆ,
ಇಂತಹದ್ದೆ ಅನೇಕ ಜನಪರ ಸೇವೆಗಳಲ್ಲಿ ಮುಂಚೂಣಿಯ ಪ್ರಯತ್ನ ನಿಸ್ವಾರ್ಥದಿಂದ ಶ್ರೀಯುತರಿಂದ ನಡೆಯುತ್ತಿತ್ತು.ರಸ್ತೆ ಬದಿ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ಕ್ರಮಕೈಗೊಂಡಿದ್ದರಿಂದ ದುಷ್ಕರ್ಮಿಗಳಾದ ಪ್ರವೀಣ ಆಚಾರ್ಯ,ಪ್ರಸಾದ್ ಆಚಾರ್ಯ,ಶಾಂತರಾಮ ಶೆಟ್ಟಿ,ಮಂಜಪ್ಪ ಪೂಜಾರಿ,ದಿವಾಕರ ಒಟ್ಟು ಸೇರಿ ಕಬ್ಬಿಣದ ರಾಡ್‌ನಿಂದ ಕೊಲೆಯತ್ನ ನಡೆಸಿರುವುದು ಅತ್ಯಂತ ಕೀಳುಮಟ್ಟದ ಮನುಷ್ಯತ್ವವಿಲ್ಲದ ವರ್ತನೆಯಾಗಿದೆ.ಇದರಲ್ಲಿ ನಮ್ಮ ಸಮಾಜದ ಮಂಜಪ್ಪ ಪೂಜಾರಿ ಸೇರಿದ್ದು ,ಸ್ವಾರ್ಥ ಸಾಧನೆಯಿಂದ ತಪ್ಪು ಯಾರೇ ಮಾಡಿರಲಿ ಅದಕ್ಕೆ ಶಿಕ್ಷೆಯಾಗಲಿ ಎನ್ನುವುದೇ ನಮ್ಮ ಇರಾದೆ. ತಪ್ಪುಗಳನ್ನು, ಸಾರ್ವಜನಿಕ ಅನ್ಯಾಯಗಳನ್ನು ಪ್ರಶ್ನಿಸಿದಾಕ್ಷಣ ಕೊಲೆ ಮಾಡುವ ಮಟ್ಟಕ್ಕೆ ತಲುಪಿರುವುದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೆ ಸರಿ.
ಇದೀಗ ಅಗರ್ಭ ಶ್ರೀಮಂತಿಕೆಯ ಮತ್ತು ರಾಜಕೀಯ ಪ್ರಭಾವ ಬಳಸಿ ತಪ್ಪಿತಸ್ಥರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.ಇವರನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸುವಂತೆ ಅಗ್ರಹಿಸುತ್ತೇವೆ.ಇಂತಹ ಸಮಾಜ ದ್ರೋಹಿ ಕೆಲಸಮಾಡುವವರನ್ನು ಸುಮ್ಮನೆ ಬಿಟ್ಟರೆ ಮುಂದೆ ಇನ್ನಷ್ಟು ಲೋಕಕಂಠಕರಾಗಿ ಅದೆಷ್ಟೋ ಪಾಪದವರ ಮನೆ ಹಾಳುಮಾಡಲು ಹಿಂಜರಿಯುವುದಿಲ್ಲ.
ಪೋಲಿಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಶಂಕರ ಶಾಂತಿಗೆ ನ್ಯಾಯ ಒದಗಿಸಬೇಕು ಮತ್ತು ಎಲ್ಲಾ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇವೆ.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಹಾಗೂ ಸರ್ವ ಸದಸ್ಯರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)